ರಜನಿಕಾಂತ್ ನಟನೆಯ ಆ ಸಿನಿಮಾದ ಕಲೆಕ್ಷನ್ ರೆಕಾರ್ಡ್ ಧೂಳೀಪಟ ಮಾಡಿದ ವೀರ ಧೀರ ಶೂರನ್!
ವಿಕ್ರಮ್ ಅಭಿನಯದ ವೀರ ಧೀರ ಶೂರನ್ ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಅವರ ಲೈಫ್ ಟೈಮ್ ಕಲೆಕ್ಷನ್ ರೆಕಾರ್ಡ್ ಅನ್ನು ನಾಲ್ಕೇ ದಿನಗಳಲ್ಲಿ ಮುರಿದಿದೆ.
ವಿಕ್ರಮ್ ಅಭಿನಯದ ವೀರ ಧೀರ ಶೂರನ್ ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಅವರ ಲೈಫ್ ಟೈಮ್ ಕಲೆಕ್ಷನ್ ರೆಕಾರ್ಡ್ ಅನ್ನು ನಾಲ್ಕೇ ದಿನಗಳಲ್ಲಿ ಮುರಿದಿದೆ.
ತಮಿಳು ಸಿನಿಮಾದಲ್ಲಿ ಒಳ್ಳೆ ನಟನಾಗಿ ಮಿಂಚುತ್ತಿರುವವರು ವಿಕ್ರಮ್. ಇವರು ಯಾವ ರೋಲ್ ಕೊಟ್ಟರೂ ಅದರಲ್ಲಿ ತಮ್ಮ 100% ಶ್ರಮ ಹಾಕಿ ನಟಿಸುತ್ತಾರೆ. ಆದರೆ ಇವರಿಗೆ ಕಳೆದ 10 ವರ್ಷಗಳಿಂದ ಸೋಲೋ ಹೀರೋ ಆಗಿ ಮಿಂಚಲು ಸಾಧ್ಯವಾಗಲಿಲ್ಲ. ನಡುವೆ ಮಣಿರತ್ನಂ ನಿರ್ದೇಶಿಸಿದ ಮಲ್ಟಿ ಸ್ಟಾರ್ ಸಿನಿಮಾವಾದ ಪೊನ್ನಿಯಿನ್ ಸೆಲ್ವನ್‌ನಲ್ಲಿ ನಟಿಸಿ ಗೆಲುವು ಕಂಡರು. ಆದರೆ ಇದರ ನಂತರ ಅವರು ನಟಿಸಿದ ಕೋಬ್ರಾ, ತಂಗಲಾನ್ ಚಿತ್ರಗಳು ಸೋಲನ್ನು ಅನುಭವಿಸಿದವು.
ಕಮ್‌ಬ್ಯಾಕ್ ಕೊಟ್ಟ ವಿಕ್ರಮ್
ವಿಕ್ರಮ್ ಯಾವಾಗ ಕಮ್‌ಬ್ಯಾಕ್ ಕೊಡ್ತಾರೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ವೀರ ಧೀರ ಶೂರನ್ ಭಾಗ 2 ಸಿನಿಮಾ ಮೂಲಕ ಒಳ್ಳೆ ಕಮ್‌ಬ್ಯಾಕ್ ಕೊಟ್ಟಿದ್ದಾರೆ ವಿಕ್ರಮ್. ಈ ಸಿನಿಮಾವನ್ನು ಸಿದ್ದಾ ಸಿನಿಮಾ ನಿರ್ದೇಶಕ ಎಸ್.ಯು.ಅರುಣ್ ಕುಮಾರ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಟ ವಿಕ್ರಮ್‌ಗೆ ಜೋಡಿಯಾಗಿ ಕಲೈವಾಣಿ ಅನ್ನೋ ಪಾತ್ರದಲ್ಲಿ ನಟಿ ತುಷಾರಾ ವಿಜಯನ್, ವಿಲನ್ ಆಗಿ ಎಸ್.ಜೆ.ಸೂರ್ಯ ನಟಿಸಿದ್ದಾರೆ. ಜೊತೆಗೆ ಸೂರಜ್ ವೆಂಜರಮೂಡು, ಪೃಥ್ವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಲೆಕ್ಷನ್ ಬೇಟೆ ಆಡ್ತಿರೋ ವೀರ ಧೀರ ಶೂರನ್
ವೀರ ಧೀರ ಶೂರನ್ ಸಿನಿಮಾಗೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಎರಡನೇ ಭಾಗವನ್ನು ಮೊದಲು ರಿಲೀಸ್ ಮಾಡಿರುವ ಚಿತ್ರತಂಡ, ಮೊದಲ ಭಾಗವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾ ಮೊದಲ ದಿನ ಸ್ವಲ್ಪ ಲೇಟಾಗಿ ರಿಲೀಸ್ ಆದ್ರೂ, ಪಾಸಿಟಿವ್ ವಿಮರ್ಶೆಗಳು ಸಿಕ್ಕಿದ್ದರಿಂದ ಹೋಗ್ತಾ ಹೋಗ್ತಾ ಪಿಕ್ ಅಪ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಬೇಟೆ ಆಡ್ತಿದೆ. ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ನಿನ್ನೆ ಭಾನುವಾರ ರಜೆ ದಿನ ಆಗಿದ್ದರಿಂದ ವೀರ ಧೀರ ಶೂರನ್ ಕಲೆಕ್ಷನ್ ಹೊಸ ಎತ್ತರ ತಲುಪಿದೆ.
ರಜಿನಿ ಸಿನಿಮಾ ಸಾಧನೆಯನ್ನು ಮುರಿದ ವಿಕ್ರಮ್
ವಿಶೇಷವಾಗಿ ತಮಿಳುನಾಡಿನಲ್ಲಿ ಮೂರು ದಿನಗಳಲ್ಲಿ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾ ನಿನ್ನೆ ಮಾತ್ರ ಸುಮಾರು 5 ಕೋಟಿ 11 ಲಕ್ಷದ 55 ಸಾವಿರ ಕಲೆಕ್ಷನ್ ಮಾಡಿದೆ. ಇದರ ಮೂಲಕ ಈ ಸಿನಿಮಾ ತಮಿಳುನಾಡಿನಲ್ಲಿ ಮಾತ್ರ 16 ಕೋಟಿ ಕಲೆಕ್ಷನ್ ಮಾಡಿದೆ. ಜೊತೆಗೆ ರಜಿನಿಯ ಲಾಲ್ ಸಲಾಮ್ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಸಾಧನೆಯನ್ನೂ ವೀರ ಧೀರ ಶೂರನ್ ಮುರಿದಿದೆ. ಆ ಸಿನಿಮಾ ತಮಿಳುನಾಡಿನಲ್ಲಿ ಒಟ್ಟಾರೆಯಾಗಿ 11 ಕೋಟಿ ಕಲೆಕ್ಷನ್ ಮಾಡಿತ್ತು. ಆ ಸಾಧನೆಯನ್ನು ನಾಲ್ಕೇ ದಿನಗಳಲ್ಲಿ ಆರಾಮಾಗಿ ಮುರಿದು ಹಾಕಿದೆ ವೀರ ಧೀರ ಶೂರನ್.