ಬ್ಲ್ಯಾಕ್​ ಸೀರೆಯಲ್ಲಿ ಕಿಸ್ ಬ್ಯೂಟಿ ಶ್ರೀಲೀಲಾ: ನಿಮಗೆಲ್ಲ ಬೆಳೆಯೋವರೆಗೂ ಮಾತ್ರ ಕನ್ನಡ ಭಾಷೆ ಬೇಕಾ ಅನ್ನೋದಾ!

First Published | Nov 18, 2023, 8:28 AM IST

ಟಾಲಿವುಡ್​ನಲ್ಲಿ ಕನ್ನಡದ ಭರಾಟೆ ಬ್ಯೂಟಿಯ ಅಬ್ಬರ ಜೋರಾಗಿದೆ. ಶ್ರೀಲೀಲಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಶ್ರೀಲೀಲಾ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗ್ತಿದೆ. ಇದೀಗ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನಿಂದ ವೃತ್ತಿ ಜೀವನ ಆರಂಭಿಸಿ, ಬಳಿಕ ಬೇರೆ ಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಸ್ಟಾರ್​ ನಟಿಯಾಗಿ ಮಿಂಚುತ್ತಿರುವವರಲ್ಲಿ ಶ್ರೀಲೀಲಾ ಕೂಡ ಒಬ್ಬರು. 2019ರಲ್ಲಿ ಕನ್ನಡದ 'ಕಿಸ್'​ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಸದ್ಯ ಟಾಲಿವುಡ್​ನ ಬಹುಬೇಡಿಕೆಯ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 

ಹೊಸ ನಟರಿಂದ ಹಿಡಿದು ಸ್ಟಾರ್ ನಟರವರೆಗೂ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ. ಸದ್ಯ ಶ್ರೀಲೀಲಾ ಕೈಯಲ್ಲಿ 10ಕ್ಕೂ ಹೆಚ್ಚು ಚಿತ್ರಗಳಿವೆ. ಸಿನಿಮಾ ಜೊತೆಗೆ ಸೋಷಿಯಲ್​ ಮೀಡಿಯಾಗಳಲ್ಲೂ ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ. ಫೋಟೋಶೂಟ್​ ಮೂಲಕವೂ ಸದ್ದು ಮಾಡುತ್ತಾರೆ. 

Tap to resize

ಇದೀಗ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಟೋಸ್ ಕೂಡ ಅತ್ಯಾಕರ್ಷಕ ಅಂತಾರೆ ಅಭಿಮಾನಿಗಳು. ಇತ್ತೀಚೆಗೆ ಬ್ಲ್ಯಾಕ್​ ಸೀರೆಯಲ್ಲಿ ಕ್ಯಾಮರಾ ಮುಂದೆ ಅಂದ ಪ್ರದರ್ಶಿಸಿದ್ದಾರೆ. 

ಮುದ್ದು ಮೊಗದ ಚೆಲುವೆ ಶ್ರೀಲೀಲಾ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಸ್ಟೈಲಿಷ್ ಆಗಿ ಪೋಸ್ ನೀಡಿದ್ದು, ಇದನ್ನು ನೋಡಿದ ನೆಟ್ಟಿಗರು ಹಾಟ್, ಸೆಕ್ಸಿ, ಬ್ಯೂಟಿಫುಲ್, ಲೀಲಾ ಇನ್ ಬ್ಲ್ಯಾಕ್, ಟಾಲಿವುಡ್‌ ಚೆಲುವೆ ಹಾಗೂ ಮುದ್ದಾದ ಹುಡುಗಿ ದೃಷ್ಟಿ ತೆಗೆಸಿಕೊಳ್ಳಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬ ನೆಟ್ಟಿಗ, ಲೋಕ ಸಮಸ್ತ ಸುಖಿನೋ ಭವಂತು ಅಂತ ಬಯೋ ಹಾಕಿದಿರಲ್ಲ ಅದನ್ನ ಕನ್ನಡದಲ್ಲಿ ಇಟ್ಟು ನೋಡಿ ಎಷ್ಟೋ ನಿಷ್ಕಲ್ಮಶ ಕನ್ನಡಿಗರ ಮನಸನ್ನು ಗೆಲ್ಲುತ್ತೀರಾ. ಹಾಗೂ ನಿಮಗೆಲ್ಲ ಬೆಳೆಯೋವರೆಗೂ ಮಾತ್ರ ಕನ್ನಡ ಅಲ್ವಾ ಮೇಡಂ. ಬೆಳೆದು ಬಂದ ಮೇಲೆ ಯಾಕೆ ಕನ್ನಡ ಭಾಷೆ ಎಂದು ಪ್ರತಿಕ್ರಿಯಿಸಿದ್ದಾನೆ.

ಶ್ರೀಲೀಲಾ ನಟನೆ ಮಾತ್ರವಲ್ಲ, ನೃತ್ಯದಲ್ಲೂ ಎತ್ತಿದ ಕೈ. ಸೌಂದರ್ಯದ ಬಗ್ಗೆ ಎರಡು ಮಾತಿಲ್ಲ. ಅತ್ಯಂತ ಕಿರಿ ವಯಸ್ಸಿನಲ್ಲೇ ಸಿನಿಮಾ ರಂಗದಲ್ಲಿ ಸಾಧನೆ ಮಾಡಿರುವ ಈ ಪ್ರತಿಭೆಗೆ ವಯಸ್ಸು ಕೇವಲ 22​. 

ಧಮಾಕಾ  ಸಿನಿಮಾ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲಿ ಫೇಮಸ್​ ಆದ ಶ್ರೀಲೀಲಾ ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಸೈಮಾ ಪ್ರಶಸ್ತಿಯನ್ನು ಪಡೆದರು. ಇತ್ತೀಚೆಗಷ್ಟೇ ಆಕೆ ನಟಿಸಿದ ಸ್ಕಂದ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಆವರೇಜ್ ಹಿಟ್​ ಆಗಿತ್ತು.

Latest Videos

click me!