ಬಾಲಿವುಡ್ ಬಿಗ್ ಖಾನ್, ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಇನ್‌ಸ್ಟಾಗ್ರಾಂನಲ್ಲಿ ಶರ್ಟ್‌ಲೆಸ್ ಫೋಟೋ ಹಂಚಿಕೊಂಡು ಹುಡುಗಿಯರ ನಿದ್ರೆ ಗೆಡಿಸಿದ್ದಾರೆ.
'ನೋಡಲು ಈ ರೀತಿ ಕಾಣಿಸುತ್ತಿರಬಹುದು ಆದರೆ ನಾನು ನಿಜ ಚಿಲ್/ ರಿಲ್ಯಾಕ್ಸ್ ಮಾಡುತ್ತಿಲ್ಲ' ಎಂದು ಇನ್‌ಸ್ಟಾಗ್ರಾಂ ಬರೆದುಕೊಂಡಿದ್ದಾರೆ.
ಫಾರ್ಮ್‌ಹೌಸ್‌ನ ಕಿಟಕಿ ಬಳಿ ಸಲ್ಮಾನ್ ಖಾನ್ ಶರ್ಟ್‌ಲೆಸ್ ಆಗಿ ಕುಳಿತುಕೊಂಡಿರುವ ಫೋಟೋ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. 6 ಪ್ಯಾಕ್ಸ್‌ನ ನೋಡಿ ಥ್ರಿಲ್ ಆಗಿದ್ದಾರೆ ನೆಟ್ಟಿಗರು.
ವಾವ್! ಈ ವಯಸ್ಸಿಗೂ ಇಷ್ಟೊಂದು ಹ್ಯಾಂಡ್ಸಮ್, ಮದುವೆಗೆ ಫಾರ್ಮ್ ಫಿಲ್ ಮಾಡಬಹುದಾ, ಮದುವೆ ಆಗೋಕೆ ರೆಡಿನಾ ಎಂದು ಕಾಮೆಂಟ್ ಮಾಡಿದ್ದಾರೆ.
ಹುಡುಗಿಯರ ಕಾಮೆಂಟ್‌ನ ನೋಡಿ ಹುಡುಗರು ಹೊಟ್ಟೆ ಕಿಚ್ಚು ಪಟ್ಟಿದ್ದಾರೆ. ದಯವಿಟ್ಟು ಗುರು ನಮ್ಮಂತ ಹುಡುಗರಿಗೂ ಹುಡುಗಿಯರು ಬೇಳಬೇಕು ಇಷ್ಟ ಪಡಬೇಕು ನೀವು ಹಿಂಗೆ ಪೋಸ್ಟ್ ಮಾಡಬೇಡಿ ಎಂದಿದ್ದಾರೆ.
ಇನ್ನು ಸಲ್ಮಾನ್ ಖಾನ್ ನಟನೆಯ Kisi Ka Bhai Kisi Ki Jaan ಸಿನಿಮಾ ಚಿತ್ರೀಕರಣ ಮುಗಿದಿದೆ. ಚಿತ್ರದ ಎರಡು ಸ್ಪೆಷಲ್ ಹಾಡು ಬಿಡುಗಡೆಯಾಗಿ ಸಖತ್ ವೈರಲ್ ಆಗಿದೆ.