ಸಾಯ್ತಾಳೆ ಅಂತ ಗೊತ್ತಾದಾಗ ಪತ್ನಿಯನ್ನು ತವರಿಗೆ ಕಳುಹಿಸಿದ್ರಾ ಕಿಶೋರ್ ಕುಮಾರ್!

First Published May 19, 2021, 7:52 PM IST

ಬಾಲಿವುಡ್‌ನ ಅತಿ ಸುಂದರ ನಟಿಯರಲ್ಲಿ ಒಬ್ಬರಾಗಿದ್ದರು ಮಧುಬಾಲಾ. ಆದರೆ ವೃತ್ತಿ ಜೀವನದ ಹೊರತಾಗಿ ರಿಯಲ್‌ ಲೈಫ್‌ನಲ್ಲಿ ಸಾಕಷ್ಟು ಕಷ್ಟಗಳನ್ನು ಮತ್ತು ಹೋರಾಟಗಳನ್ನು ಎದುರಿಸಿದ್ದರು. ಅಂತಹ ಸಮಸ್ಯೆಗಳಲ್ಲಿ ಅವರ ಆರೋಗ್ಯವೂ ಒಂದು. ಮಧುಬಾಲಾ ಹೆಚ್ಚು ಕಾಲ ಬದುಕುವುದಿಲ್ಲ ಎಂದು ತಿಳಿದಾಗ ಅವರ ಪತಿ ಕಿಶೋರ್‌ ಕುಮಾರ್‌ ನಟಿಯನ್ನು ಪೋಷಕರ ಮನೆಯಲ್ಲಿ ಬಿಟ್ಟು ಹೋಗಿದ್ದರು. ಇಲ್ಲಿದೆ ವಿವರ.
 

ಬ್ಯೂಟಿ, ಗ್ರೆಸ್‌ ಹಾಗೂ ಧೈರ್ಯದ ಗಣಿಯಾಗಿದ್ದ ನಟಿ ಮಧುಬಾಲ ಲಕ್ಷಾಂತರ ಹೃದಯಗಳಆರಾಧ್ಯ ದೇವತೆಯಾಗಿದ್ದರು.
undefined
ಬಾಲಿವುಡ್‌ನ ಈ ನಟಿ ಭಾರತದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು ಮತ್ತು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
undefined
ಆದರೆ ಮಧುಬಾಲ ಅವರ ಲೈಫ್‌ ತೆರೆಯ ಮೇಲೆ ಪರ್ಫೆಕ್ಟ್‌ ಎಂದು ಕಾಣುತ್ತಿದ್ದರೂ ಅದು ಆಫ್‌ಸ್ಕ್ರೀನ್‌ನಲ್ಲಿ ಕಷ್ಟಗಳಿಂದ ತುಂಬಿತ್ತು.
undefined
ಅನೇಕ ಪುರುಷರ ಜೊತೆ ಮಧುಬಾಲರ ಹೆಸರು ಕೇಳಿ ಬಂದಿತ್ತು.
undefined
ಚಾಲ್ತಿ ಕಾ ನಾಮ್ ಗಡಿ ಮತ್ತು ಹಾಫ್ ಟಿಕೆಟ್ ಶೂಟಿಂಗ್‌ ಸಮಯದಲ್ಲಿ ಮಧುಬಾಲಾ ಕಿಶೋರ್ ಕುಮಾರ್ ಅವರನ್ನು ಭೇಟಿಯಾದರು.
undefined
ಶೀಘ್ರದಲ್ಲೇ ಅವರು ಪ್ರೀತಿಯಲ್ಲಿ ಸಿಲುಕಿದ ಈ ಜೋಡಿ ಮದುವೆಯಾದರು. ಆದರೆ ವಿಧಿಯ ಕಾಣದಿಂದ ಅವರ ಮದುವೆ ಹೆಚ್ಚು ಸಮಯ ಬಾಳಲಿಲ್ಲ.
undefined
ಒಂಬತ್ತು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿತ್ತು ಈ ಜೋಡಿ. ಕಿಶೋರ್‌ ಕುಮಾರ್ ಅವರ ಪ್ರಪೋಸಲ್‌ಗೆ ಮಧುಬಾಲಾ ತಕ್ಷಣವೇ ಎಸ್‌ ಎಂದು ಹೇಳಿದರು. 1960ರಲ್ಲಿ ಮದುವೆಯಾದರು.
undefined
ನಟಿಯ ಫ್ಯಾಮಿಲಿಗಾಗಿ ಕಿಶೋರ್ ಇಸ್ಲಾಂಗೆ ಮತಾಂತರಗೊಂಡು ಹೆಸರನ್ನು ಕರೀಮ್ ಅಬ್ದುಲ್ ಎಂದು ಬದಲಾಯಿಸಿಕೊಂಡರು.
undefined
ಆದರೆ ಹಿಂದೂ ವಿವಾಹದ ಹೊರತಾಗಿಯೂ ಕುಮಾರ್ ಅವರ ಕುಟುಂಬ ಮಧುಬಾಲರನ್ನು ಎಂದಿಗೂ ಸ್ವೀಕರಿಸಲಿಲ್ಲ. ಈ ಎಲ್ಲಾ ಪರಿಸ್ಥಿತಿಗಳು ನಟಿಯಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು.
undefined
ಕೆಲವು ದಿನಗಳ ನಂತರ, ಕಿಶೋರ್ ಮತ್ತು ಮಧುಬಾಲಾ ಲಂಡನ್‌ಗೆ ತೆರಳಿದರು. ಅವರ ಹಾರ್ಟ್‌ ಹೋಲ್‌ ಇರುವ ಕಾರಣದಿಂದ ಕೇವಲ ಎರಡು ವರ್ಷ ಬದುಕುತ್ತಾರೆ ಎಂದು ಎಂದು ವೈದ್ಯರು ಬಹಿರಂಗಪಡಿಸಿದರು.
undefined
ಕಿಶೋರ್‌ ಕುಮಾರ್‌ ಶುಟಿಂಗ್‌ನಲ್ಲಿ ಬ್ಯುಸಿ ಇರುವ ಕಾರಣದಿಂದ ನೋಡಿಕೊಳ್ಳಲು ಸಾಧ್ಯವಿಲ್ಲವೆಂದು, ಮಧುಬಾಲ ಅವರನ್ನು ಆಕೆ ಹೆತ್ತವರ ಮನೆಯಲ್ಲಿ ಬಿಟ್ಟು ಹೋದರು.
undefined
ಅಂತಹ ಕಷ್ಟದ ಸಮಯದಲ್ಲಿ ಮಧುಬಾಲ ಅವರು ಕುಮಾರ್ ಅವರ ಪ್ರೀತಿ ಮತ್ತು ಬೆಂಬಲವನ್ನು ಬಯಸಿದ್ದರು. ಆದ್ದರಿಂದ ಕುಮಾರ್ ಕಾರ್ಟರ್ ರಸ್ತೆಯ ಕ್ವಾರ್ಟರ್ ಡೆಕ್‌ನಲ್ಲಿ ಫ್ಲ್ಯಾಟ್ಖರೀದಿಸಿದ್ದರು. ಆದರೆ ನಟಿ ಹೆಚ್ಚಿನ ಸಮಯ ಅಲ್ಲಿ ಒಂಟಿಯಾಗಿರುತ್ತಿದ್ದರು ಎಂದು ವರದಿಗಳು ಹೇಳುತ್ತವೆ.
undefined
ಎರಡು ಮೂರು ತಿಂಗಳಿಗೊಮ್ಮೆ ಕಿಶೋರ್ ತನ್ನನ್ನು ಭೇಟಿ ಮಾಡುತ್ತಿದ್ದರು ಎಂದು ಮಧುಬಾಲಾ ಸಹೋದರ ಮಾಧುರ್ ಸಂದರ್ಶನವೊಂದರಲ್ಲಿ ಹೇಳಿದ್ದರು.
undefined
ಒಂಬತ್ತು ವರ್ಷಗಳ ಕಾಲ ಹಾಸಿಗೆಗೆ ಹಿಡಿದಿದ್ದ ಮಧುಬಾಲಾ ಫೆಬ್ರವರಿ 23, 1969 ರಂದುಕೊನೆಯುಸಿರೆಳೆದರು. ಕಿಶೋರ್ ಕುಮಾರ್‌ ಮತ್ತು ಮಧುಬಾಲರಿಗೆ ಮಕ್ಕಳು ಇರಲಿಲ್ಲ.
undefined
click me!