500 ರೂ. ಜೊತೆ ಮುಂಬೈಗೆ ಬಂದ ಈ ನಟಿ ಇಂದು ಕೋಟಿ ಕೋಟಿ ಆಸ್ತಿ ಒಡತಿ!

First Published | May 19, 2021, 7:40 PM IST

ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ರಾಧೆ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಯಿತು. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ, ಕೆಲವು ಅಭಿಮಾನಿಗಳು ಸಿನಿಮಾವವನ್ನು ತೀವ್ರವಾಗಿ ಹೊಗಳುತ್ತಿದ್ದರೆ, ಕೆಲವರು ಅದನ್ನು ಗೇಲಿ ಮಾಡುತ್ತಿದ್ದಾರೆ. ತನಗಿಂತ ಸುಮಾರು 27 ವರ್ಷ ಚಿಕ್ಕವಳಾದ ನಟಿ ದಿಶಾ ಪಟಾನಿ ಜೊತೆ ಸಲ್ಮಾನ್ ರೋಮಾನ್ಸ್‌ ಮಾಡಿದ್ದಾರೆ. ಅಂದಹಾಗೆ, ಕೇವಲ 500 ರೂಪಾಯಿಗಳೊಂದಿಗೆ ಮುಂಬೈಗೆ ನಾಯಕಿ ಆಗಲು ಬಂದಿದ ಈ ದಿಶಾ ಇಂದು ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಎಂ.ಎಸ್.ಧೋನಿ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದಿಶಾ 1993ರಲ್ಲಿ ಜನಿಸಿದರು.
ಮೂಲತಃ ಉತ್ತರಾಖಂಡದ ತನಕ್ಪುರದವರು. ದಿಶಾ ತಂದೆ ಪೊಲೀಸ್ ಇಲಾಖೆಯಲ್ಲಿ ಸಿಒ ಹುದ್ದೆಯಲ್ಲಿದ್ದರೆ, ಅವರ ಅಕ್ಕ ಸೇನೆಯಲ್ಲಿ ಅಧಿಕಾರಿಯಾಗಿದ್ದಾರೆ.
Tap to resize

ದಿಶಾ ಸಂದರ್ಶನವೊಂದರಲ್ಲಿ ತಾನು ಎಂದಿಗೂ ತನ್ನ ಕುಟುಂಬದಿಂದ ಸಹಾಯವನ್ನು ಕೋರಿಲ್ಲ. ತನ್ನೊಂದಿಗೆ ಕೇವಲ 500 ರೂಪಾಯಿಗಳೊಂದಿಗೆ ಮುಂಬೈಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಅವರು ಉದ್ಯಮದಲ್ಲಿ ನೆಲೆ ಕಂಡು ಕೊಳ್ಳಲುಹೆಣಗಾಡಿದರು. ನಟಿಯಾಗುವ ಕನಸನ್ನು ಈಡೇರಿಸಲು ವಿದ್ಯಾಭ್ಯಾಸವನ್ನು ಮಧ್ಯದಲ್ಲಿತೊರೆದರಂತೆ.
ಕಾಲೇಜು ಹುಡುಗಿಗೆ ಹೊಸ ಸಿಟಿಯಲ್ಲಿ ವಾಸಿಸುವುದು ಸುಲಭವಲ್ಲ. ನಾನು ಒಬ್ಬಂಟಿಯಾಗಿ ವಾಸಿಸುತ್ತಿದ್ದೆ, ಕೆಲಸ ಮಾಡಿದೆ. ನನ್ನ ಬಳಿ ಹಣವಿಲ್ಲದ ಸಮಯದಲ್ಲಿ ಸಹ ನಾನು ಎಂದಿಗೂ ನನ್ನ ಕುಟುಂಬವನ್ನು ಹಣಕ್ಕಾಗಿ ಕೇಳಲಿಲ್ಲ ಎಂದು ಹೇಳಿದ್ದರು.
ಹೆಚ್ಚಾಗಿ ಟಿವಿ ಜಾಹೀರಾತುಗಳಿಗಾಗಿ ನಾನು ಪ್ರತಿದಿನ ಆಡಿಷನ್‌ಗೆ ಹೋಗುತ್ತಿದ್ದೆ. ನನಗೆ ಕೆಲಸ ಸಿಗದಿದ್ದರೆ, ಮನೆಯ ಬಾಡಿಗೆ ಪಾವತಿಸಲು ಸಾಧ್ಯವಾಗುವುದಿಲ್ಲ, ಎಂಬ ಒತ್ತಡವೂ ನನ್ನ ಮೇಲಿತ್ತು, ಎಂದಿದ್ದಾರೆ.
2017 ರಲ್ಲಿ ದಿಶಾ ಮುಂಬೈನ ಬಾಂದ್ರಾದಲ್ಲಿ ಮನೆಯನ್ನು ಖರೀದಿಸಿದ ಸ್ವಂತ ಮನೆಗೆ ಲಿಟಲ್ ಹಟ್ ಎಂದು ಹೆಸರಿಟ್ಟಿದ್ದಾರೆ. ಈ ಮನೆಯ ಬೆಲೆ ಸುಮಾರು 5 ಕೋಟಿ.
ದಿಶಾ ತಮ್ಮ ಫಿಲ್ಮಿ ಕೆರಿಯರ್‌ ಅನ್ನು 2015ರ ತೆಲುಗು ಚಿತ್ರ ಲೋಫರ್ ಮೂಲಕ ಪ್ರಾರಂಭಿಸಿದರು.
2012ರಲ್ಲಿ, ದಿಶಾ ಲಖನೌದ ಅಮಿಟಿ ಕಾಲೇಜಿನಿಂದ ಬಯೋಟೆಕ್ ಡಿಗ್ರಿ ಮಾಡುವ ಸಮಯದಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಮಿಸ್ ಪ್ಯಾಂಟಲೂನ್ ಸ್ಪರ್ಧೆಬಗ್ಗೆ ತಿಳಿದುಕೊಂಡರು. ಆ ಸಮಯದಲ್ಲಿ ತಮಗೆ ಮತ್ತು ಅಕ್ಕ ಖುಷ್ಬೂ ಇಬ್ಬರಿಗೂ ಸಮಯವಿರಲಿಲ್ಲ. ದಿಶಾ ಎಲ್ಲವನ್ನೂ ಸ್ವತಃ ಮ್ಯಾನೇಜ್‌ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದರು.ಅಲ್ಲಿಂದಲೇ ಮಾಡೆಲಿಂಗ್ ಮತ್ತು ನಟನೆಯತ್ತ ದಿಶಾ ಸಾಗಿದಳು ಎಂದುಇಂಟರ್‌ವ್ಯೂವ್‌ವೊಂದರಲ್ಲಿ ದಿಶಾರ ತಂದೆ ಜಗದೀಶ್‌ ಪಟಾನಿ ತಿಳಿಸಿದ್ದರು.
ದಿಶಾ ಪಟಾನಿಗೆ ಕಾರುಗಳೆಂದರೆ ತುಂಬಾ ಕ್ರೇಜ್‌. ಸುಮಾರು 52 ಲಕ್ಷದ BMW5 ಸೀರಿಸ್‌ನ ಕಾರಿನಲ್ಲಿ ಯಾವಾಗಲೂ ಕಾಣಿಸಿಕೊಳ್ಳುತ್ತಾರೆ ನಟಿ.
50 ಲಕ್ಷದ ಮರ್ಸಿಡಿಸ್‌ E220, ಆಡಿ A6 ಹಾಗೂ ಸುಮಾರು 60ಲಕ್ಷ ಮೌಲ್ಯದ ಜಾಗ್ವಾರ್‌ A-S ಮಾಡೆಲ್‌ಕಾರನ್ನು ಸಹ ಹೊಂದಿದ್ದಾರೆ ದಿಶಾ.

Latest Videos

click me!