ಸೌತ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ರಶ್ಮಿಕಾ ಮಂದಣ್ಣ ಇಡೀ ದೇಶದಲ್ಲಿ ತಮ್ಮ ಹವಾ ಸೃಷ್ಟಿಸುತ್ತಿದ್ದಾರೆ.
ಕನ್ನಡದ ನಂತರ ತೆಲಗುಹಾಗೂ ತಮಿಳು ಸಿನಿಮಾದಲ್ಲಿ ಜನಪ್ರಿಯರಾದ ರಶ್ಮಿಕಾ ಈಗ ಬಾಲಿವುಡ್‌ಗೂ ಲಗ್ಗೆ ಇಟ್ಟಿದ್ದಾರೆ.
ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಎದುರು ಮಿಷನ್ ಮಜ್ನು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕಿರಿಕ್ ಚೆಲುವೆ.
ಪ್ರಸ್ತುತ ರಶ್ಮಿಕಾ ಅವರ ಜನಪ್ರಿಯತೆಯು ಮೂರು ಪಟ್ಟು ಹೆಚ್ಚಾಗುತ್ತದೆ. ಬ್ರಾಂಡ್‌ಗಳಿಗೂ ಈ ನಟಿ ಈಗ ಫೇವರೇಟ್.
ವಿಶ್ವದ ಅತಿದೊಡ್ಡ ಬರ್ಗರ್ ಚೈನ್‌ನ ಫೇಸ್ ಆಗಿ ರಶ್ಮಿಕಾ ಆಯ್ಕೆಯಾಗಿದ್ದಾರೆ
ಕೆಲವು ತಿಂಗಳ ಹಿಂದೆ ರ ರಾಪರ್ ಬಾದ್‌ಶಾ ಅವರ ಮ್ಯೂಸಿಕ್ ವಿಡಿಯೋ 'ಟಾಪ್ ಟಕರ್' ನಲ್ಲಿ ಕಾಣಿಸಿಕೊಂಡಿದ್ದರು.
ರಶ್ಮಿಕಾ ಈಗ ವಿಶ್ವದಾದ್ಯಂತದ ಅತಿದೊಡ್ಡ ಬರ್ಗರ್ ಬ್ರಾಂಡ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರು ತಮಿಳು ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಹಾಗಾಗಿ ತಮಿಳು ಹುಡುಗನನ್ನು ಮದುವೆಯಾಗಲು ಬಯಸುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
ನಟಿ ತಮಿಳುನಾಡಿನ ಸಂಸ್ಕೃತಿ ಅದರಲ್ಲೂ ಅಲ್ಲಿನ ರುಚಿಕರ ಪುಡ್ ಮೇಲೆ ಆಕರ್ಷಿತರಾಗಿದ್ದಾರೆ ಎಂದು ಹೇಳಿದರು.
'ನಾನು ತಮಿಳು ಹುಡುಗನನ್ನು ಮದುವೆಯಾಗಬೇಕೆಂದು ಆಶಿಸುತ್ತೇನೆ, ಇದರಿಂದ ನಾನು ಅವರ ಜೀವನಶೈಲಿಯನ್ನು ಪೂರ್ಣವಾಗಿ ಅನುಭವಿಸಬಹುದು ಎಂದು ಹೇಳಿದ ರಶ್ಮಿಕಾ.
ಪ್ರಸ್ತುತ, ಅವರು ಹಲವಾರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.