ಕಿಯಾರಾ ಅಡ್ವಾಣಿ ತಾಯಿಯೂ ಯಾವುದೇ ಹಿರೋಯಿನ್‌ಗೆ ಕಡಿಮೆ ಇಲ್ಲ

Published : Feb 23, 2023, 03:41 PM IST

ಇಂದು ಬಾಲಿವುಡ್‌ ತಾರೆ  ಕಿಯಾರ ಅಡ್ವಾಣಿ (Kiara Advani) ಅವರ ತಾಯಿ ಜಿನೆವೀವ್ ಅಡ್ವಾಣಿ ಅವರು ಹುಟ್ಟಿದ ದಿನ. ಈ ಸಮಯದಲ್ಲಿ ಅವರ ಮಗಳು ಬಿಟೌನ್‌ನ ನವವಧು ಕಿಯಾರಾ ವಿಶ್‌ ಮಾಡಿದ್ದಾರೆ. ಕಿಯಾರಾ ತಮ್ಮ ಮದುವೆಯಲ್ಲಿ ತಾಯಿ ಜೊತೆ ಇರುವ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

PREV
16
ಕಿಯಾರಾ ಅಡ್ವಾಣಿ  ತಾಯಿಯೂ ಯಾವುದೇ ಹಿರೋಯಿನ್‌ಗೆ ಕಡಿಮೆ ಇಲ್ಲ
Kiara Advani

ತನ್ನ ತಾಯಿ ಜಿನೆವೀವ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಕಿಯಾರಾ ಅಡ್ವಾಣಿ ಸಖತ್‌ ಅಡರೋಬಲ್‌ ಆಗಿ  ವಿಶ್‌ ಮಾಡಿದ್ದಾರೆ.  Instagramನಲ್ಲಿ ಬರ್ತ್‌ಡೇಗೆ ಹಾರೈಸಿರುವ ಕಿಯಾರಾ ಜೊತೆಗೆ ತಮ್ಮ ಮದುವೆಯ ಸಮಯದ ಕೆಲವು  ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

26
Kiara Advani

'ಮುಮಾ... ನನ್ನ ಪ್ರೀತಿಯ, ಕಾಳಜಿಯುಳ್ಳ, ನನ್ನ ಒಳಿತಿಗಾಗಿ ಸದಾ ಪ್ರಾರ್ಥಿಸುವ ತಾಯಿಗೆ ಜನ್ಮದಿನದ ಶುಭಾಶಯಗಳು.  ನಾನು ನಿಮ್ಮ ಮಗಳಾಗಿರುವುದು  ಆಶೀರ್ವಾದ' ಎಂದು ಫೋಟೋಗಳ ಜೊತೆ ಬರೆದಿದ್ದಾರೆ.

36
Kiara Advani

ಇದು ಕಿಯಾರಾ ಮತ್ತು ಸಿದ್ಧಾರ್ಥ್‌ ಮೆಹಂದಿ ಕಾರ್ಯಕ್ರಮದ ಪರ್ಫೇಕ್ಟ್‌ ಫ್ಯಾಮಿಲಿ ಕ್ಷಣ .ಫೋಟೋದಲ್ಲಿ ಕಿಯಾರಾ ತಂದೆ, ತಾಯಿ ಮತ್ತು ಸಹೋದರನ ಜೊತೆ ನವ ಜೋಡಿ ಪೋಸ್‌ ನೀಡಿದ್ದಾರೆ.

46
Kiara Advani

ಕಿಯಾರಾ ಅವರ ಅಮ್ಮನ ಕಾರ್ಬನ್‌ ಕಾಪಿ ಎಂದು ಫೋಟೋ ನೋಡಿದರೆ ತಿಳಿಯುತ್ತದೆ. ಮದುವೆಯ ದಿನದಂದು ಲೈಟ್‌ ಪಿಂಕ್‌ ಲೆಹೆಂಗಾದಲ್ಲಿ ಕಿಯಾರಾ ತನ್ನ ತಾಯಿಯೊಂದಿಗೆ  ಟ್ವಿನ್ನಿಂಗ್ ಮಾಡಿದ್ದಾರೆ.

56
Kiara Advani

ಇದಕ್ಕೂ ಮೊದಲು ಅಂದರೆ ನಿನ್ನೆ ಕಿಯಾರಾ ಸಿದ್‌ ದಂಪತಿ  ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸಂಗೀತ್‌ನ ಪೋಟೋಗಳನ್ನು ಹಂಚಿಕೊಂಡಿದ್ದರು. 

66
Kiara Advani

ಇಬ್ಬರೂ ಚಿನ್ನ ಮತ್ತು ಕಪ್ಪು ಬಣ್ಣದಲ್ಲಿ ಸಂಯೋಜಿಸಿದ  ಮನೀಶ್ ಮಲ್ಹೋತ್ರಾ ಔಟ್‌ಫಿಟ್‌ ಆಯ್ಕೆ ಮಾಡಿಕೊಂಡಿದ್ದಾರೆ.  ಈ ಫೋಟೋಗಳಲ್ಲಿ ನೋಡಿದ ಫ್ಯಾನ್ಸ್‌ ಮತ್ತೊಮ್ಮೆ ಇವರ ಕೆಮಿಸ್ಟ್ರಿಗೆ  ಫಿದಾ ಆಗಿದ್ದಾರೆ.

Read more Photos on
click me!

Recommended Stories