ಗರ್ಭಿಣಿಯಾಗ್ಬೇಕಂತೆ ನಟಿ ಕಿಯಾರಾ; ಕಾರಣ ಮಾತ್ರ ವಿಚಿತ್ರ!

First Published | May 21, 2024, 3:48 PM IST

ಟಾಕ್ಸಿಕ್ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಲಿರುವ ಬಾಲಿವುಡ್‌ ಸ್ಟಾರ್ ಕಿಯಾರಾ ಅಡ್ವಾನಿ ತಾವು ಗರ್ಭಿಣಿಯಾಗಬೇಕೆನ್ನುವುದಕ್ಕೆ ವಿಚಿತ್ರ ಕಾರಣ ನೀಡಿದ್ದಾರೆ. 

ಬಾಲಿವುಡ್‌ನಲ್ಲಿ ಕಿಯಾರಾ ಅಡ್ವಾನಿ ಸಧ್ಯ ಅತಿ ಬೇಡಿಕೆಯ ನಟಿ. 'ಲಸ್ಟ್ ಸ್ಟೋರೀಸ್' ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾನನ್ನು ಮೊದಲ ಬಾರಿ ಭೇಟಿಯಾದರು.

ಶೇರ್‌ಶಾ ಚಿತ್ರದ ಶೂಟಿಂಗ್ ವೇಳೆ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಕೆಲ ತಿಂಗಳು ಸೀಕ್ರೆಟಾಗಿ ಅಡ್ಡಾಡಿದ ಬಳಿಕ 2023ರ ಫೆಬ್ರವರಿಯಲ್ಲಿ ಈ ಜೋಡಿಯ ವಿವಾಹವಾಯಿತು. 

Tap to resize

ಕಿಯಾರಾ ನಟಿಯಾಗಿ ಹಿಂದಿಯ 'ಗುಡ್ ನ್ಯೂಸ್' ಮತ್ತು 'ಕಬೀರ್ ಸಿಂಗ್' ಚಿತ್ರಗಳಲ್ಲಿ ಗರ್ಭಿಣಿ ಪಾತ್ರಗಳಲ್ಲಿ ನಟಿಸಿದ್ದಾಳೆ. 

ಇದರ ಬಳಿಕ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ಕಿಯಾರಾ ಅಡ್ವಾನಿ ತಾನು ಗರ್ಭಿಣಿಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಳು. 

ಇದಕ್ಕೆ ಆಕೆ ಕೊಟ್ಟ ಕಾರಣ ಮಾತ್ರ ಎಲ್ಲರನ್ನೂ ಅಚ್ಚರಿಗೀಡು ಮಾಡಿತ್ತು. ಹೌದು, ಕಿಯಾರಾ ವಿಚಿತ್ರ ಕಾರಣವೊಂದಕ್ಕಾಗಿ ತಾನು ಗರ್ಭಿಣಿಯಾಗಬೇಕೆಂದು ಬಯಸಿದ್ದರು. 

ಗರ್ಭಿಣಿಯಾದರೆ ಮನಸ್ಸಿಗೆ ಬೇಕೆನಿಸಿದ್ದೆಲ್ಲ ತಿನ್ನಬಹುದು ಮತ್ತು ತುಂಬಾ ತಿನ್ನಬಹುದು- ಈ ಒಂದೇ ಕಾರಣಕ್ಕಾಗಿ ನನಗೆ ಪ್ರಗ್ನೆಂಟ್ ಆಗಬೇಕು ಎಂದು ನಟಿ ಹೇಳಿದ್ದರು. 

ಇದರ ಬಳಿಕ ಅವರಿಗೆ ಯಾವ ಮಗು ಇಷ್ಟ- ಗಂಡೋ ಹೆಣ್ಣೋ ಎಂದು ಕೇಳಿದಾಗ- ಯಾವುದಾದರೂ ಸರಿ ಆರೋಗ್ಯವಂತ ಮಗುವಾಗಿದ್ದರೆ ಸಾಕು ಎಂದಿದ್ದರು ನಟಿ. 

ಸಧ್ಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ತಮ್ಮ ಲುಕ್‌ಗಾಗಿ ಅಪಾರ ಪ್ರಶಂಸೆ ಗಳಿಸುತ್ತಿರುವ ಕಿಯಾರಾ ಯಶ್ ಜೊತೆ ಟಾಕ್ಸಿಕ್‌ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 

ಇದಲ್ಲದೆ, ಕಿಯಾರಾ ರಾಮ್ ಚರಣ್ ಜೊತೆಗೆ ತೆಲುಗು ರಾಜಕೀಯ ಆಕ್ಷನ್ ಥ್ರಿಲ್ಲರ್ 'ಗೇಮ್ ಚೇಂಜರ್' ನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ ಮತ್ತು ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅವರೊಂದಿಗೆ 'ವಾರ್ 2' ನಲ್ಲಿ YRF ಸ್ಪೈ ಯೂನಿವರ್ಸ್‌ಗೆ ಸೇರಲಿದ್ದಾರೆ.

Latest Videos

click me!