ಕೋಟ್‌ ಒಳಗೆ ಬೇಬಿ ಬಂಪ್ ಮುಚ್ಚಿಟ್ಕೊಂಡ ಕತ್ರೀನಾ ಕೈಫ್; ನಟಿ ಗರ್ಭಿಣಿ ಎಂಬ ವದಂತಿಗೆ ಸಾಕ್ಷಿ ನೀಡ್ತಿದೆ ವಿಡಿಯೋ

Published : May 21, 2024, 02:41 PM IST

ಕತ್ರೀನಾ ಕೈಫ್ ಗರ್ಭಿಣಿಯಾಗಿದ್ದು, ಲಂಡನ್‌ನಲ್ಲಿ ಸಧ್ಯ ಪತಿಯೊಂದಿಗಿರುವ ಆಕೆ, ಅಲ್ಲಿಯೇ ಮಗುವಿಗೆ ಜನ್ಮ ನೀಡುತ್ತಾರೆ ಎಂಬ ವದಂತಿಗಳು ಜೋರಾಗಿವೆ. ಇದಕ್ಕೆ ಸರಿಯಾಗಿ ನಟಿಯು ಲಂಡನ್ ಬೀದಿಗಳಲ್ಲಿ ಓವರ್ ಸೈಜ್ಡ್ ಕೋಟ್ ಧರಿಸಿ ಬೇಬಿ ಬಂಪ್ ಮುಚ್ಚಿಟ್ಟುಕೊಂಡು ನಡೆಯುತ್ತಿರುವಂತೆ ಕಾಣುವ ವಿಡಿಯೋ ವೈರಲ್ ಆಗಿದೆ. 

PREV
110
ಕೋಟ್‌ ಒಳಗೆ ಬೇಬಿ ಬಂಪ್ ಮುಚ್ಚಿಟ್ಕೊಂಡ ಕತ್ರೀನಾ ಕೈಫ್; ನಟಿ ಗರ್ಭಿಣಿ ಎಂಬ ವದಂತಿಗೆ ಸಾಕ್ಷಿ ನೀಡ್ತಿದೆ ವಿಡಿಯೋ

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರನ್ನು ಟಿನ್ಸೆಲ್‌ಟೌನ್‌ನ ಅತ್ಯಂತ ಬೇಡಿಕೆಯ ಜೋಡಿಗಳಲ್ಲಿ ಒಬ್ಬರು. ಇದೀಗ ಜೋಡಿಯು ಪೋಷಕರಾಗುತ್ತಿದ್ದಾರೆ ಎಂಬ ವದಂತಿಯ ಕಾರಣಕ್ಕೆ ಹೆಡ್ಲೈನ್ಸ್‌ನಲ್ಲಿದ್ದಾರೆ.

210

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಲಂಡನ್‌ನ ಬೀದಿಗಳಲ್ಲಿ ಕೈ ಹಿಡಿದುಕೊಂಡು ಅಡ್ಡಾಡುತ್ತಿರುವುದನ್ನು ಗುರುತಿಸಲಾಗಿದೆ. ಆದರೆ, ಎಲ್ಲರ ಗಮನ ಸೆಳೆದಿದ್ದು ನಟಿಯ ಬೇಬಿ ಬಂಪ್.

310

ಇತ್ತೀಚೆಗೆ, ರೆಡ್ಡಿಟ್ ಬಳಕೆದಾರರು ವಿಡಿಯೋ ಹೊರಬಿಟ್ಟಿದ್ದು, ನಟಿಯು ಕಪ್ಪು ಓವರ್‌ಸೈಜ್ಡ್ ಕೋಟ್ ಧರಿಸಿದ್ದು, ಅದರಲ್ಲಿ ಹೊಟ್ಟೆ ಮುಂದಗಿರುವಂತೆ ವಿಡಿಯೋದಲ್ಲಿ ಕಾಣುತ್ತಿದೆ. 

410

ಪಕ್ಕದಲ್ಲಿ ವಿಕ್ಕಿ ನೀಲಿ ಶರ್ಟ್ ಮತ್ತು ಕಂದು ಬಣ್ಣದ ಬೂಟುಗಳೊಂದಿಗೆ ಕಪ್ಪು ಡೆನಿಮ್‌ನಲ್ಲಿ ಕತ್ರೀನಾ ಕೈ ಹಿಡಿದು ದಾರಿಹೋಕರು ತಳ್ಳದಂತೆ ರಕ್ಷಿಸುತ್ತಿದ್ದಾರೆ. 

510

ಎಲ್ಲಕ್ಕಿಂತ ಹೆಚ್ಚಾಗಿ, ಕತ್ರಿನಾ ಅವರ ಬೇಬಿ ಬಂಪ್ ಎಲ್ಲರ ಗಮನವನ್ನು ಸೆಳೆಯುತ್ತಿದೆ ಮತ್ತು ಅವರ ಗರ್ಭಿಣಿ ವದಂತಿಗಳನ್ನು ಪೋಷಿಸಿದೆ.

610

4 ದಿನಗಳ ಹಿಂದೆ ಪತಿ ವಿಕ್ಕಿಗೆ ಇನ್ಸ್ಟಾಗ್ರಾಂನಲ್ಲಿ ಆತನ ಫೋಟೋಗಳನ್ನು ಹಾಕಿ ವಿಶ್ ಮಾಡಿರುವ ಕ್ಯಾಟ್, 3 ಬಿಳಿ ಹಾರ್ಟ್ ಮತ್ತು 3 ಕೇಕ್‌ಗಳ ಚಿತ್ರ ಹಾಕಿದ್ದರು. ಇದರಲ್ಲಿ ಆಕೆ 3 ಹಾರ್ಟ್ ಬಳಸಿರುವುದು ಕೂಡಾ ತಾವೀಗ ಮೂವರು ಎಂದು ಸೂಚಿಸುವುದಾಗಿದೆ ಎಂದು ನೆಟ್ಟಿಗರು ಗೆಸ್ ಮಾಡುತ್ತಿವೆ.

710

ದಂಪತಿ ಲಂಡನ್‌ನಲ್ಲೇ ಇದ್ದು, ಅಲ್ಲಿಯೇ ಮಗುವನ್ನು ಹೊಂದಿ ಬಳಿಕ ಭಾರತಕ್ಕೆ ಹಿಂದಿರುಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

810

ಅಂದ ಹಾಗೆ ಕತ್ರೀನಾ ವಿಕ್ಕಿಯ ವಿಡಿಯೋ ನೋಡಿದ ಅಭಿಮಾನಿಗಳು- 'ಆಕೆ ನಡೆವ ಶೈಲಿ ಬೇರೆಯ ರೀತಿಯಾಗಿದೆ, ಅವಳು ಗರ್ಭಿಣಿಯಾಗಿರುವುದು ಪಕ್ಕಾ' ಎನ್ನುತ್ತಿದ್ದಾರೆ. ಹಲವರು ಈ ವಿಷಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

910

ಇತ್ತೀಚೆಗೆ ಸೆಲೆಬ್ರಿಟಿಗಳು ವಿಷಯಗಳನ್ನು ಗುಟ್ಟಾಗಿಡುವ ಟ್ರೆಂಡ್ ಹೆಚ್ಚಿದೆ. ವಿವಾಹ, ಪ್ರೀತಿ, ಮಗುವಾಗಿದ್ದನ್ನು ಕೂಡಾ ಮುಚ್ಚಿಡುತ್ತಾರೆ. 

1010

ತಮ್ಮ ವೈಯಕ್ತಿಕ ಬದುಕನ್ನು ಜನರ ಕಣ್ಣಿಂದ ದೂರವಿರಿಸಲು ಬಯಸುತ್ತಾರೆ. ಆದರೆ, ಜಗತ್ತಿಗೆ ಮೈ ತುಂಬಾ ಕಣ್ಣುಗಳು. ಯಾರು ಏನೇ ಮುಚ್ಚಿಟ್ಟರೂ ಅವು ಹೊರಬರುತ್ತವೆ. ಆದರೂ, ಈ ಜೋಡಿ ಸ್ವತಃ ವಿಷಯ ಕನ್ಫರ್ಮ್ ಮಾಡದೆ ಸುದ್ದಿಯು ವದಂತಿಯಾಗೇ ಉಳಿಯುತ್ತದೆ. 

click me!

Recommended Stories