ನೋವಿನ ಘಟನೆ ಬಿಚ್ಚಿಟ್ಟ ನಟಿ ಪಾಯಲ್‌ಗೆ ಸಿನಿಮಾ ಇಂಡಸ್ಟ್ರಿಯಿಂದಲೇ ನಿಷೇಧ ಭೀತಿ!

Published : May 21, 2024, 03:20 PM IST

ನಟಿ ಪಾಯಲ್ ಕಳೆದ ನಾಲ್ಕು ವರ್ಷದಿಂದ ಎದುರಿಸುತ್ತಿರುವ ನೋವನ್ನು ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಾಯಲ್ ಈ ಕುರಿತು ನೋವು ತೋಡಿಕೊಂಡ ಬೆನ್ನಲ್ಲೇ ಇದೀಗ ನಿರ್ಮಾಪಕರು ನಟಿಯನ್ನು ಸಿನಿಮಾ ಇಂಡಸ್ಟ್ರಿಯಿಂದ ನಿಷೇಧದ ಎಚ್ಚರಿಕೆ ನೀಡಿದ್ದಾರೆ.  

PREV
18
ನೋವಿನ ಘಟನೆ ಬಿಚ್ಚಿಟ್ಟ ನಟಿ ಪಾಯಲ್‌ಗೆ ಸಿನಿಮಾ ಇಂಡಸ್ಟ್ರಿಯಿಂದಲೇ ನಿಷೇಧ ಭೀತಿ!

ನಟಿ ಪಾಯಲ್ ರಜಪೂತ್ ಹೆಡ್‌ಬುಷ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿಕೊಟ್ಟಿದ್ದರು. ಹೆಡ್‌ಬುಷ್ ಚಿತ್ರದಲ್ಲಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದರು.

 

28

ಪಾಯಲ್ ರಜಪೂತ್ ದಕ್ಷಿಣ ಭಾರತದ ಪೈಕಿ ತೆಲುಗು ಸಿನಿಮಾದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗು ಸಿನಿಮಾದಿಂದಲೇ ಬ್ಯಾನ್ ಭೀತಿ ಎದುರಿಸುತ್ತಿದ್ದಾರೆ.
 

38

ತೆಲುಗು ಸಿನಿಮಾ ರಕ್ಷಣ ಇದೀಗ ನಟಿ ಪಾಯಲ್ ರಜಪೂತ್‌ಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ರಕ್ಷಣ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಆದರೆ ವಿವಾದಗಳು ಹೆಚ್ಚಾಗಿದೆ.

 

48
Payal Rajput

2019-20ರಲ್ಲಿ ರಕ್ಷಣಾ ಸಿನಿಮಾ ಶೂಟಿಂಗ್ ಮಾಡಲಾಗಿತ್ತು. ನಾಯಕಿಯಾಗಿ ಪಾಯಲ್ ಕಾಣಿಸಿಕೊಂಡಿದ್ದರು. ಆದರೆ ಶೂಟಿಂಗ್ ಬಳಿಕ ಸಿನಿಮಾ ರಿಲೀಸ್ ಆಗಲಿಲ್ಲ. ಇದೀಗ 4 ವರ್ಷಗಳ ಬಳಿಕ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.
 

58

ನನ್ನ ಇತ್ತೀಚೆಗಿನ ಯಶಸ್ಸಿನ್ನು ಅಧಾರವಾಗಿಟ್ಟುಕೊಂಡು ಚಿತ್ರತಂಡ ರಕ್ಷಣ ಚಿತ್ರ ರಿಲೀಸ್ ಮಾಡುತ್ತಿದೆ. ಆದರೆ ನನಗೆ ಚಿತ್ರದ ವೇತನ ನೀಡಿಲ್ಲ ಎಂದು ನಟಿ ಆರೋಪಿಸಿದ್ದಾರೆ. 
 

68

ನಾಯಕಿ ಪಾಯಲ್‌ಗೆ ಸಿನಿಮಾ ರಿಲೀಸ್ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಧಮ್ಕಿ ಹಾಕಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
 

78

ಯಾವುದೇ ಮಾಹಿತಿ ನೀಡಿದ ದಿಢೀರ್ ಆಗಿ ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಲು ಬೆದರಿಕೆ ಹಾಕುತ್ತಿದ್ದಾರೆ. ನಾನು ಈಗಾಗಲೇ ಇಚತರ ಕೆಲ ಚಿತ್ರದ ಶೂಟಿಂಗ್‌ನಲ್ಲಿರುವ ಕಾರಣ ಪ್ರಚಾರಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಇಷ್ಟೇ ಅಲ್ಲ ಹಳೇ ಬಾಕಿ ನೀಡುವಂತೆ ಸೂಚಿಸಿದ್ದೇನೆ ಎಂದು ನಟಿ ಹೇಳಿದ್ದಾರೆ.
 

88

ನಟಿ ಹೇಳಿಕೆಯಿಂದ ಚಿತ್ರ ತಂಡ ಗರಂ ಆಗಿದ್ದು, ತೆಲುಗು ಸಿನಿಮಾ ಇಂಡಸ್ಟ್ರಿಯಿಂದಲೇ ನಿಷೇಧ ಮಾಡುವುದಾಗಿ ನಿರ್ಮಾಪಕರು, ಚಿತ್ರ ತಂಡ ಬೆದರಿಸಿದೆ ಎಂದು ಪಾಯಲ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories