ಕಿಯಾರಾ ಅಡ್ವಾಣಿ ಲಕ್ಷುರಿಯಸ್‌ ಲೈಫ್‌ಸ್ಟೈಲ್‌ ಮತ್ತು ನೆಟ್‌ ವರ್ತ್‌!

Suvarna News   | Asianet News
Published : Aug 06, 2021, 04:57 PM IST

ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಇತ್ತೀಚಿಗೆ ತಮ್ಮ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜುಲೈ 31,1992ರಂದು ಮುಂಬೈನಲ್ಲಿ ಜನಿಸಿದ ಕಿಯಾರಾ, ಕಡಿಮೆ ಅವಧಿಯಲ್ಲಿ ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇಂಡಸ್ಟ್ರಿಯಿಯಲ್ಲಿ ಯಶಸ್ಸು ಗಳಿಸುವ ಜೊತೆಗೆ, ಕಿಯಾರಾ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಟಿಯ ನೆಟ್‌ವರ್ತ್‌ ಹೆಚ್ಚಳದೊಂದಿಗೆ ಆಸ್ತಿ, ಐಷಾರಾಮಿ ಮನೆ, ಬ್ರಾಂಡ್ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಕಿಯಾರಾ ಅಡ್ವಾಣಿಯವರ ಲಕ್ಷುರಿಯಸ್‌ ಲೈಫ್‌ ಸ್ಟೈಲ್‌ ಹಾಗೂ  ವಾರ್ಷಿಕ ಗಳಿಕೆಯ ವಿವರ ಇಲ್ಲಿದೆ.

PREV
117
ಕಿಯಾರಾ ಅಡ್ವಾಣಿ ಲಕ್ಷುರಿಯಸ್‌ ಲೈಫ್‌ಸ್ಟೈಲ್‌ ಮತ್ತು ನೆಟ್‌ ವರ್ತ್‌!
kiara

ಮುಂಬೈನಲ್ಲಿ ಶಿಕ್ಷನ ಮುಗಿಸಿದ ನಂತರ ಕಿಯಾರಾ ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದರು. ನಂತರ ಅವರು ಸಿನಿಮಾಗಳಲ್ಲಿ ಆಫರ್‌ಗಳನ್ನು ಪಡೆಯಲು ಪ್ರಾರಂಭಿಸಿದರು. 

217

ಕಿಯಾರಾ  ಸುಮಾರು 23 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ. ವರದಿಗಳ ಪ್ರಕಾರ, ಅವರ ಗಳಿಕೆ ಪ್ರತಿ ವರ್ಷ ಸುಮಾರು 25% ಹೆಚ್ಚುತ್ತಿದೆ.

317
kiara

ಸಿನಿಮಾಗಳ ಹೊರತಾಗಿ ನಟಿ  ಪ್ರಚಾರಗಳು ಮತ್ತು ಜಾಹೀರಾತುಗಳಿಂದ ಸಾಕಷ್ಟು ಗಳಿಸುತ್ತಾರೆ. ಹೀಗೆ ಪ್ರತಿ ತಿಂಗಳು ಆಕೆ ಸುಮಾರು 30 ರಿಂದ 40 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ.

417

ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಗಟ್ಟಲೆ ಅನುಯಾಯಿಗಳನ್ನು ಹೊಂದಿರುವ ಕಬೀರ್‌ಸಿಂಗ್‌ ಫೆಮ್‌ನ ನಟಿ  ಬ್ರಾಂಡ್ ಪ್ರಚಾರಕ್ಕಾಗಿ ಲಕ್ಷ ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. 

517

ಮಾಧ್ಯಮ ವರದಿಗಳ ಪ್ರಕಾರ, ನಟಿ  ಒಂದು ಜಾಹೀರಾತಿಗಾಗಿ 20 ಲಕ್ಷ ರೂಪಾಯಿಗಳ ಫೀಸ್‌ ಗಳಿಸುತ್ತಾರೆ.  ಈ ಮೂಲಗಳ ಅವರ ವಾರ್ಷಿಕ 2-3 ಕೋಟಿ ರೂ.


 

617

ಸೋಶಿಯಲ್‌ ಮೀಡಿಯಾದಲ್ಲಿ ಸಕ್ಕತ್‌ ಆಕ್ಟೀವ್‌ ಆಗಿರುವ ಕಿಯಾರಾ ಅಡ್ವಾಣಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಮೂಲಕ  ಅನೇಕ ಬಾರಿ ಅವರು ತಮ್ಮ ಮನೆಯ ಝಲಕ್‌ಗಳನ್ನು ತೋರಿಸಿದ್ದಾರೆ.

717

ನಟಿ ಮುಂಬೈನಲ್ಲಿ  ಐಷಾರಾಮಿ ಅಪಾರ್ಟ್‌ಮೆಂಟ್‌ ಹೋಂದಿದ್ದು ಮನೆಯನ್ನು ಬಹಳ ಸುಂದರವಾಗಿ ಅಲಂಕರಿಸಿದ್ದಾರೆ. 

817

ಸುದ್ದಿಯ ಪ್ರಕಾರ, ಸುಮಾರು 14 ರಿಂದ 15 ಕೋಟಿ ಬೆಲೆಯ ಕಿಯಾರಾದ ಈ ಐಷಾರಾಮಿ ಅಪಾರ್ಟ್ಮೆಂಟ್ 51 ಅಂತಸ್ತಿನ ಕಟ್ಟಡದಲ್ಲಿದೆ.

917

ಕಿಯಾರಾ ಹೆಚ್ಚಾಗಿ ತನ್ನ ಮರ್ಸಿಡಿಸ್ ಬೆಂಜ್‌ E220D ಯಲ್ಲಿ  ಓಡಾಡುವುದು ಕಾಣಬಹುದಾಗಿದೆ. ಇದರ ಬೆಲೆ ಸುಮಾರು 60 ಲಕ್ಷ ರೂ. ಇದಲ್ಲದೆ  ಅವರು ಬಿಎಂಡಬ್ಲ್ಯು ಕಾರನ್ನೂ ಹೊಂದಿದ್ದಾರೆ.

1017
1117

ಈ ದಿನಗಳಲ್ಲಿ  ಕಿಯಾರಾ  ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ . ಇಬ್ಬರೂ ಸುಮಾರು 2 ವರ್ಷಗಳ ಸಂಬಂಧ ಹೊಂದಿದ್ದಾರೆ ಎಂಬ ರೂಮರ್‌ ಹರಿದಾಡುತ್ತಿದ್ದಾರೆ. ಆದರೆ  ಇಲ್ಲಿಯವರೆಗೆ ಇಬ್ಬರೂ
ತಮ್ಮ ಸಂಬಂಧದ ಬಗ್ಗೆ ಮಾತನಾಡಿಲ್ಲ. 

1217

ಕಳೆದ ವರ್ಷ, ಇಬ್ಬರೂ ಹೊಸ ವರ್ಷವನ್ನು ಆಚರಿಸಲು ಆಫ್ರಿಕಾಕ್ಕೆ ಹೋಗಿದ್ದರು ಹಾಗೂ  ಈ ಬಾರಿ ಹೊಸ ವರ್ಷದ ಸಂದರ್ಭದಲ್ಲಿ, ಈ ಜೋಡಿ ಮಾಲ್ಡೀವ್ಸ್‌ನಲ್ಲಿ ಒಟ್ಟಿಗೆ ಹಾಲಿಡೇ ಎಂಜಾಯ್‌ ಮಾಡಿದ ವರದಿಯಾಗಿತ್ತು. 

1317

ಇಬ್ಬರೂ ಮೊದಲ ಬಾರಿಗೆ ಶೇರ್‌ಶಾ  ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದು ಈ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಯಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.


 

1417

ಸಿದ್ಧಾರ್ಥ್ ಮತ್ತು ಕಿಯಾರಾ ಇತ್ತೀಚೆಗೆ ತಮ್ಮ ಪೋಷಕರನ್ನು ಪರಸ್ಪರ ಪರಿಚಯಿಸಿಕೊಂಡಿದ್ದರು. ಕಿಯಾರಾ ಸಿದ್ಧಾರ್ಥ್ ಮತ್ತು ಆತನ ಪೋಷಕರನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿದರು.  

1517

ಇಬ್ಬರ ಪೋಷಕರು ಕೂಡ ಈ ಸಂಬಂಧವನ್ನು  ಒಪ್ಪಿಕೊಂಡಿದ್ದಾರೆ ಮತ್ತು  ಎಲ್ಲವೂ ಸರಿಯಾಗಿ ನಡೆದರೆ, ಇಬ್ಬರೂ ಶೀಘ್ರದಲ್ಲೇ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಾರೆ ಎನ್ನುತ್ತವೆ ವರದಿಗಳು. 

1617

2014 ರಲ್ಲಿ ಫುಲ್ಗಿ ಚಿತ್ರದ ಮೂಲಕ ವೃತ್ತಿಜೀವನ ಆರಂಭಿಸಿದ ಕಿಯಾರಾ, ನಂತರ MS ಧೋನಿ: ದಿ ಅನ್ಟೋಲ್ಡ್ ಸ್ಟೋರಿ, ಮೆಷಿನ್, ಲಸ್ಟ್ ಸ್ಟೋರೀಸ್, ಕಲಾಂಕ್, ಕಬೀರ್ ಸಿಂಗ್, ಗುಡ್ ನ್ಯೂಸ್, ಲಕ್ಷ್ಮಿ, ಇಂದು ಕಿ ಜವಾನಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

1717

ಅವರ ಮುಂಬರುವ ಚಲನಚಿತ್ರಗಳು ಶೇರ್ಶಾ, ಭೂಲ್ ಭುಲೈಯಾ 2, ಜಗ್ ಜಗ್ ಜಿಯೋ, ಮಿಸ್ಟರ್ ಲೆಲೆ.  ಕಿಯಾರಾ ಕೆಲವು ದಕ್ಷಿಣ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.

click me!

Recommended Stories