ದೆಹಲಿ ಆರತಕ್ಷತೆ: ಸಿಂಪಲ್‌ ಲುಕ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೋಟೋ ವೈರಲ್‌

Published : Feb 11, 2023, 05:07 PM IST

ಫೆಬ್ರವರಿ 7ರಂದು ಜೈಸಲ್ಮೇರ್‌ನಲ್ಲಿ ಮದುವೆಯಾದ ಕಿಯಾರಾ ಅಡ್ವಾಣಿ (Kiara Advani)  ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ದೆಹಲಿಯ ಮನೆಯಲ್ಲಿ ರಿಸೆಪ್ಷನ್‌ ಅಯೋಜಿಸಿದ್ದರು. ದೆಹಲಿಯಲ್ಲಿ ಕಿಯಾರಾ - ಸಿದ್ಧಾರ್ಥ್ ಮಲ್ಹೋತ್ರಾ ಅವರ ಆರತಕ್ಷತೆ ಪಾರ್ಟಿಯಿಂದ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದು ಖಾಸಗಿ ಕಾರ್ಯಕ್ರಮವಾಗಿದ್ದು, ಸ್ನೇಹಿತರು ಮತ್ತು ಕುಟುಂಬವನ್ನು ಮಾತ್ರ ಆಹ್ವಾನಿಸಲಾಗಿತ್ತು.

PREV
17
ದೆಹಲಿ ಆರತಕ್ಷತೆ: ಸಿಂಪಲ್‌ ಲುಕ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೋಟೋ ವೈರಲ್‌

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದ ಭವ್ಯ ವಿವಾಹದ ನಂತರ, ನವವಿವಾಹಿತ ದಂಪತಿ ಮದುವೆಯ ನಂತರದ ಪಾರ್ಟಿಗಾಗಿ ತಮ್ಮ ಕ್ಯಾಶುಯಲ್ ಆಗಿ ಇರಿಸಿಕೊಂಡರು.

27

ಹೊಸ ಫೋಟೋಗಳಲ್ಲಿ, ಕಿಯಾರಾ ಅಡ್ವಾಣಿ ಫ್ಯೂಷಿಯಾ ಪಿಂಕ್ ದುಪಟ್ಟಾದೊಂದಿಗೆ ಸರಳವಾದ ಬಿಳಿ ಸಲ್ವಾರ್ ಸೂಟ್ ಧರಿಸಿದ್ದಾರೆ. ಸಿಂಧೂರ್ ಮತ್ತು ಮಂಗಳಸೂತ್ರದ ಜೊತೆ ಗುಲಾಬಿ ಬಣ್ಣದ ಬಳೆಯನ್ನು ಧರಿಸಿದ್ದ ಕಿಯಾರಾ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


 

37

ಅದೇ ಸಮಯದಲ್ಲಿ ಸಿದ್ದಾರ್ಥ್ ವ್ಯಾಲೆಂಟೈನ್ಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಡೆನಿಮ್ ಮತ್ತು ಕೆಂಪು  ಟಿ-ಶರ್ಟ್‌ನಲ್ಲಿ ಕ್ಯಾಶುಯಲ್ ಲುಕ್ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಅವರು ತಮ್ಮ ಹತ್ತಿರದ ಸಂಬಂಧಿಕರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರಬೇಕು.
  


 

47

ಗುರುವಾರ ರಾತ್ರಿ, ದೆಹಲಿಯ ಆರತಕ್ಷತೆ ಸ್ಥಳದಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಕ್ಯಾಶುಯಲ್ ಆಗಿ ಕಾಣಿಸಿಕೊಂಡರು. ಆದರೆ, ಅವರು ಪಾಪರಾಜಿಗಳಿಗೆ ಪೋಸ್ ನೀಡಲಿಲ್ಲ. 

57

ಜೈಸಲ್ಮೇರ್‌ನಲ್ಲಿ ತಮ್ಮ ವಿವಾಹ ಮತ್ತು ದೆಹಲಿಯಲ್ಲಿ ಕುಟುಂಬದೊಂದಿಗೆ ಖಾಸಗಿ ಆರತಕ್ಷತೆಯ ನಂತರ, ನವವಿವಾಹಿತ ದಂಪತಿಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಚಿತ್ರರಂಗದ ಎಲ್ಲಾ ಸ್ನೇಹಿತರಿಗಾಗಿ ಗ್ರ್ಯಾಂಡ್‌ ಬ್ಯಾಷ್ ಅನ್ನು ಆಯೋಜಿಸಲು ಸಿದ್ಧರಾಗಿದ್ದಾರೆ.

67

ಫೆಬ್ರವರಿ 12 ರ ಭಾನುವಾರದಂದು 5-ಸ್ಟಾರ್ ಹೋಟೆಲ್‌ನಲ್ಲಿ ಭವ್ಯವಾದ ಪಾರ್ಟಿಯೊಂದಿಗೆ ಸಂಭ್ರಮಾಚರಣೆಯನ್ನು ಮುಂದುವರಿಸಲು ಕಿಯಾರಾ ಸಿದ್ಧ್‌ ದಂಪತಿಗಳು ಮುಂಬೈಗೆ ಹಿಂದಿರುಗುತ್ತಾರೆ. 

77

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹಾಗೂ ವರುಣ್ ಧವನ್ ಅವರ ಪತ್ನಿ ನತಾಶಾ ದಲಾಲ್ ಅವರೊಂದಿಗೆ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಮೂಲಕ 'ಸ್ಟೂಡೆಂಟ್ ಆಫ್ ದಿ ಇಯರ್' ರಿಯ್ಯೂನಿಯನ್‌ ಆಗುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories