ಪತ್ನಿಯ ನಿರೀಕ್ಷೆ vs ವಾಸ್ತವ ಎಂದು ಫೋಟೋ ಹಂಚಿಕೊಂಡ ಯಶ್; ರವೀನಾ ಟಂಡನ್ ರಿಯಾಕ್ಷನ್ ಹೀಗಿತ್ತು

First Published | May 7, 2023, 12:08 PM IST

ಪತ್ನಿಯ ನಿರೀಕ್ಷೆ vs ವಾಸ್ತವ ಎಂದು ರಾಕಿಂಗ್ ಸ್ಟಾರ್ ಯಶ್ ಫೋಟೋ ಶೇರ್ ಮಾಡಿದ್ದಾರೆ. 

ರಾಕಿಂಗ್ ಯಶ್ ಮುಂದಿನ ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್-2 ರಿಲೀಸ್ ಆಗಿ ವರ್ಷದ ಮೇಲಾದರೂ ಯಶ್ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿರುವ ಅಭಿಮಾನಿಗಳ ರಾಕಿಂಗ್ ಸ್ಟಾರ್ ಫೋಟೋ ನೋಡಿ ಫಿದಾ ಆಗಿದ್ದಾರೆ. ಪತ್ನಿ ಮತ್ತು ಮಕ್ಕಳ ಜೊತೆಗಿರುವ ಯಶ್ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ. 

Tap to resize

ಯಶ್ ಶೇರ್ ಮಾಡಿರುವ ಎರಡು ಫೋಟೋಗಳಲ್ಲಿ ಮೊದಲ ಫೋಟೋದಲ್ಲಿ ಸುಂದರ ಪ್ರಕೃತಿ ನಡುವೆ ಕೈ ಕೈ ಹಿಡಿದು ಯಶ್ ಮತ್ತು ರಾಧಿಕಾ ನಡೆದುಕೊಂಡು ಬರುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಶ್ ಮತ್ತು ರಾಧಿಕಾ ಇಬ್ಬರೂ ಮುದ್ದಾದ ಇಬ್ಬರು ಮಕ್ಕಳನ್ನು ಎತ್ತಿಕೊಂಡಿದ್ದಾರೆ. 
 

ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡಿ ನನ್ನ ಪತ್ನಿಯ ನಿರೀಕ್ಷೆ ಮತ್ತು ವಾಸ್ತವ ಎಂದು ಕ್ಯಾಪ್ಷನ್ ನೀಡಿದ್ದಾರೆ. ಯಶ್ ಮತ್ತು ರಾಧಿಕಾ ಸುಂದರ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬರುತ್ತಿದೆ.  

ಅಭಿಮಾನಿಗಳು ಮಾತ್ರವಲ್ಲದೇ ನಟಿ ರವೀನಾ ಟಂಡನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅಂದರೆ ಇದೇ ಅಲ್ವಾ ನಮ್ಮ ಮಕ್ಕಳನ್ನು ನಾವು ಎನ್ನುವುದನ್ನು ಪೂರ್ಣಗೊಳಿಸಿವೆ ಎಂದು ಹೇಳಿದ್ದಾರೆ. 

ಯಶ್ ಯಾವುದೇ ಫೋಟೋ ಶೇರ್ ಮಾಡಿದರೂ ಸಹ ಅಭಿಮಾನಿಗಳು ಪ್ರಶ್ನೆ ಒಂದೇಯಾಗಿದೆ. ಮುಂದಿನ ಸಿನಿಮಾ ಯಾವಾಗ ಎಂದು. ಹೊಸ ಪೋಸ್ಟ್‌ಗೂ ಸಹ ಅಭಿಮಾನಿಗಳು ನಮ್ಮ ನಿರೀಕ್ಷೆ ಮುಂದಿನ ಸಿನಿಮಾ ಮೇಲೆ ಎಂದು ಹೇಳಿದ್ದಾರೆ. 

Latest Videos

click me!