ಬೇಡ ಅಂದ್ರೂ ಬಿಡದ ತಂಡ; ಎಳೆದುಕೊಂಡು ಬಂದು ಸಮಂತಾ ಹುಟ್ಟುಹಬ್ಬ ಆಚರಿಸಿದ 'ಸಿಟಾಡೆಲ್' ಟೀಂ

First Published | May 6, 2023, 1:51 PM IST

ಬೇಡ ಅಂದ್ರು ಬಿಡದೆ ಎಳೆದುಕೊಂಡು ಬಂದು ಸಮಂತಾ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ ಸಿಟಾಡೆಲ್ ತಂಡ.

ನಟಿ ಸಮಂತಾ ರುತ್ ಪ್ರಭು ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಸಮಂತಾ ಜನ್ಮದಿನಕ್ಕೆ ಅಭಿಮಾನಿಗಳು ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳು ವಿಶ್ ಮಾಡಿ ಸಂಭ್ರಮಿಸಿದ್ದರು. 

ಸಮಂತಾ ಈ ಬಾರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ ಅವರ ಸಿಟಾಡೆಲ್ ತಂಡ  ಸಮಂತಾ ಅವರಿಗೆ ಸರ್ಪ್ರೈಸ್ ನೀಡಿದೆ. ರಾತ್ರಿ ಸಮಂತಾ ಹುಟ್ಟುಹಬ್ಬ ಆಚರಿಸಿದೆ. 

Tap to resize

ಸಮಂತಾ ಯಾವುದೇ ಕೇಕ್, ಬಲೂನ್, ಸರ್ಪ್ರೈಸ್ ಬೇಡ ಎಂದಿದ್ದರು. ಆದರೆ ಸಿಟಾಡೆಲ್ ತಂಡ ರಾತ್ರೋರಾತ್ರಿಗೆ ಸರ್ಪ್ರೈಸ್ ನೀಡಿದೆ. ಹುಟ್ಟುಹಬ್ಬ ಆಚರಣೆಯ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಸಮಂತಾ. 

ಏಪ್ರಿಲ್ ಸಮಂತಾ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಬಾರಿ ತುಂಬಾ ಸರಳವಾಗಿ ಜನ್ಮದಿನ ಆಚರಿಸಿಕೊಂಡರು. ಸಿನಿಮಾ ಕೆಲಸದಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ಸದ್ಯ ರಾಜ್ ಮತ್ತು ಡಿಕೆ ನಿರ್ದೇಶನದ ಸಿಟಾಡೆಲ್ ನಲ್ಲಿ ನಟಿಸುತ್ತಿದ್ದಾರೆ. 

ಸಿಟಾಡೆಲ್ ನಿರ್ದೇಶಕರಾದ ರಾಜ್ ಮತ್ತು ಡಿಕೆ ಸೇರಿದಂತೆ ಇಡೀ ತಂಡ ಸಮಂತಾಗೆ ರಾತ್ರೋರಾತ್ರಿ ಬಿಗ್ ಸರ್ಪ್ರೈಸ್ ನೀಡಿದ್ದಾರೆ. 'ಯಾವುದೇ ಆಶ್ಚರ್ಯವಿಲ್ಲ, ಕೇಕ್ ಇಲ್ಲ, ಬಲೂನ್ ಇಲ್ಲ ನನಗೆ ಬೇಕಾಗಿದ್ದನ್ನು ನಾನು ಕೇಳಿ ಪಡೆಯುತ್ತೇನೆ' ಎಂದು ಸಮಂತಾ ಹೇಳಿದ್ದಾರೆ. 

ಸಮಂತಾ ಬೇಡ ಎಂದರೂ ಅವರ ತಂಡ ಎಳೆದುಕೊಂಡು ಬಂದು ಹುಟ್ಟುಹಬ್ಬ ಅಚರಣೆ ಮಾಡಿದ್ದಾರೆ. ಸಮಂತಾ ರೂಮ್ ಒಳಗೆ ಎಂಟ್ರಿ ಕೊಡಲು ನರಾಕರಿಸಿ ಓಡುತ್ತಾರೆ. ಆದರೆ ರಾಜ್-ಡಿಕೆ ಕರೆದುಕೊಂಡು ಬಂದು ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. 

ಸಮಂತಾ ಪ್ರಿಂಟೆಡ್ ನೈಟ್ ಶರ್ಟ್ ಮತ್ತು ಶಾರ್ಟ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾತ್ರಿ ಮಾತ್ರವಲ್ಲದೇ ಸಿಟಾಡೆಲ್ ಸೆಟ್‌ನಲ್ಲೂ ಸಮಂತಾ ಹುಟ್ಟುಹಬ್ಬ ಆಚರಿಸಲಾಗಿದೆ. ಇಡೀ ತಂಡದ ಜೊತೆ ಸಮಂತಾ ಹುಟ್ಟುಹಬ್ಬ ಆಚರಿಸಿದ್ದಾರೆ. ವರುಣ್ ಧವನ್ ಕೂಡ ಜೊತೆಯಲ್ಲಿದ್ದಾರೆ. 

ಸಿಟಾಡೆಲ್ ಹಿಂದಿ ವರ್ಷನ್‌ನಲ್ಲಿ ಸಮಂತಾ ಮತ್ತು ವರುಣ್ ಧವನ್ ನಟಿಸುತ್ತಿದ್ದಾರೆ. ಇಂಗ್ಲಿಷ್ ನಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಿದ್ದರು. ಇತ್ತೀಚಿಗಷ್ಟೆ ಪ್ರಿಯಾಂಕಾ ಚೋಪ್ರಾ ಸಿಟಾಡೆಲ್ ರಿಲೀಸ್ ಆಗಿದೆ. ಹಿಂದಿ ವರ್ಷನ್ ತಯಾರಾಗುತ್ತಿದೆ. 

Latest Videos

click me!