ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ ಅಂದ್ರೆ ಅದು ಕೆಜಿಎಫ್. ಬೇರೆ ಭಾಷೆಗಳ ಸಿನಿಮಾಗಳನ್ನು ರೀಮೇಕ್ ಮಾಡ್ತಿದ್ದ ಕನ್ನಡ ಚಿತ್ರರಂಗ, ಕೆಜಿಎಫ್ ಮೂಲಕ ವಿಶ್ವದ ಗಮನ ಸೆಳೆಯಿತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್, ರಾಕಿ ಭಾಯ್ ಎಂಬ ಗ್ಯಾಂಗ್‌ಸ್ಟರ್ ಆಗಿ ಮಿಂಚಿದ್ರು. ಈ ಚಿತ್ರ ಪ್ಯಾನ್ ಇಂಡಿಯಾದಲ್ಲಿ ಸೂಪರ್ ಹಿಟ್ ಆದ ನಂತರ, ಎರಡನೇ ಭಾಗವನ್ನೂ ನಿರ್ಮಿಸಲಾಯಿತು.