ತಮನ್ನಾ, ಹಂಸಿಕಾ ಜೊತೆ ಆಡ್‌ಗಳಲ್ಲಿ ನಟಿಸಿ ಫೇಮಸ್ ಆದ ಈತನ ಬಳಿ ಇದೆ 25ಕ್ಕೂ ಹೆಚ್ಚು ಲಕ್ಸುರಿ ಕಾರು

First Published | Nov 12, 2024, 3:11 PM IST

ತಮಿಳುನಾಡಿನ ಪ್ರಮುಖ ಉದ್ಯಮಿ ಮತ್ತು ಕಾಲಿವುಡ್‌ನಲ್ಲಿ ನಟರಾಗಿರುವ ಲೆಜೆಂಡ್‌ ಸರವಣನ್ ಅವರ ಬಳಿ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳ ಕಲೆಕ್ಷನ್ ಇದು ಆ ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ

ತಮಿಳುನಾಡಿನಲ್ಲಿ ಲೆಜೆಂಡ್ ಅಂದ್ರೆ ಮೊದಲು ನೆನಪಾಗುವ ವ್ಯಕ್ತಿ ಸರವಣನ್ ಅರುಳ್, ಕೋಟಿಗಳ ಒಡೆಯನಾಗಿರುವ ಈ ಉದ್ಯಮಿಗೆ ಸಿನಿಮಾದ ಮೇಲೂ ವಿಪರೀತವಾದ ಆಸಕ್ತಿ ಇದೆ. ಈ ಕಾರಣದಿಂದಾಗಿಯೇ ಅವರು ನಟಿಯರಾದ ಹಂಸಿಕಾ, ತಮನ್ನಾ ಮುಂತಾದ ಸ್ಟಾರ್ ನಟಿಯರ ಜೊತೆ ತಮ್ಮ ಅಂಗಡಿಯ ಜಾಹೀರಾತುಗಳಲ್ಲಿ ನಟಿಸಿ ಫೇಮಸ್ ಆದವರು.

ಆ್ಯಡ್‌ಗಳ ಮೂಲಕ ಫೇಮಸ್ ಆದ ಸರವಣನ್, ಲೆಜೆಂಡ್ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ರು. ಈ ಚಿತ್ರ 2022 ರಲ್ಲಿ ಬಿಡುಗಡೆಯಾಯ್ತು. ಈ ಚಿತ್ರಕ್ಕೆ ಸ್ವತಃ ಸರವಣನ್ ಅವರೇ ನಿರ್ಮಾಪಕರು. ಲೆಜೆಂಡ್ ಚಿತ್ರ ಒಟಿಟಿಯಲ್ಲಿ ಸಖತ್ ಹಿಟ್ ಆಯ್ತು. ಈಗ ದುರೈ ಸೆಂಥಿಲ್ ಕುಮಾರ್ ನಿರ್ದೇಶನದಲ್ಲಿ ಹೊಸ ಚಿತ್ರದಲ್ಲಿ ನಟಿಸ್ತಾ ಇದ್ದಾರೆ.

Tap to resize

ರೋಲ್ಸ್ ರಾಯ್ಸ್

ಸರವಣನ್‌ಗೆ ಕಾರುಗಳ ಮೇಲೆ ಅತೀವ ಪ್ರೀತಿ. ಅವರ ಬಳಿ ದುಬಾರಿ ರೋಲ್ಸ್ ರಾಯ್ಸ್ ಕಾರುಗಳೇ ಮೂರಿವೆ. 12 ಕೋಟಿ ರೂ. ಬೆಲೆಬಾಳುವ ರೋಲ್ಸ್ ರಾಯ್ಸ್ ಫ್ಯಾಂಟಮ್, 8.23 ಕೋಟಿ ರೂ. ಬೆಲೆಬಾಳುವ ರೋಲ್ಸ್ ರಾಯ್ಸ್ Wraith, 7.25 ಕೋಟಿ ರೂ. ಬೆಲೆಬಾಳುವ ರೋಲ್ಸ್ ರಾಯ್ಸ್ Ghost ಕಾರುಗಳಿವೆ.

ಆಸ್ಟನ್ ಮಾರ್ಟಿನ್

ಫೇಮಸ್ ಆಸ್ಟನ್ ಮಾರ್ಟಿನ್ ಕಾರುಗಳು ಸರವಣನ್ ಬಳಿ ಎರಡು ಇವೆ. ಒಂದು ಆಸ್ಟನ್ ಮಾರ್ಟಿನ್ DB11, ಇದರ ಬೆಲೆ 4.44 ಕೋಟಿ ರೂ. ಮತ್ತೊಂದು ಆಸ್ಟನ್ ಮಾರ್ಟಿನ್ Rapide S, ಇದರ ಬೆಲೆ 3.89 ಕೋಟಿ ರೂ.

ಮರ್ಸಿಡಿಸ್

ಮರ್ಸಿಡಿಸ್ ಕಾರುಗಳು ಸರವಣನ್ ಬಳಿ ಮೂರು ಇವೆ. ಮರ್ಸಿಡಿಸ್ E63 AMG ಬೆಲೆ 1.79 ಕೋಟಿ ರೂ., ಮರ್ಸಿಡಿಸ್ S63 AMG ಬೆಲೆ 2.86 ಕೋಟಿ ರೂ., ಮರ್ಸಿಡಿಸ್ Maybach S650 ಬೆಲೆ 3.3 ಕೋಟಿ ರೂ.

ಲಂಬೋರ್ಘಿನಿ

ಲಂಬೋರ್ಘಿನಿ ಕಾರುಗಳು ಸರವಣನ್ ಬಳಿ ಮೂರು ಇವೆ. ಲಂಬೋರ್ಘಿನಿ Aventador ಬೆಲೆ 5 ಕೋಟಿ ರೂ., ಲಂಬೋರ್ಘಿನಿ Huracan ಬೆಲೆ 3.22 ಕೋಟಿ ರೂ., ಲಂಬೋರ್ಘಿನಿ Urus ಬೆಲೆ 3.15 ಕೋಟಿ ರೂ.

ಬೆಂಟ್ಲಿ

ಬೆಂಟ್ಲಿ ಕಾರುಗಳು ಸರವಣನ್ ಬಳಿ ನಾಲ್ಕು ಇವೆ. ಬೆಂಟ್ಲಿ Mulsanne ಬೆಲೆ 7.3 ಕೋಟಿ ರೂ., ಬೆಂಟ್ಲಿ Bentayga ಬೆಲೆ 4.05 ಕೋಟಿ ರೂ., ಬೆಂಟ್ಲಿ Continental GT ಬೆಲೆ 4.41 ಕೋಟಿ ರೂ., ಬೆಂಟ್ಲಿ Flying Spur ಬೆಲೆ 3.32 ಕೋಟಿ ರೂ.

ಪೋರ್ಷೆ

ಪೋರ್ಷೆ ಕಾರುಗಳು ಸರವಣನ್ ಬಳಿ ಐದು ಇವೆ. Porsche Panamera Turbo ಬೆಲೆ 2.33 ಕೋಟಿ ರೂ., Porsche Panamera GTS ಬೆಲೆ 2.18 ಕೋಟಿ ರೂ., Porsche 911 Carrera ಬೆಲೆ 1.84 ಕೋಟಿ ರೂ., Porsche 911 Turbo ಬೆಲೆ 3.08 ಕೋಟಿ ರೂ., Porsche Cayenne Turbo ಬೆಲೆ 1.93 ಕೋಟಿ ರೂ.

ಬಿಎಂಡಬ್ಲ್ಯೂ

ಬಿಎಂಡಬ್ಲ್ಯೂ ಕಾರುಗಳು ಸರವಣನ್ ಬಳಿ ಎರಡು ಇವೆ. BMW X6 M ಬೆಲೆ 2.06 ಕೋಟಿ ರೂ., BMW M5 ಬೆಲೆ 1.63 ಕೋಟಿ ರೂ. ನೋಡಿದ್ರಲ್ಲ, ಬಹುತೇಕ ಎಲ್ಲ ಐಷಾರಾಮಿ ಕಾರುಗಳ ಸೆಟ್‌ಗಳೇ ಲೆಜೆಂಡ್ ಶರವಣನ್ ಬಳಿ ಇವೆ.

Latest Videos

click me!