KGF ಸುಂದರಿಯ ಯೋಗ ಪೋಸ್‌ಗೆ ಫ್ಯಾನ್ಸ್ ಫಿದಾ; ಮೌನಿ ಬ್ಯೂಟಿ ಸೀಕ್ರೆಟ್ ರಿವೀಲ್

Published : Jan 16, 2023, 04:47 PM IST

ಕೆಜಿಎಫ್ ಸುಂದರಿ ಮೌನಿ ಶೇರ್ ಮಾಡಿರುವ ಯೋಗ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

PREV
16
KGF ಸುಂದರಿಯ ಯೋಗ ಪೋಸ್‌ಗೆ ಫ್ಯಾನ್ಸ್ ಫಿದಾ; ಮೌನಿ ಬ್ಯೂಟಿ ಸೀಕ್ರೆಟ್ ರಿವೀಲ್

ನಟಿ ಮೌನಿ ರಾಯ್ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಸದಾ ಸುದ್ದಿಯಲ್ಲಿರುತ್ತಾರೆ. ಮೌನಿ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬ್ರಹ್ಮಾಸ್ತ್ರ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಮೌನಿ ರಾಯ್ ಸಿಕ್ಕಾಪಟ್ಟೆ ಸುತ್ತಾಡುತ್ತಿದ್ದಾರೆ. ದೇಶ-ವಿದೇಶ ಸುತ್ತಾಡುತ್ತಿರುವ ಮೌನಿ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

26

ಸದಾ ಟ್ರಿಪ್, ಸಿನಿಮಾ ಪ್ರಮೋಷನ್ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಮೌನಿ ಇದೀಗ ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ನಟಿಮಣಿಯರಿಗೆ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ. ಯೋಗ, ಜಿಮ್, ಡಯಟ್ ಅಂತ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಂಡವರಲ್ಲಿ ಮೌನಿ ಕೂಡ ಒಬ್ಬರು.

36

ತೆಳ್ಳಗೆ ಬಳಕುವ ಬಳ್ಳಿಯಂತಿರುವ ಮೌನಿಯ ಬ್ಯೂಟಿ ಸೀಕ್ರೆಟ್ ಯೋಗ. ಮೌನಿ ಯೋಗ ಮಾಡುತ್ತಿರುವ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೌನಿ ರಾಯ್ ತರಹೇವಾರಿ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
 

46

ಹೆಚ್ಚಾಗಿ ಮೌನಿ ರಾಯ್ ದಂಪತಿ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಸದಾ ಮಾಲ್ಡೀವ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಇತ್ತೀಚಿಗೆ ಅಂದರೆ ಹೊಸ ವರ್ಷಾಚರಣೆಗೆ ಅಬುಧಾಬಿಗೆ ಹಾರಿದ್ದರು. 2023ರನ್ನು ಅದ್ದೂರಿಯಾಗಿ ಸ್ವಾಗತಿಸಲಿದ್ದರು. ಪ್ರವಾಸದ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದರು. 

56

ಮೌನಿ ರಾಯ್ ತರಹೇವಾರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆಜಿಎಫ್ ಸುಂದರಿಯ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಿಟಿ, ಬ್ಯೂಟಿ, ಹಾಟ್ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಲೈಕ್ಸ್ ಕೂಡ ಹರಿದುಬಂದಿದೆ. 

66

ಮೌನಿ ನಟಿಸಿದ್ದ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೂ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದಾರೆ. ಕೆಜಿಎಫ್-1 ಸಿನಿಮಾದ ಗಲಿ ಗಲಿ..ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಈ ಹಾಡು ಮೌನಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬ್ರಹ್ಮಾಸ್ತ್ರ ಸಿನಿಮಾ ಅಭಿಮಾನಿಗಳು ಮುಂದೆ ಬಂದಿದ್ದಾರೆ. 

Read more Photos on
click me!

Recommended Stories