ಕ್ಯಾನ್ಸರ್‌ ಗೆದ್ದ ನಂತರ ಮತ್ತೊಂದು ರೋಗದಿಂದ ಬಳತ್ತಿರುವ 'ಜನ ಗಣ ಮನ' ನಟಿ ಮಮತಾ ಮೋಹನ್; ಭಾವುಕ ಪೋಸ್ಟ್

First Published | Jan 16, 2023, 2:53 PM IST

ಮಲಯಾಳಂ ಮೂಲದ ಖ್ಯಾತ ನಟಿ ಮಮತಾ ಮೋಹನ್ ಕ್ಯಾನ್ಸರ್ ಗೆದ್ದ ಬಳಿಕ ಮತ್ತೊಂದು ರೋಗದಿಂದ ಬಳಲುತ್ತಿರುವ ಬಗ್ಗೆ ರಿವೀಲ್ ಮಾಡಿದ್ದಾರೆ. 

ಸೌತ್ ಸಿನಿಮಾರಂಗದ ಖ್ಯಾತ ನಟಿಯರಲ್ಲಿ ಮಮತಾ ಮೋಹನ್ ಕೂಡ ಒಬ್ಬರು. ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಮಮತಾ ಮೋಹನ್ ಮಲಯಾಳಂ ಮೂಲದವರು. ಜನಗಣಮನ, ಫಾರೆನ್‌ಸಿಕ್ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ಮಮತಾ ಮೋಹನ್  ವಿಟಿಲಿಗೋ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.  

ಕ್ಯಾನ್ಸರ್ ರೋಗದಿಂದ ಗುಣಮುಖರಾಗಿರುವ ಮಮತಾ ಮೋಹನ್ ಇದೀಗ ವಿಟಿಲಿಗೋ ರೋಗದಿಂದ ಬಳಲುತ್ತಿದ್ದಾರೆ. ವಿಟಿಲಿಗೋ ಎಂದರೆ ಚರ್ಮದ ಮೂಲ ಬಣ್ಣ ಕಳೆದುಕೊಳ್ಳುವುದು. ಇದನ್ನು ತೊನ್ನು ರೋಗ ಅಂತನೂ ಕರೆಯುತ್ತಾರೆ. ತೊನ್ನು ರೋಗದ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ನಟಿ ಮಮತಾ ಮೋಹನ್ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಈ ಬಗ್ಗೆ ವಿವರಿಸಿದ್ದಾರೆ. 
  

Tap to resize

ಚರ್ಮದ ಬಣ್ಣ ಕಳೆದುಕೊಳ್ಳುವ ಬಗ್ಗೆ ನಟಿ ಮಮತಾ ಹೇಳಿಕೊಂಡಿದ್ದಾರೆ. 'ಪ್ರೀತಿಯ ಸೂರ್ಯ ನಾನು ನಿನ್ನನ್ನು ಅಪ್ಪಿಕೊಳ್ಳುತ್ತೇನೆ. ನಾನು ಬಣ್ಣವನ್ನು ಕಳೆದುಕೊಳ್ಳುತ್ತಿದ್ದೇನೆ. ನಾನು ಪ್ರತಿದಿನ ಬೆಳಿಗ್ಗೆ ನಿನಗಿಂದ ಮುಂಚೆ ಏಳುತ್ತೇನೆ ಯಾಕೆಂದರೆ ನಿನ್ನ ಮೊದಲಿನ ಕಿರಣ ಮಿನುಗುವುದನ್ನು ನೋಡಲು. ನಿನಗೆ ಸಿಕ್ಕಿದ್ದೆಲ್ಲಾ ಕೊಡು. ನಾನು ನಿನ್ನ ಕೃಪೆಯಿಂದ ಇದ್ದೀನಿ ಹಾಗಿಗಿ ಎಂದೆದಿಗೂ ಋಣಿಯಾಗಿರುತ್ತೇನೆ' ಎಂದು ಬರೆದುಕೊಂಡಿದ್ದಾರೆ.  

ಅಭಿಮಾಮಿಗಳು ಮಮತಾ ಫೋಟೋಗೆ ಅನೇಕ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ ಇದು ರೋಗವಲ್ಲ, ಇದು ಚರ್ಮದ ಸ್ಥಿತಿ ಅಷ್ಟೆ. ನೀವು ಒಬ್ಬರು ಹೋರಾಟಗಾರ್ತಿ ಎಲ್ಲರಿಗೂ ಸ್ಫೂರ್ತಿ. ಗುಣಮುಖರಾಗಿ' ಎಂದು ಹೇಳಿದ್ದಾರೆ. ನೀವು ಹೋರಾಟಗಾರ್ತಿ ಎಂದು ಮತ್ತೊಂದು ಕಾಮೆಂಟ್ ಮಾಡಿದ್ದಾರೆ. 

ನಟಿ ರೆಬಾ ಮೋನಿಕಾ ಕಾಮೆಂಟ್ ಮಾಡಿ, 'ನೀವು ಹೋರಾಟಗಾರ್ತಿ ಮತ್ತು ತುಂಬಾ ಸುಂದರವಾಗಿ ಇದ್ದೀರಿ' ಎಂದು ಹೇಳಿದ್ದಾರೆ. ಇನ್ನೂ ಅನೇಕರು ಕಾಮೆಂಟ್ ಮಾಡಿ ಧೈರ್ಯ ತುಂಬುತ್ತಿದ್ದಾರೆ. 
 

ನಟಿ ಮಮತಾ ಮೋಹನ್ ದಾಸ್ ಕಳೆದ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ಗುರಿಯಾಗಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡಿ ಕ್ಯಾನ್ಸರ್ ಮುಕ್ತ ಆಗಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.  ಕೊನೆಯದಾಗಿ ಜನಗಣಮನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 
 

Latest Videos

click me!