Katrina Vicky Kaushal wedding: ಅದ್ಧೂರಿ ಮದುವೆಗೆ ಬಂದ ಅತಿಥಿಗಳಿವರು

Published : Dec 07, 2021, 05:43 PM IST

ವಿಕ್ಕಿ ಕೌಶಲ್ (Vicky Kaushal)  ಮತ್ತು ಕತ್ರಿನಾ ಕೈಫ್ (Katrina Kaif) ಅವರ ವಿವಾಹ ಕಾರ್ಯಕ್ರಮಗಳು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಮಂಗಳವಾರದಿಂದ ಪ್ರಾರಂಭವಾಗಲಿವೆ.  ಮದುವೆಗೆ ಹಾಜರಾಗಲು  ಅನೇಕ ಬಾಲಿವುಡ್ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರೆ. ಮದುವೆಯಲ್ಲಿ ಪಾಲ್ಗೊಳ್ಳಲು ಹಲವು ಗಣ್ಯರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಕೈಫ್  ಕೌಶಲ್ ಮದುವೆಗೆ ಹೊರಟ ಸೆಲೆಬ್ರಿಟಿಗಳ ವಿಮಾನ ನಿಲ್ದಾಣದ ಫೋಟೋಗಳು ಇಲ್ಲಿವೆ.

PREV
111
Katrina Vicky Kaushal wedding: ಅದ್ಧೂರಿ ಮದುವೆಗೆ ಬಂದ ಅತಿಥಿಗಳಿವರು

ಕತ್ರಿನಾ ಕೈಫ್ ವಿಕ್ಕಿ ಕೌಶಲ್  ಮದುವೆಯ ಗೆಸ್ಟ್ ಲಿಸ್ಟ್‌ನಲ್ಲಿ ಶಶಾಂಕ್ ಖೈತಾನ್, ಕರಣ್ ಜೋಹರ್, ಆಲಿಯಾ ಭಟ್, ಅಲಿ ಅಬ್ಬಾಸ್ ಜಾಫರ್, ರೋಹಿತ್ ಶೆಟ್ಟಿ, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ವರುಣ್ ಧವನ್, ನತಾಶಾ ದಲಾಲ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಅವರ ಹೆಸರುಗಳಿವೆ.

211

ಇದೇ ವೇಳೆ ನಿರ್ದೇಶಕ ಕಬೀರ್ ಖಾನ್ (Kabir Khan)ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪತ್ನಿ ಮಿನಿ ಮಾಥುರ್ (Mini Mathur) ಹಾಗೂ ಪುತ್ರಿ ಅವರ  ಜತೆಗಿದ್ದರು. ದಂಪತಿಗಳು ದೊಡ್ಡ ದೊಡ್ಡ ಸೂಟ್‌ಕೆಟ್‌ಗಳನ್ನು ಕ್ಯಾರಿ ಮಾಡುತ್ತಿದ್ದರು. 

311

ಕತ್ರಿನಾ ಕೈಫ್ ಮತ್ತು ಕಬೀರ್ ಖಾನ್ ನಡುವೆ ವಿಶೇಷ ಸಂಬಂಧವಿದೆ. ಕತ್ರಿನಾ ಕರೀಬ್ ಖಾನ್‌ ನಿರ್ದೇಶನದ ಏಕ್ ಥಾ ಟೈಗರ್ ಮತ್ತು ಫ್ಯಾಂಟಮ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅದೇ ಸಮಯಕ್ಕೆ ಕಬೀರ್ ಮನೆಯಲ್ಲಿ ಕ್ಯಾಟ್-ವಿಕ್ಕಿಯ ರೋಕಾ ಸೆರೆಮನಿ ಕೂಡ ನಡೆಯಿತು.


 

411

ವಿಕ್ಕಿ ಮತ್ತು ಕತ್ರೀನಾ ಮದುವೆಗಾಗಿ ಜೈಪುರಗೆ ಹೊರಟ್ಟಿದ್ದ ಕಬೀರ್ ಖಾನ್ ಮತ್ತು ಮಿನಿ ಮಾಥುರ್ ವಿಮಾನ ನಿಲ್ದಾಣದಲ್ಲಿ ದೊಡ್ಡ ಸೂಟ್‌ಕೆಟ್‌ಗಳನ್ನು ಹೊತ್ತೊಯ್ದಿರುವುದು ಕಂಡುಬಂದಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಂಪತಿಗಳು ಮಾಸ್ಕ್ ಧರಿಸಿದ್ದರು. 

511

ಅಂಗದ್ ಬೇಡಿ (Angad Bedi) ಮಂಗಳವಾರ ಬೆಳಗ್ಗೆ ಪತ್ನಿ ನೇಹಾ ಧೂಪಿಯಾ  (Neha Dhupia) ಜೊತೆ ಕ್ಯಾಟ್-ವಿಕ್ಕಿ ಮದುವೆಗೆ ತೆರಳಿದ್ದರು. ಇಬ್ಬರೂ ಮುಂಬೈ ವಿಮಾನ ನಿಲ್ದಾಣದಲ್ಲಿ  ಕಾಣಿಸಿಕೊಂಡರು.

 


 

611

ನೇಹಾ ಧೂಪಿಯಾ (Neha Dhupia) ನೀಲಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಅದೇ ಸಮಯದಲ್ಲಿ , ಆಗಂದ್‌ ಬೇಡಿ (Angad Bedi)  ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು.

711

ಕತ್ರಿನಾ ಕೈಫ್ ಹೇರ್ ಸ್ಟೈಲಿಸ್ಟ್ ಅಮೀರ್ ಠಾಕೂರ್ ಮತ್ತು ಮೇಕಪ್ ಕಲಾವಿದ ಡೇನಿಯಲ್ ಬಾಯರ್ ಕೂಡ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ನಿನ್ನೆ ಅಂದರೆ ಸೋಮವಾರ ರಾತ್ರಿ  ಇಬ್ಬರೂ ಜೈಪುರಕ್ಕೆ ತೆರಳಿದ್ದರು.


 

811

ಸಹೋದರಿಯ ವಿವಾಹದಲ್ಲಿ ಪಾಲ್ಗೊಳ್ಳಲು ಕತ್ರಿನಾ ಕೈಫ್ ಅವರ ಸಹೋದರ ಮೈಕೆಲ್ ಕೂಡ ಜೈಪುರ ತಲುಪಿದ್ದಾರೆ. ಅವರು ಸಿಕ್ಸ್ ಸೆನ್ಸ್ ಕೋಟೆಯ ಹೊರಗೆ ಕಾರಿನಲ್ಲಿ ಕುಳಿತಿರುವುದು ಕಂಡುಬಂದಿದೆ.

 

911

ವಧು ಕತ್ರಿನಾ ಕೈಫ್ ಕೂಡ ತಡರಾತ್ರಿ ತನ್ನ ತಾಯಿ ಸುಸ್ಸಾನೆಯೊಂದಿಗೆ ಮದುವೆ ಸ್ಥಳಕ್ಕೆ ತಲುಪಿದ್ದಾರೆ. ಈ ಸಂದರ್ಭದಲ್ಲಿ, ಕತ್ರಿನಾ ಕೈಫ್‌ ಹಳದಿ ಬಣ್ಣದ ಶರರಾ ಸೂಟ್‌ನಲ್ಲಿ ಕಾಣಿಸಿಕೊಂಡರು. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು.


 

1011

ಮಧು ಮಗ  ರಾಜಾ ವಿಕ್ಕಿ ಕೌಶಲ್ ಕೂಡ ತಡರಾತ್ರಿ ಮದುವೆ ಸ್ಥಳಕ್ಕೆ ಬಂದಿದ್ದಾರೆ. ಕೋಟೆಯ ಹೊರಗೆ ಕಾರಿನಲ್ಲಿ ವಿಕ್ಕಿ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಕ್ಕಿ ಕೌಶಲ್‌ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು.

1111

ಜೈಪುರ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಕೈಫ್ ಅವರ ಕುಟುಂಬ ಸದಸ್ಯರು ಕೂಡ ಕಾಣಿಸಿಕೊಂಡಿದ್ದಾರೆ. ಅನೇಕ ಸಂಬಂಧಿಕರು ವಿದೇಶದಿಂದ ನೇರವಾಗಿ ಜೈಪುರ ತಲುಪಿದರು. ನಂತರ ಇಲ್ಲಿಂದ ಎಲ್ಲರೂ ಕಾರಿನಲ್ಲಿ ಮದುವೆ ಸ್ಥಳಕ್ಕೆ ತೆರಳಿದರು.

Read more Photos on
click me!

Recommended Stories