ಈ ಸಂದರ್ಭದಲ್ಲಿ ಕಂಗನಾ ಕಡು ಹಸಿರು ಬಣ್ಣದ ಸೂಟ್, ಹಳದಿ ಬಣ್ಣದ ದುಪಟ್ಟಾ, ಹಣೆಯ ಮೇಲೆ ಶ್ರೀಗಂಧ ಮತ್ತು ಹೂವಿನ ಹಾರಗಳನ್ನು ಧರಿಸಿದ್ದರು.ಈ ಸಮಯದಲ್ಲಿ ಕಂಗನಾರ ಸುರಕ್ಷತೆಗಾಗಿ ಪೊಲೀಸರು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಯಿತು.
ಮಥುರಾ ವೃಂದಾವನ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿಗೆ ಸಂಬಂಧಿಸಿದ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಗೋಕುಲಧಾಮ ಇಲ್ಲಿಯೇ ವಾಸುದೇವ್ ಅವರು ಬಾಲ ಕೃಷ್ಣನನ್ನು ನಂದ ಬಾಬಾರವರಿಗೆ ಹಸ್ತಾಂತರಿಸಿದರು. ಇದು ಅತ್ಯಂತ ಮಧುರವಾದ ಅನುಭವ' ಎಂದು ಕಂಗನಾ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.
'ಇದು ನಿಮ್ಮ ಶ್ರೀ ಕೃಷ್ಣ ಅಲ್ಲ. ಇಲ್ಲಿ ಅವನು ಯಶೋದೆಯ ನಂದಲಾಲ್. ಅವಳ ಮಗು. ಗಲಾಟೆ ಮಾಡ ಬೇಡಿ ನೀವು ಒಂದು ಮಗುವನ್ನು ನೋಡಿ ನಗುವಾಗ ಹಾಗೇ ನಗಿ ಇಲ್ಲವಾದರೆ ಅವನು ಆಳುತ್ತಾನೆ ಎಂದು ಪುರೋಹಿತರು ಹೇಳಿದರು ಅವರು ನನಗೆ ಬಿಳಿ ಬೆಣ್ಣೆ ಮತ್ತು ಸಕ್ಕರೆ ಮಿಠಾಯಿ ನೀಡಿದರು ಮತ್ತು ನಾನು ಮಗುವಿನ ತೊಟ್ಟಿಲು ತೂಗಿದೆ ಜೈ ಶ್ರೀ ಕೃಷ್ಣ ಎಂದು ಇನ್ನಷ್ಟೂ ಬರೆದಿದ್ದಾರೆ.
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಂಕೆ ಬಿಹಾರಿಯ ಆಶೀರ್ವಾದ ಸಹ ಪಡೆದರು. ಅದೇ ಸಮಯದಲ್ಲಿ, ಕಂಗನಾ ಆಗಮನದ ಬಗ್ಗೆ ತಿಳಿದ ಜನರು ಅವರನ್ನು ನೋಡಲು ಜಮಾಯಿಸಿದರು. ಆದರೆ, ಕಂಗನಾ ಅವರ ಬಾಂಕೆ ಬಿಹಾರಿ ಭೇಟಿಯ ಕಾರ್ಯಕ್ರಮ ಗೌಪ್ಯವಾಗಿತ್ತು.
'ನಾನು ದೇವರನ್ನು ನೋಡಿದ್ದೇನೆ. ಅಲ್ಲೊಂದು ಜೈಲು ಇದೆ. ಈದ್ಗಾ ಅಡಿಯಲ್ಲಿ ಇನ್ನೂ ಆರು ಜೈಲುಗಳಿವೆ ಎಂದು ಹೇಳಲಾಗುತ್ತಿದೆ. ಈಗ ಮುಚ್ಚಲಾಗಿದೆ. ಅಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ದರ್ಶನ ಪಡೆಯುವ ನಿರೀಕ್ಷೆ ಇದೆ' ಎಂದು ಮಥುರಾದ ಕೃಷ್ಣ ಜನ್ಮಸ್ಥಾನ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಕಂಗನಾ ಹೇಳಿದರು.
ಯಾರ ಹೃದಯದಲ್ಲಿ ಕಳ್ಳ ಇದ್ದಾನೋ ಅವರಿಗೆ ನನ್ನ ಮಾತು ತಪ್ಪು ಅನಿಸುತ್ತದೆ. ಯಾರು ಸತ್ಯವಂತರು, ಧೈರ್ಯವಂತರು, ದೇಶಪ್ರೇಮಿಗಳು, ರಾಷ್ಟ್ರದ ಬಗ್ಗೆ ಮಾತನಾಡುತ್ತಾರೋ ಅವರು ನನ್ನ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಯಾವುದೂ ತಪ್ಪಾಗಿ ಕಾಣಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕಂಗನಾ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕಂಗನಾ ನೀಡಿದ ‘ಭಿಕ್ಷೆಯಲ್ಲಿ ಸಿಕ್ಕ ಸ್ವಾತಂತ್ರ್ಯ’ ಸಾಕಷ್ಟು ವಿವಾದ ಉಂಟು ಮಾಡಿತ್ತು. ಕಂಗನಾ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಇದೀಗ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಬೇಡಿಕೆ ಬಂದಿದೆ.
ಕಂಗನಾ ರಣಾವತ್ ಅವರು ಇತ್ತೀಚೆಗೆ ತಮ್ಮ ತೇಜಸ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಢಾಕಡ್, ಟಿಕು ವೆಡ್ಸ್ ಶೇರು, ಸೀತಾ, ಇಮ್ಲಿ ಮತ್ತು ಜಯದಂತಹ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.