Katrina Vicky Kaushal marriage: ಒಮ್ರಿಕಾನ್ ಎಫೆಕ್ಟ್, ವಿಕ್ಕಿ ಕೌಶಲ್- ಕತ್ರಿನಾ  ಮದುವೆಗೆ ಇವರೆಲ್ಲ ಬರಲ್ಲ!

Published : Nov 29, 2021, 10:10 PM ISTUpdated : Nov 29, 2021, 10:45 PM IST

ಮುಂಬೈ( ನ. 29)   ಬಾಲಿವುಡ್ ಅಂಗಳದ ಎಲ್ಲರ ಗಮನ ಕತ್ರಿನಾ  (Katrina Kaif)ಮತ್ತು ವಿಕ್ಕಿ ಕೌಶಲ್ (Vicky Kaushalಮದುವೆ  ಮೇಲೆ ನೆಟ್ಟಿದೆ.  ಆದರೆ ಒಮ್ರಿಕಾನ್  ಕಾಟ ಕೊಡುತ್ತಿದೆ.  ಮದುವೆಗೆ ಬಾಲಿವುಡ್‍ನ ಅನೇಕ ಸ್ಟಾರ್ ಕಲಾವಿದರು ಅಟೆಂಟ್ ಆಗುತ್ತಾರೆ ಎನ್ನಲಾಗುತ್ತಿತ್ತು. ಇದೀಗ ಎಲ್ಲವೂ ಸ್ಥಾನ ಪಲ್ಲಟವಾಗುವ ಸಾಧ್ಯತೆ ಇದೆ.

PREV
17
Katrina Vicky Kaushal marriage: ಒಮ್ರಿಕಾನ್ ಎಫೆಕ್ಟ್, ವಿಕ್ಕಿ ಕೌಶಲ್- ಕತ್ರಿನಾ  ಮದುವೆಗೆ ಇವರೆಲ್ಲ ಬರಲ್ಲ!

ಮದುವೆ ಆಗುತ್ತಿರುವುದು ಸತ್ಯವಾದರೂ ಜೋಡಿ ಎಲ್ಲಿಯೂ ವಿಷಯ ಬಹಿರಂಗ ಮಾಡಿಲ್ಲ. ರಾಜಸ್ಥಾನದ ಸವಾಯಿ ಮಾಧೋಪುರ್​ನಲ್ಲಿ ಮದುವೆ ಸಂಭ್ರಮಕ್ಕೆ ತಯಾರಿ ಜೋರಾಗಿದೆ ಎನ್ನುವುದು ಸುದ್ದಿ.

27

ಹೊಸ ವೈರಸ್ ಕಾರಣಕ್ಕೆ ಈಗಾಗಲೇ ಪ್ರೀತಿ ಪಾತ್ರರ ಲಿಸ್ಟ್ ನಲ್ಲಿ ಜೋಡಿ ಕೆಲ ಬದಲಾವಣೆ ಮಾಡಲು ನಿರ್ಧರಿಸಿದ್ದು ಆಗಮಿಸುವವರ ಲಿಸ್ಟ್ ಕಡಿತ ಮಾಡಲು ಮುಂದಾಗಿದೆ.

37

ಡಿಸೆಂಬರ್ 7ರಿಂದ 9ರವರೆಗೆ ಈ ಜೋಡಿಯ ಮದುವೆ ನಡೆಯಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್  ಫೋರ್ಟ್ ಹೋಟೆಲ್‍ನಲ್ಲಿ ವಿವಾಹ ಎನ್ನುವುದು ಮಾಹಿತಿ.

47

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ರಾಜಸ್ಥಾನದಲ್ಲಿ (Rajasthan)ತಮ್ಮ ಮದುವೆಗೆ ತಯಾರಿ ನಡೆಸುತ್ತಿದ್ದಾರೆ.  ಇವರಿಬ್ಬರು ಮುಂದಿನ ತಿಂಗಳು ಮದುವೆಯಾಗಲು (Marriage) ಸಿದ್ಧರಾಗಿದ್ದಾರೆ ..

57

ಜೋಡಿ ಮುಂಬೈನಲ್ಲಿ ಕೋರ್ಟ್ ಮ್ಯಾರೇಜ್ ಆಗಲಿದೆ ಅಲ್ಲಿಂದ ರಾಜಸ್ಥಾನಕ್ಕೆ ತೆರಳಲಿದೆ ಎನ್ನಲಾಗಿತ್ತು. 'ಕೋರ್ಟ್ ಮ್ಯಾರೇಜ್' ಮತ್ತು ಮದುವೆ ನೋಂದಣಿಗೂ ವ್ಯತ್ಯಾಸವಿದೆ. ಕೋರ್ಟ್ ಮ್ಯಾರೇಜ್ ಎಂದರೆ ಸಂಪ್ರದಾಯ ಬದ್ಧವಾಗಿಯೇ ಮದುವೆ ನಡೆಯುತ್ತದೆ. ಮದುವೆಯಲ್ಲಿ ಅಧಿಕಾರಿಗಳು ಹಾಜರಿರುತ್ತಾರೆ. ಸಾಕ್ಷಿಗಳಿಂದ ಸಹಿ ಮಾಡಿಸಿಕೊಳ್ಳಲಾಗುತ್ತದೆ.

67

ಜೋಡಿ ಜುಹುದಲ್ಲಿ 8 ನೇ ಮಹಡಿಯಲ್ಲಿರುವ  ಪಾರ್ಟ್ಮೆಂಟ್ ಅನ್ನು ಖರೀದಿಸಿದೆ. ಮುಂದೆ ಸಂಸಾರ ಅಲ್ಲಿಯೇ ಸಾಗಲಿದೆ ಎನ್ನುವ ಮಾಹಿತಿಗಳು ಸಿಕ್ಕಿದ್ದವು.  

77

ಆದರೆ ಹೊಸ ವೈರಸ್ ಕಾರಣದಿಂದಾಗಿ ಮದುವೆ ಬರುತ್ತಿರುವ ಗಣ್ಯರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ತಿಳಿದು ಬಂದಿದೆ. ಕೊರೋನಾ ರೂಪಾಂತರಿ ಸೆಲೆಬ್ರಿಟಿ ಮದುವೆ ಮೇಲೆ ಪರಿಣಾಮ ಬೀರದೆ ಇರದು .

Read more Photos on
click me!

Recommended Stories