ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್‌ ರಾಜಸ್ಥಾನ ಪ್ರವಾಸದ ರೋಮ್ಯಾಂಟಿಕ್‌ ಫೋಟೋಗಳು ವೈರಲ್‌

Published : Dec 31, 2022, 06:37 PM IST

ಬಾಲಿವುಡ್‌ನ ಸ್ಟಾರ್ ಜೋಡಿ ಕತ್ರಿನಾ ಕೈಫ್  (Katrina Kaif)  ಮತ್ತು ವಿಕ್ಕಿ ಕೌಶಲ್ (Vicky Kaushal) ರಾಜಸ್ಥಾನದಲ್ಲಿ ಈ ವರ್ಷದ ಕೊನೆಯ ತಮ್ಮ ಕ್ವಿಕ್‌ ಹಾಲಿಡೇ ಮುಗಿಸಿ  ಮುಂಬೈಗೆ ಮರಳಿದ್ದಾರೆ.  ಕಳೆದ ವರ್ಷ ವಿಕ್ಕಿ ಮತ್ತು ಕತ್ರಿನಾ ರಾಜಸ್ತಾನದಲ್ಲೇ ಸಪ್ತಪದಿ ತುಳಿದಿದ್ದು.ಹಾಲಿಡೆ ಮುಗಸಿ ಬಂದ ನಂತರ  ಶುಕ್ರವಾರ, ವಿಕ್ಕಿ  ಅಲ್ಲಿನ ಕೆಲವು ಪೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

PREV
18
ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್‌ ರಾಜಸ್ಥಾನ ಪ್ರವಾಸದ ರೋಮ್ಯಾಂಟಿಕ್‌ ಫೋಟೋಗಳು ವೈರಲ್‌

ವಿಕ್ಕಿ ಕೌಶಲ್ ಅವರು ರಾಜಸ್ಥಾನದ ಜವಾಯಿ ಚಿರತೆ ಅಭಯಾರಣ್ಯದಲ್ಲಿ ತಮ್ಮ ಮತ್ತು ಕತ್ರಿನಾ ಕೈಫ್ ಅವರ ಹಾಲಿಡೇಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ 

28

ಶುಕ್ರವಾರ ಬೆಳಿಗ್ಗೆ, ನಟ Instagramನಲ್ಲಿ ಅವರು ಮತ್ತು ಅವರ  ಪತ್ನಿ 2022 ರ ಕೊನೆಯ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ಎಂಬುದರ ಒಂದು ನೋಟವನ್ನು  ಹಂಚಿಕೊಂಡಿದ್ದಾರೆ.

38

ಕತ್ರಿನಾ ಕೈಫ್ ಜೊತೆಗಿನ ಹಲವು ಪೋಟೋಗಳನ್ನು ಪೊಸ್ಟ್‌ ಮಾಡಿದ್ದಾರೆ ವಿಕ್ಕಿ. ಬಿಸಿಲಿನಲ್ಲಿ  ಒಂದು ಸೆಲ್ಫಿಗೆ ಪೋಸ್‌ ನೀಡುವುದರ ಜೊತೆಗೆ ಇಬ್ಬರೂ ಟ್ರೆಕ್ಕಿಂಗ್‌   ಮತ್ತು ಸೂರ್ಯಾಸ್ತದ ಸಮಯದಲ್ಲಿ   ಎಂಜಾಯ್‌ ಮಾಡುತ್ತಿರುವುದು ಸಹ ಪೋಟೋದಲ್ಲಿ ಕಾಣಬಹುದು

48

ಈ ಫೋಟೋ ಡಂಪ್‌ ವಿಕ್ಕಿಯ ಸೋಲೋ ಫೋಟೋಗಳನ್ನು ಸಹ ಒಳಗೊಂಡಿವೆ, ಒಂದರಲ್ಲಿ ವಿಕ್ಕಿ ಕೈಯಲ್ಲಿ ಕಾಫಿ ಮಗ್‌ ಹಿಡಿದು ಬೆಳಗಿನ ಬಿಸಿಲಿನಲ್ಲಿ ರಿಲಾಕ್ಸ್‌ ಮಾಡುತ್ತಿದ್ದಾರೆ.

58

ಇನ್ನೊಂದು ಫೋಟೋದಲ್ಲಿ ಕ್ಯಾಕ್ಟಸ್‌ ಹಿಂದೆ ವಿಕ್ಕಿ ಕೌಶಲ್‌ ಅವರು  ಆಗಿ ಪೋಸ್‌ ನೀಡಿದ್ದಾರೆ. ಬಹುಶಃ ವಿಕ್ಕಿಯ ಸೋಲೋ ಫೋಟೋಗಳನ್ನು ಕತ್ರಿನಾ ಕ್ಲಿಕ್‌ ಮಾಡಿರಬಹುದು.

68

ಇದಕ್ಕೂ ಮೊದಲು ಕತ್ರಿನಾ ಅವರು ಸಹ ಹಾಲಿಡೇಯ ಕೆಲವು ಪೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು. 

78

'ಸೋ ಮ್ಯಾಜೀಕಲ್‌ ಇದು ನನ್ನ ಫೇವರೇಟ್‌ ಸ್ಥಳಗಳಲ್ಲಿ ಒಂದಾಗಿದೆ ನಾನು ಭಾವಿಸುತ್ತೇನೆ' ಎಂದು ಕತ್ರಿನಾ  ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದರು.

88

ತಮ್ಮ ಸಿಂಗಲ್‌ ಫೊಟೋ ಮತ್ತು ಪತಿ ವಿಕ್ಕಿ ಜೊತೆಗಿನ  ಫೋಟೋಗಳಲ್ಲದೆ ಸಫಾರಿಯ ಕೆಲವು ಫೋಟೋಗಳನ್ನು ಸಹ ನಟಿ ಪೋಸ್ಟ್‌ ಮಾಡಿದ್ದರು 

Read more Photos on
click me!

Recommended Stories