ಮಲೈಕಾ ಅರೋರಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ದೈನಂದಿನ ಜೀವನದ ಅಪ್‌ಡೇಟ್‌ಗಳನ್ನು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಫಿಟ್‌ನೆಸ್ ಪೋಸ್ಟ್‌ಗಳಿಂದ ಅಭಿಮಾನಿಗಳನ್ನು ಪ್ರೇರೇಪಿಸುತ್ತಾರೆ.
ಇತ್ತೀಚೆಗೆ ಮಲೈಕಾ ಆರೋರಾ ಅವರ ಮಗ ಅರ್ಹಾನ್ ಖಾನ್ ಅವರನ್ನು ಭೇಟಿ ಮಾಡಲು ನ್ಯೂಯಾರ್ಕ್‌ಗೆ ಹೋದಾಗ, ವಿಮಾನದಿಂದ ತೆಗೆದ ಸೆಲ್ಫಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಅರ್ಹಾನ್ ಖಾನ್, ಮಲೈಕಾ ಅರೋರಾ ಮತ್ತು ಆಕೆಯ ಮಾಜಿ ಪತಿ ಅರ್ಬಾಜ್ ಖಾನ್ ಅವರ ಏಕೈಕ ಮಗ. ಪ್ರಸ್ತುತ ಅರ್ಹಾನ್ ಖಾನ್ NYC ಯಲ್ಲಿ ಓದುತ್ತಿದ್ದಾರೆ. ಮಲೈಕಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ NYC ಯಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಒಂದು ತಿಂಗಳ ಕಾಯುವಿಕೆಯ ನಂತರ ಅಂತಿಮವಾಗಿ ಮಗನನ್ನು ನೋಡುತ್ತಿದ್ದೇನೆ ಎಂದು ಬಹಿರಂಗಪಡಿಸಿದರು. ಮಲೈಕಾ ಪೋಟೋಗೆ 'Reunited' ಎಂದು ಬರೆದು ಮಲೈಕಾ ಹೃದಯದ ಎಮೋಜಿಯೊಂದಿಗೆ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.
ಮಲೈಕಾ ಅರೋರಾ ಹಂಚಿಕೊಂಡ ನ್ಯೂಯಾರ್ಕ್‌ನ ಮೊದಲ ಫೋಟೋವು ಬಿಲ್ಡಿಂಗ್‌ಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಅರ್ಹಾನ್ ಕಾಣಿಸಿಕೊಂಡಿದ್ದಾರೆ. ಅರ್ಹಾನ್ ಕಪ್ಪು-ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದಾರೆ.
Malaika Arora and Arbaaz khan drops son Arhaan
ಮಲೈಕಾ ಅವರು ಅರ್ಹಾನ್ ಹಿಂದಿನಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಡಿಸೆಂಬರ್‌ನಲ್ಲಿ ಚಳಿಗಾಲದ ರಜೆಯ ಸಮಯದಲ್ಲಿ, ಅರ್ಹಾನ್ ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ಅವರ ಪೋಷಕರು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆದರು.
Malaika Arora and Arbaaz khan drops son Arhaan
ಕಳೆದ ತಿಂಗಳು, ಅರ್ಹಾನ್ ತನ್ನ ರಜೆಯ ನಂತರ ಭಾರತದಿಂದ ಯುಎಸ್‌ಗೆ ವಾಪಸ್ಸಾಗುವ ಸಮಯದಲ್ಲಿ ಮಲೈಕಾ ಮತ್ತು ಅರ್ಬಾಜ್ ಮಗನನ್ನು ಬಿಡಲು ವಿಮಾನ ನಿಲ್ದಾಣಕ್ಕೆ ಬಂದರು. ಈ ಸಮಯದ ಫೋಟೋಗಳು ಮತ್ತು ವಿಡಿಯೋಗಳು ಸಖತ್ ವೈರಲ್ ಆಗಿದ್ದವು.