Sunny Kaushal With Girlfriend: ಶಾರ್ವರಿ ವಾಘ್ ಜೊತೆ ವಿಕ್ಕಿ ಸಹೋದರ ಸನ್ನಿ ಕೌಶಲ್ ಡೇಟ್‌?

Published : Jan 08, 2022, 06:12 PM IST

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif)  ಮಾತ್ರವಲ್ಲ.ವಿಕ್ಕಿಯ ಕಿರಿಯ ಸಹೋದರ, ನಟ ಸನ್ನಿ ಕೌಶಲ್ ( Sunny Kaushal) ಮತ್ತು ಅವರ ರೂಮರ್ಡ್‌ ಗರ್ಲ್‌ ಫ್ರೆಂಡ್‌ ಶಾರ್ವರಿ ವಾಘ್ ( Sharvari Wagh) ಕೂಡ ಬಿ ಟೌನ್‌ಹಾಟ್ ಟಾಪಿಕ್‌ಗಳಲ್ಲಿ ಒಂದಾಗಿದ್ದಾರೆ. ಶುಕ್ರವಾರ ಕಾಫಿ ಶಾಪ್‌ನಿಂದ ಇಬ್ಬರು ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದ್ದು, ವದಂತಿಗಳಿಗೆ ತುಪ್ಪ ಸುರಿದ ಹಾಗೇ ಆಗಿದೆ. ಈ ಜೋಡಿಯ ಫೋಟೊಗಳು ವೈರಲ್‌ ಆಗಿವೆ.

PREV
17
Sunny Kaushal With Girlfriend: ಶಾರ್ವರಿ ವಾಘ್ ಜೊತೆ ವಿಕ್ಕಿ ಸಹೋದರ ಸನ್ನಿ ಕೌಶಲ್ ಡೇಟ್‌?

ಬಾಲಿವುಡ್‌ನ ರೂಮರ್ಡ್‌ ಕಪಲ್‌ಗಳಾದ ಸನ್ನಿ ಕೌಶಲ್ ಮತ್ತು ಶರ್ವರಿ ವಾಘ್ ಮುಂಬೈನ ಕಾಫಿ ಶಾಪ್‌ನ ಹೊರಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಸಹೋದರ ಸನ್ನಿ ಕೌಶಲ್  ಸನ್ನಿ ಕೌಶಲ್ ತನ್ನ ಗೆಳತಿ ಶಾರ್ವರಿ ವಾಘ್ ಅವರೊಂದಿಗೆ ಕಾಫಿಗಾಗಿ ಹೊರಗೆ ಹೋದಾಗ  ತನ್ನ ಕಪ್ಪು ಬುಲೆಟ್‌ ತೆಗೆದು ಕೊಂಡಿದ್ದರು.

27

ಈ ಸಮಯದಲ್ಲಿ ಸನ್ನಿ ಅವರು ನೀಲಿ ಬಣ್ಣದ ಡೆನಿಮ್‌ನೊಂದಿಗೆ ಕ್ಯಾಶುಯಲ್ ವೈಟ್ ಟೀ ಶರ್ಟ್‌ ಮ್ಯಾಚ್‌ ಮಾಡಿಕೊಂಡಿದ್ದರು. ಮತ್ತೊಂದೆಡೆ, ನಟಿ ಶರ್ವರಿ ವಾಘ್ ಅವರು ನೀಲಿ ಬಣ್ಣದ ಡೆನಿಮ್ ಶರ್ಟ್ ಧರಿಸಿದ್ದರು. 

37

ನಟಿ ಶರ್ವರಿ  ಡೆನಿಮ್ ಶರ್ಟ್ ಜೊತೆಗೆ ಬಿಳಿ ರಿಪ್ಡ್‌ ಶಾರ್ಟ್ಸ್ ಧರಿಸಿದ್ದರು. ಅವರು ಕ್ರಾಸ್ ಸ್ಲಿಂಗ್ ಬ್ಯಾಗ್ ಮತ್ತು ಬಿಳಿ ಸ್ನೀಕರ್‌ಗಳು ಜೊತೆ ತಮ್ಮ ಕ್ಯಾಶುಯಲ್' ಲುಕ್‌  ಪೂರ್ಣಗೊಳಿಸಿದ್ದರು 

47

ಸನ್ನಿ ಕೌಶಲ್ ಮತ್ತು ಶರ್ವರಿ ವಾಘ್ ಸಹನಟರಾಗಿ ಕೆಲಸ ಮಾಡಿದ್ದಾರೆ. ಇವರಿಬ್ಬರು ಅಮೆಜಾನ್ ಪ್ರೈಮ್ ಇಂಡಿಯಾದ ವೆಬ್ ಸೀರೀಸ್ ‘ದಿ ಫಾರ್ಗಾಟನ್ ಆರ್ಮಿ’ಯಲ್ಲಿ ಕಾಣಿಸಿಕೊಂಡಿದ್ದರು. ಸುಭಾಷ್ ಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಆಧರಿಸಿದ ಸರಣಿಯು ಒಳ್ಳೆ ವಿಮರ್ಶೆಗಳನ್ನು ಪಡೆಯಿತು. ಈ ಚಿತ್ರದಲ್ಲಿ ಶರ್ವರಿ ಮತ್ತು ಸನ್ನಿ ಇಬ್ಬರ ನಟನೆಯನ್ನು ಹೆಚ್ಚು ಪ್ರಶಂಸಿಸಲಾಯಿತು.


 

57

ಶರ್ವರಿ ವಾಘ್ ಮತ್ತು ಸನ್ನಿ ಕೌಶಲ್ ತಮ್ಮ ವೆಬ್ ಸರಣಿಯ ದಿನಗಳಿಂದಲೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ವಾಸ್ತವವಾಗಿ, ಶರ್ವರಿ ಅವರು ಸನ್ನಿ ಕೌಶಲ್ ರಾಧಿಕಾ ಮದನ್ ಅವರೊಂದಿಗೆ ನಟಿಸಿದ   'ಶಿದ್ದತ್' ನ  ಪ್ರೀಮಿಯರ್‌ ಶೋಗೂ ಹಾಜರಾಗಿದ್ದರು. ಇದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಯಿತು. ಆದರೆ ಯಾವುದೇ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಲು ವಿಫಲವಾಗಿದೆ.


 

67

ರಾಜಸ್ಥಾನದ ಫೋರ್ಟ್ ಬರ್ವಾರಾದಲ್ಲಿ ಸನ್ನಿಯ ಹಿರಿಯ ಸಹೋದರ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಿವಾಹದಲ್ಲಿ ಶಾರ್ವರಿ ಭಾಗವಹಿಸಿದಾಗ ಸನ್ನಿ ಕೌಶಲ್ ಮತ್ತು ಶಾರ್ವರಿ ವಾಘ್ ಅವರ ಆಫೇರ್‌ ಬಗ್ಗೆ ವದಂತಿಗಳು   ಹೆಚ್ಚಾಗಲು ಪ್ರಾರಂಭಿಸಿದವು.

77

ಮದುವೆಗೆ ಶರ್ವರಿ ಸನ್ನಿ ಕೌಶಲ್ ಜೊತೆಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ವರದಿಯಾಗಿದೆ. ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದು ಅವರ ನಡುವೆ ಏನಾದರೂ  ಇದೆಯೇ ಅಥವಾ ಇಲ್ಲವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

Read more Photos on
click me!

Recommended Stories