ಪತಿ ವಿಕ್ಕಿ ಕೌಶಲ್‌ ಜೊತೆಯ ರೊಮ್ಯಾಂಟಿಕ್ ಪೋಟೋ ಶೇರ್‌ ಮಾಡಿದ ಕತ್ರಿನಾ ಕೈಫ್‌

First Published Sep 21, 2022, 2:51 PM IST

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಬಿ-ಟೌನ್‌ನ ಮೋಸ್ಟ್ ಲವ್ಲಿ ಜೋಡಿ. ಡಿಸೆಂಬರ್ 9,2021 ರಂದು ಅವರು ಮದುವೆಯಾದಾಗಿನಿಂದ ಇಬ್ಬರೂ ಆಗಾಗ ತಮ್ಮ ರೊಮ್ಯಾಂಟಿಕ್ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಈಗ ಮತ್ತೊಮ್ಮೆ ಕತ್ರಿನಾ ಕೈಫ್‌ ಒಂದು ಸುಂದರವಾದ ಪೋಟೋವನ್ನು ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಟ್ರೀಟ್‌ ನೀಡಿದ್ದಾರೆ. ಕತ್ರಿನಾ ಹಂಚಿಕೊಂಡಿರುವ ಫೋಟೋ ಸಖತ್‌ ವೈರಲ್‌ ಆಗಿದೆ.
 

ಕತ್ರಿನಾ ಕೈಫ್‌ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಒಂದು ಕ್ಯೂಟ್‌ ರೊಮ್ಯಾಂಟಿಕ್ ಫೋಟೋವನ್ನು ಶೇರ್‌ ಮಾಡಿದ್ದಾರೆ. ಅದರಲ್ಲಿ ಅವರು ಮತ್ತು ವಿಕ್ಕಿ ತಮ್ಮ ಕೈಗಳನ್ನು ಒಟ್ಟಿಗೆ ಹಿಡಿದು, ಮಾನ್ಸೂನ್ ವೆದರ್‌ ಎಂಜಾಯ್‌ ಮಾಡುತ್ತಿದ್ದಾರೆ 

ಕತ್ರಿನಾ ಫೋಟೋ ಮೇಲೆ ಬಿಳಿ ಹೃದಯದ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ. ಕೆಲವೇ ಸಮಯದಲ್ಲಿ, ಚಿತ್ರ ವೈರಲ್ ಆಗಿದೆ. ಅಭಿಮಾನಿಗಳು ವಿಕ್ಕಿ ಕತ್ರಿನಾ ಜೋಡಿಯ ಪ್ರೀತಿಗೆ ಮತ್ತೊಮ್ಮೆ ಫಿದಾ ಆಗಿದ್ದಾರೆ.

ಕೆಲವು ದಿನಗಳ ಹಿಂದೆ ಕರಣ್‌ ಜೋಹರ್‌ ಚಾಟ್‌ ಶೋನಲ್ಲಿ ವಿಕ್ಕಿಯೊಂದಿಗಿನ ಸಂಬಂಧದ ವಿವರಗಳನ್ನು ಹಂಚಿಕೊಂಡ ಕತ್ರಿನಾ, ವಿಕ್ಕಿ ತನ್ನ ಕನಸಿನ ವ್ಯಾಪ್ತಿಯಲ್ಲಿ ಎಂದಿಗೂ ಇರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

'ನನಗೆ ಅವನ ಬಗ್ಗೆ ಏನೂ ಹೆಚ್ಚು ತಿಳಿದಿರಲಿಲ್ಲ. ಅವನು ನಾನು ಹೆಸರು ಕೇಳಿದ್ದೆ ಆದರೆ ಎಂದಿಗೂ ಸಂಬಂಧಿಸಿರಲಿಲ್ಲ. ಆದರೆ ನಂತರ, ನಾನು ಅವನನ್ನು ಭೇಟಿಯಾದಾಗ, ನಾನು  ಸೋತೆ,' ಎಂದು ಕತ್ರಿನಾ ಕೈಫ್‌ ಹೇಳಿದ್ದಾರೆ.
 

'ತನ್ನ ಸಂಬಂಧವನ್ನು 'ಅನಿರೀಕ್ಷಿತ ಎಂದು ಕರೆದ ಕತ್ರಿನಾ, 'ಇದು ನನ್ನ ಹಣೆಬರಹ ಮತ್ತು ಇದು ನಿಜವಾಗಿಯೂ ಪೂರ್ವ ನಿಯೋಜಿತ. ಅನೇಕ ಕಾಕತಾಳೀಯ ಘಟನೆಗಳು ಒಂದು ಹಂತದಲ್ಲಿ ಎಲ್ಲವೂ ತುಂಬಾ unreal ಎಂದೆನಿಸುತ್ತದೆ,' ಎಂದು ಹೇಳಿದ್ದಾರೆ ಕಿಕ್‌ ನಟಿ.

ಕತ್ರಿನಾ  ಅವರು ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಸಹ-ನಟಿಸುವ 'ಫೋನ್ ಭೂತ್' ನಲ್ಲಿ  ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಅವರು ದಕ್ಷಿಣ ನಟ ವಿಜಯ್ ಸೇತುಪತಿ ಅವರೊಂದಿಗೆ 'ಮೆರ್ರಿ ಕ್ರಿಸ್‌ಮಸ್' ಮತ್ತು ಸಲ್ಮಾನ್ ಖಾನ್ ಜೊತೆಗಿನ 'ಟೈಗರ್ 3' ನ ಭಾಗವಾಗಿದ್ದಾರೆ, ಇದು ಏಪ್ರಿಲ್ 23, 2023 ರಂದು ಬಿಡುಗಡೆಯಾಗಲಿದೆ.

Vicky Kaushal

ವಿಕ್ಕಿ 'ಗೋವಿಂದ ನಾಮ್ ಮೇರಾ' ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಮತ್ತು ಕಿಯಾರಾ ಅಡ್ವಾಣಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರ ಹೆಸರಿಡದ ಚಿತ್ರದಲ್ಲಿ ಅವರು ಸಾರಾ ಅಲಿ ಖಾನ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಇವೆರಡನ್ನು ಹೊರತುಪಡಿಸಿ, ಅವರು ಟ್ರಿಪ್ಟಿ ಡಿಮ್ರಿ ಮತ್ತು ಮೇಘನಾ ಗುಲ್ಜಾರ್ ಅವರ 'ಸ್ಯಾಮ್ ಬಹದ್ದೂರ್' ಜೊತೆಗೆ ಆನಂದ್ ತಿವಾರಿ ಅವರ ಹೆಸರಿಡದ ಚಲನಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ.

click me!