Katrina Vicky Kaushal wedding: ರಾಜಸ್ಥಾನಕ್ಕೆ ಹೊರಡುವ ಮುನ್ನ ಕಾಣಿಸಿಕೊಂಡ ಕತ್ರಿನಾ

Published : Dec 07, 2021, 05:48 PM ISTUpdated : Oct 24, 2023, 12:41 PM IST

ಕತ್ರಿನಾ ಕೈಫ್ (Katirna kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಮದುವೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಈ ಹೈ ಪ್ರೊಫೈಲ್ ಮದುವೆಗೆ ಅತ್ಯಂತ ಐಷಾರಾಮಿ ಮತ್ತು ರಾಜಮನೆತನದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ ಹೋಟೆಲ್‌ನಲ್ಲಿ ದಂಪತಿಗಳು ಏಳು ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ. ದಂಪತಿಗಳು ಇಂದು ಮುಂಬೈನಿಂದ ಜೈಪುರಕ್ಕೆ ತೆರಳಿದ್ದಾರೆ. ರಾಜಸ್ಥಾನಕ್ಕೆ ಹೊರಡುವ ಮೊದಲು ಕತ್ರಿನಾ ಕೈಫ್ ಮನೆಯ ಹೊರಗೆ ಕಾಣಿಸಿಕೊಂಡರು. ಅವರು ಪಾಪರಾಜಿಗಳಿಗೆ ವಿಶ್‌ ಮಾಡಿದ್ದಾರೆ.

PREV
16
Katrina Vicky Kaushal wedding: ರಾಜಸ್ಥಾನಕ್ಕೆ ಹೊರಡುವ ಮುನ್ನ ಕಾಣಿಸಿಕೊಂಡ ಕತ್ರಿನಾ

ಕತ್ರೀನಾ ಕೈಫ್ ರಾಜಸ್ಥಾನಕ್ಕೆ ಹೊರಡುವ ಸಮಯದಲ್ಲಿ ಧರಿಸಿದ ಔಟ್‌ಫಿಟ್‌  ತುಂಬಾ ಸುಂದರವಾಗಿದೆ. ನಟಿ ಹಳದಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಕೈ ಬೀಸಿ ಪಾಪರಾಜಿಗಳಿಗೆ ವಿಶ್‌ ಮಾಡಿದರು.
 
 

26

ವಧು ಕತ್ರಿನಾ ಕೈಫ್ ಅವರ ಕುಟುಂಬ ಸದಸ್ಯರು ಕೂಡ ರಾಜಸ್ಥಾನಕ್ಕೆ ತೆರಳಿದರು. ಕತ್ರಿನಾ ತನ್ನ ತಾಯಿಯೊಂದಿಗೆ ಮದುವೆ ಸ್ಥಳಕ್ಕೆ ಹೊರಟರು. ಕತ್ರಿನಾ ತುಂಬಾ ಸುಂದರವಾಗಿ ಕಾಣುತ್ತಿದ್ದರು ಮತ್ತು ಮಧುಮಗಳ ಕಳೆ ಮುಖದಲ್ಲಿ ಎದ್ದು ಕಾಣುತ್ತಿತ್ತು.

36

ಅದೇ ಸಮಯದಲ್ಲಿ, ವಿಕ್ಕಿ ಪಿಂಕ್‌ ಕಲರ್‌  ಶರ್ಟ್‌ನಲ್ಲಿ ತುಂಬಾ ಹ್ಯಾಂಡ್‌ಸಮ್‌ ಆಗಿ ಕಾಣುತ್ತಿದ್ದರು.ಕತ್ರಿನಾ ವಿಕ್ಕಿ ಕೌಶಲ್ ಜೊತೆಗೆ ರಸ್ತೆಯ ಮಾರ್ಗವಾಗಿ  ಹೋಟೆಲ್ ಸಿಕ್ಸ್ ಸೆನ್ಸ್ ಫೋರ್ಟ್ ತಲುಪಲಿದ್ದಾರೆ ಮತ್ತು  ಅವರ ಜೊತೆ ಕುಟುಂಬದ ಸದಸ್ಯರೂ ಇರುತ್ತಾರೆ ಎಂದು ಹೇಳಲಾಗುತ್ತಿದೆ.

46

ವರದಿ ಪ್ರಕಾರ ಕತ್ರಿನಾ ಕೈ ಹಿಡಿಯಲು ವಿಕ್ಕಿ ಕೌಶಲ್ ಮಹಾರಾಜ ಶೈಲಿಯಲ್ಲಿ 7 ಕುದುರೆಗಳ ಮೇಲೆ ಸವಾರಿ ಮಾಡಲಿದ್ದಾರೆ. ಅದೇ ಸಮಯದಲ್ಲಿ, ಕತ್ರಿನಾ ಕೈಫ್ ಕೂಡ ರಾಣಿಯ ವೇಷಭೂಷಣದಲ್ಲಿ ಏಳು ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ.

56

ವಿಐಪಿ ಅತಿಥಿಗಳ ಭದ್ರತೆಯ ಜವಾಬ್ದಾರಿಯನ್ನು ಜೈಪುರದ ಎಂಎಚ್ ಸೆಕ್ಯುರಿಟಿ ಕಂಪನಿಗೂ ನೀಡಲಾಗಿದೆ. ಈ ವೇಳೆ 100 ಬೌನ್ಸರ್‌ಗಳನ್ನು ಹೊಟೇಲ್‌ನ ಹೊರಗೆ ಭದ್ರತೆಗಾಗಿ ಇರಿಸಲಾಗುವುದು. ಭಾನುವಾರವೇ ಈ ಬೌನ್ಸರ್‌ಗಳು ಇಲ್ಲಿಗೆ ತಲುಪಲಿದ್ದಾರೆ. ಅತಿಥಿ, ಈವೆಂಟ್ ಕಂಪನಿ ಮತ್ತು ಅಧಿಕೃತ ಹೋಟೆಲ್ ಸಿಬ್ಬಂದಿ ಮಾತ್ರ ಹೋಟೆಲ್‌ಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನವನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.

66

ಡಿಸೆಂಬರ್ 7 ರಿಂದ 9 ರವರೆಗೆ ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ವಿವಾಹ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 9 ರಂದು, ಕತ್ರಿನಾ ಮತ್ತು ವಿಕ್ಕಿ ಕೌಶಲ್ ಏಳು ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ. ಮದುವೆಯ ಮಂಟಪವನ್ನು ಗಾಜಿನಿಂದ ಮಾಡಲಾಗಿದೆ. ಮಂಟಪವನ್ನು ವಿಶಿಷ್ಟವಾದ ರಾಜವಾಡಿ ಶೈಲಿಯಲ್ಲಿ ಅಲಂಕರಿಸಲಾಗಿದೆ.

Read more Photos on
click me!

Recommended Stories