ಕಾರ್ತಿಕ್ ಮತ್ತು ಸಾರಾ ಅವರ ವೀಡಿಯೊವನ್ನು ವೀಕ್ಷಿಸಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು 'ವಾವ್! ಸಾರ್ತಿಕ್. ದಯವಿಟ್ಟು ಪ್ಯಾಚ್ ಅಪ್ ಮಾಡಿ ಮತ್ತು ಮತ್ತೆ ಡೇಟಿಂಗ್ ಪ್ರಾರಂಭಿಸಿ' ಎಂದು ಬರೆದಿದ್ದಾರೆ.
'ಇವರಿಬ್ಬರು ಪರಿಪೂರ್ಣರಾಗಿದ್ದಾರೆ. ಎಲ್ಲರಿಗೂ ಇಷ್ಟವಾಗಿದೆ. ಕಾರ್ತಿಕ್ ಆರ್ಯನ್ ಭಾಯ್ ಸಾರಾ ಅವರನ್ನು ಮದುವೆಯಾಗುತ್ತಾರೆ' ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ. 'ಅವರು ಮತ್ತೆ ಒಂದಾಗಿರುವುದು ನನಗೆ ಖುಷಿ ತಂದಿದೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ 'ಲವ್ ಆಜ್ ಕಲ್' ಚಿತ್ರೀಕರಣದಲ್ಲಿದ್ದಾಗ, ಅವರ ಸಂಬಂಧ ಪ್ರಾರಂಭವಾಯಿತು. ಸಿನಿಮಾ ರಿಲೀಸ್ ಆಗುವವರೆಗೂ ಇಬ್ಬರೂ ಜೊತೆಗಿದ್ದರು.
ಆದರೆ, ಈ ಚಿತ್ರ ಬಿಡುಗಡೆಯಾದ ನಂತರ ಇಬ್ಬರೂ ಬೇರೆಯಾದರು. ಕಾರ್ತಿಕ್ ಆರ್ಯನ್ ಅಥವಾ ಸಾರಾ ಅಲಿ ಖಾನ್ ಅವರ ಸಂಬಂಧ (Relationship) ಅಥವಾ ಬ್ರೇಕಪ್ (Break UP) ಅನ್ನು ಎಂದಿಗೂ ಖಚಿತಪಡಿಸಿಲ್ಲ ಎಂಬುದು ಬೇರೆ ವಿಷಯ.
ಆದರೆ, 'ಭೂಲ್ ಭುಲೈಯಾ 2' ಚಿತ್ರದ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ, ಕಾರ್ತಿಕ್ ಸಾರಾ ಅಲಿ ಖಾನ್ ಅವರೊಂದಿಗಿನ ಸಂಬಂಧದ ಚರ್ಚೆಯು 'ಲವ್ ಆಜ್ ಕಲ್' ಚಿತ್ರದ ಪ್ರಚಾರಕ್ಕಾಗಿಯೇ ಎಂದು ಕೇಳಿದಾಗ, 'ಎಲ್ಲವೂ ಪ್ರಚಾರಕ್ಕಾಗಿ ಅಲ್ಲ' ಎಂದು ಕಾರ್ತಿಕ್ ಹೇಳಿದ್ದರು.
ಕಾರ್ತಿಕ್ ಆರ್ಯನ್ ಕೊನೆಯದಾಗಿ 'ಭೂಲ್ ಭುಲೈಯಾ 2' ನಲ್ಲಿ ಕಾಣಿಸಿಕೊಂಡರು, ಇದು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಎಂದು ಸಾಬೀತಾಯಿತು. ಅವರ ಮುಂಬರುವ ಚಿತ್ರಗಳಲ್ಲಿ 'ಫ್ರೆಡ್ಡಿ', 'ಶೆಹಜಾದಾ' ಮತ್ತು 'ಸತ್ಯಪ್ರೇಮ್ ಕಿ ಕಥಾ' ಸೇರಿವೆ.
ಮತ್ತೊಂದೆಡೆ, ಸಾರಾ ಅಲಿಖಾನ್ ಅವರು ಕಳೆದ ವರ್ಷ ಬಿಡುಗಡೆಯಾದ 'ಅತ್ರಂಗಿ ರೇ' ನಲ್ಲಿ ಕಾಣಿಸಿಕೊಂಡರು, ಅದು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು. ಅವರ ಮುಂಬರುವ ಚಿತ್ರಗಳಲ್ಲಿ ಲಕ್ಷ್ಮಣ್ ಉಟೇಕರ್ ಅವರ ಹೆಸರಿಡದ ಚಿತ್ರ ಮತ್ತು 'ಗ್ಯಾಸ್ಲೈಟ್' ಸೇರಿವೆ.