Rajinikanth ಮನೆಯಲ್ಲಿ ಸಂಭ್ರಮ: ಗಂಡು ಮಗುವಿನ ಜನ್ಮ ನೀಡಿದ ಸೌಂದರ್ಯ

Published : Sep 12, 2022, 03:09 PM IST

ಗಂಡು ಮಗುವನ್ನು ಬರ ಮಾಡಿಕೊಂಡ ದಿನವೇ ಹೆಸರು ರಿವೀಲ್ ಮಾಡಿದ ಸೌಂದರ್ಯ ರಜನಿಕಾಂತ್....

PREV
111
Rajinikanth ಮನೆಯಲ್ಲಿ ಸಂಭ್ರಮ: ಗಂಡು ಮಗುವಿನ ಜನ್ಮ ನೀಡಿದ ಸೌಂದರ್ಯ

ಕಾಲಿವುಡ್ ತಲೈವ ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ ಎರಡನೇ ಮಗುವನ್ನು ಬರ ಮಾಡಿಕೊಂಡಿರುವ ಸಂತೋಷದ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

211

ಪ್ರೆಗ್ನೆನ್ಸಿ ಫೋಟೋ ಶೂಟ್‌ ಮತ್ತು ಮಗುವಿನ ಕೈ ಬೆರಳುಗಳ ಫೋಟೋ ಅಪ್ಲೋಡ್ ಮಾಡಿ ಮಗನಿಗೆ ಇಟ್ಟಿರುವ ಕ್ಯೂಟ್ ಹೆಸರನ್ನು ರಿವೀಲ್ ಮಾಡಿದ್ದಾರೆ. ವಿಶೇಷ ದಿನ ಮಗುವಿನ ಮುಖ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ. 

311

 'ನಾವು ಮಾಡಿರುವ ಪುಣ್ಯ ಮತ್ತು ಪೋಷಕರ ಆಶೀರ್ವಾದದಿಂದ ನನ್ನ ಪತಿ ವಿಶಾಗನ್, ಹಿರಿಯ ಪುತ್ರ ವೇದ್ ಮತ್ತು ನಾನು ಇಂದು ನಮ್ಮ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದೀವಿ.'

411

'ವೀರ್ ರಜನಿಕಾಂತ್ ವನಂಗಮುಡಿಗೆ 11/9/22 ಜನಿಸಿದ್ದಾನೆ. ನನ್ನನ್ನು ಚೆನ್ನಾಗಿ ನೋಡಿಕೊಂಡ ವೈದ್ಯರು ಸುಮನಾ ಮನೋಹರ್, ಡಾ. ಶ್ರೀವಿದ್ಯಾ ಶೇಷಾದ್ರಿಗೆ ಧನ್ಯವಾದಗಳು' ಎಂದು ಸೌಂದರ್ಯ ಟ್ವೀಟ್ ಮಾಡಿದ್ದಾರೆ.

511

ಮೊದಲ ಫೋಟೋದಲ್ಲಿ ಮಗುವಿನ ಬೆರಳುಗಳನ್ನು ಹಿಡಿದಿಟ್ಟುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಎರಡನೇ ಫೋಟೋದಲ್ಲಿ ಫ್ಯಾಮಿಲಿ ಪ್ರೆಗ್ನೆನ್ಸಿ ಶೂಟ್‌ ಮೂರನೇ ಫೋಟೋದಲ್ಲಿ ಹಿರಿಯ ಮಗನ ಜೊತೆಗಿರುವುದು. 

611

ಬ್ಲ್ಯಾಕ್ ಆಂಡ್ ವೈಟ್ ಪ್ರೆಗ್ನೆನ್ಸಿ ಶೂಟ್‌ನಲ್ಲಿ ಸೌಂದರ್ಯ ಬೇಬಿ ಬಂಪ್ ಲುಕ್‌ ಸೂಪರ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

711

2019ರಲ್ಲಿ ಸೌಂದರ್ಯ ಮತ್ತು ವಿಶಾಗನ್ ಅದ್ಧೂರಿಯಾಗಿ ಮದುವೆಯಾದ್ದರು.  ಸೌಂದರ್ಯಗೆ ಇದು ಎರಡನೇ ಮದುವೆ ಆಗಿರುವ ಕಾರಣ ಆಪ್ತರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ. 

811

ಉದ್ಯಮಿ ಅಶ್ವಿನ್‌ ರಾಮ್‌ಕುಮಾರ್ ಜೊತೆ ಸೌಂದರ್ಯ ಮೊದಲ ಮದುವೆಯಾಗಿ ವೇದ್‌ ಎಂಬ ಮಗನಿದ್ದ. ವಿಚ್ಚೇದನ ಪಡೆದುಕೊಂಡ ನಂತರ ವೇದನನ್ನು ಸೌಂದರ್ಯ ಬಳಿ ಇಟ್ಟುಕೊಂಡರು. 

911

ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಗ್ರಾಫಿಕ್ ಡಿಸೈನರ್ ಆಗಿ ಸೌಂದರ್ಯ ತಮಿಳು ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿದ್ದರು. ಬಾಬಾ, ಮಜಾ, ಶಿವಾಜೀ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸೌಂದರ್ಯ ಕೆಲಸ ಮಾಡಿದ್ದಾರೆ. 

1011

Kochadaiiya ಸಿನಿಮಾವನ್ನು ಸೌಂದರ್ಯ ನಿರ್ದೇಶನ ಮಾಡಿದ್ದಾರೆ, ತಂದೆ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ನಿರ್ದೇಶಕಿಯಾಗಿ ಗುರುತಿಸಿಕೊಂಡರು. ಆ ನಂತರ Ocher ಪಿಕ್ಚರ್‌ ಪ್ರೋಡಕ್ಷನ್ಸ್‌ ಮೂಲಕ ಸಿನಿಮಾ ಸಂಸ್ಥೆ ಕೂಡ ಆರಂಭಿಸಿದ್ದಾರೆ. 

1111

ಕಳೆದ ವರ್ಷ ವಿಡಿಯೋ ಸ್ಟ್ರೀಮಿಂಗ್ MX ಪ್ಲೇಯರ್ ಜೊತೆ ಕೈ ಜೋಡಿಸಿ ತಮಿಳು ಓರಿಜಿನಲ್ ವೆಬ್‌ ಸೀರಿಸ್‌ನ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಒಟ್ಟಿನಲ್ಲ ಚಿತ್ರರಂಗದಲ್ಲಿ ಸೌಂದರ್ಯ ಸಕ್ರೀಯರಾಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories