ಸಾರಾ ಅಲಿ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಕಾರ್ತಿಕ್ ಆರ್ಯನ್

Published : Feb 19, 2023, 04:25 PM IST

ಕಾರ್ತಿಕ್ ಆರ್ಯನ್  (Kartik Aryan) ಇತ್ತೀಚಿನ ದಿನಗಳಲ್ಲಿ ತಮ್ಮ 'ಶೆಹಜಾದಾ' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಆಂಗ್ಲ ಸುದ್ದಿ ವೆಬ್‌ಸೈಟ್‌ಗೆ ಸಂದರ್ಶನ ನೀಡಿದ ಅವರು ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದರು. ಅವರು ತಮ್ಮ ಲವ್‌ ಲೈಫ್‌  ಬಗ್ಗೆ ಪ್ರತಿಕ್ರಿಯಿಸಿದರು.  ಈ ಸಮಯದಲ್ಲಿ ಕಾರ್ತಿಕ್ ಆರ್ಯನ್ ಸಾರಾ ಅಲಿ ಖಾನ್ (Sara Ali Khan) ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದರು, ಕೃತಿ ಸನೋನ್ (Kriti Sanon) ಜೊತೆ ಡೇಟಿಂಗ್ ಬಗ್ಗೆಯೂ ಮಾತನಾಡಿದರು. ಕಾರ್ತಿಕ್‌ ಏನು ಹೇಳಿದ್ದಾರೆ ಗೊತ್ತಾ?  

PREV
16
ಸಾರಾ ಅಲಿ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ  ಕಾರ್ತಿಕ್ ಆರ್ಯನ್

ಸಂದರ್ಶನದ ರ್ಯಾಪಿಡ್ ಫೈರ್ ವಿಭಾಗದಲ್ಲಿ ಕಾರ್ತಿಕ್ ಒಂಟಿಯಾಗಿದ್ದೀರಾ ಎಂದು ಕೇಳಿದಾಗ ಅವರು ಸಕಾರಾತ್ಮಕವಾಗಿ ಉತ್ತರಿಸಿದರು. ಆದರೆ TOI ನೊಂದಿಗಿನ ಸಂಭಾಷಣೆಯ ಸಮಯದಲ್ಲಿ, ನೀವು ಸಾರಾ ಅಲಿ ಖಾನ್ ಅವರೊಂದಿಗೆ ಡೇಟಿಂಗ್ ಮಾಡಿದ್ದೀರಾ ಎಂದು ಕೇಳಿದಾಗ, ಅವರು ಉತ್ತರಿಸಲಿಲ್ಲ.

26
Kirti

ಈ ಸಮಯದಲ್ಲಿ ಕಾರ್ತಿಕ್‌ಗೆ 'ಶೆಹಜಾದಾ' ಚಿತ್ರದ ಸಹನಟಿ ಕೃತಿ ಸನೋನ್ ಜೊತೆ ಡೇಟಿಂಗ್ ಮಾಡಿದ್ದೀರಾ ಎಂದು ಕೇಳಲಾಯಿತು, ಅದಕ್ಕೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು. ಆದರೆ ಅವರು ಮದುವೆಯನ್ನು ನಂಬುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ನಟ 'ಹೌದು' ಎಂದು ಹೇಳಿದ್ದಾರೆ

36

ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ 2020 ರಲ್ಲಿ ಬಿಡುಗಡೆಯಾದ 'ಲವ್ ಆಜ್ ಕಲ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಕಾರ್ತಿಕ್ ಮತ್ತು ಸಾರಾ ಹತ್ತಿರವಾಗಿದ್ದರು ಎಂದು ಹೇಳಲಾಗುತ್ತದೆ.

46

ಚಿತ್ರದ ಬಿಡುಗಡೆಯ ನಂತರ ಕಾರ್ತಿಕ್ ಮತ್ತು ಸಾರಾ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಕಾರ್ತಿಕ್ ಇದನ್ನು ಎಂದಿಗೂ ಖಚಿತಪಡಿಸಿಲ್ಲ ಅಥವಾ ಸಾರಾ ಅಲಿ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

56

ಆದರೆ ಹಿಂದೊಮ್ಮೆ ಕಾರ್ತಿಕ್ ಖಂಡಿತವಾಗಿಯೂ ಸಾರಾ ಅವರೊಂದಿಗಿನ ಸಂಬಂಧದ ಬಗ್ಗೆ ಸುಳಿವು ನೀಡಿದ್ದರು. ವಾಸ್ತವವಾಗಿ, ಕಳೆದ ವರ್ಷ ಅವರ 'ಭೂಲ್ ಭುಲೈಯಾ 2' ಚಿತ್ರದ ಪ್ರಚಾರದ ಸಮಯದಲ್ಲಿ, ಕಾರ್ತಿಕ್ ಅವರನ್ನು ಸಂದರ್ಶನವೊಂದರಲ್ಲಿ ಕೇಳಿದಾಗ, 'ಲವ್ ಆಜ್ ಕಲ್' ಸಮಯದಲ್ಲಿ ಸಾರಾ ಅವರೊಂದಿಗಿನ ಅವರ ಸಂಬಂಧದ ಚರ್ಚೆ ಕೇವಲ ಪ್ರಚಾರವಾ ಎಂದು ಕೇಳಿದಾಗ ಅದಕ್ಕೆ ಅವರು ಎಲ್ಲವೂ ಪ್ರಚಾರವಲ್ಲ ಎಂದು ಉತ್ತರಿಸಿದರು.

66

ಕಾರ್ತಿಕ್ ಅಭಿನಯದ 'ಶೆಹಜಾದಾ' ಚಿತ್ರ ಫೆಬ್ರವರಿ 17 ರಂದು ಬಿಡುಗಡೆಯಾಗಿದೆ. ಈ ಚಿತ್ರವನ್ನು ರೋಹಿತ್ ಧವನ್ ನಿರ್ದೇಶಿಸಿದ್ದಾರೆ ಮತ್ತು ಕೃತಿ ಸನೋನ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಪ್ರತಿಕ್ರಿಯೆಯನ್ನು ಪಡೆದಿದ್ದು. ಮೊದಲ ದಿನವೇ 6 ಕೋಟಿ ಕಲೆಕ್ಷನ್ ಮಾಡಿದೆ.

Read more Photos on
click me!

Recommended Stories