ಅತಿ ಹೆಚ್ಚು ಸಂಭಾವನೆ ಪಡೆದು ಸೂಪರ್‌ಸ್ಟಾರ್ ಆಗಿ ಆಕ್ಟಿಂಗ್‌ ತೊರೆದ ನಟಿ; ಈಗ ಸಿನ್ಮಾದಲ್ಲಿ ಛಾನ್ಸೇ ಸಿಗ್ತಿಲ್ಲ!

First Published | Oct 28, 2023, 10:22 AM IST

ಗ್ಲಾಮರ್ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗೆಯೇ 90ರ ದಶಕದ ಈ ಟಾಪ್ ನಟಿಗೆ ನಟನಾ ಜಗತ್ತಿಗೆ ಪ್ರವೇಶಿಸುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಆದ್ರೆ ದಿಢೀರ್ ಸೂಪರ್‌ಸ್ಟಾರ್ ಆದ ಈ ನಟಿ ವೃತ್ತಿಜೀವನದಲ್ಲಿ ಹೈಯೆಸ್ಟ್ ಡಿಮ್ಯಾಂಡ್ ಇರುವಾಗಲೇ ಸಿನಿಮಾ ರಂಗ ಬಿಟ್ಟುಬಿಟ್ರು.

ಪ್ರತಿ ವರ್ಷ ಅನೇಕರು ನಟನಾ ಜಗತ್ತಿಗೆ ಪ್ರವೇಶಿಸಿ ತಮ್ಮ ಗುರಿಯನ್ನು ಸಾಧಿಸುವ ಕನಸಿನೊಂದಿಗೆ ಮುಂಬೈಗೆ ಬರುತ್ತಾರೆ. ಆದರೆ ಗ್ಲಾಮರ್ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಬಾಲಿವುಡ್‌ನಲ್ಲಿ ಸ್ಟಾರ್ ಆಗುವುದು ತುಂಬಾ ಕಠಿಣವಾದ ಕೆಲಸ. ಹಾಗೆಯೇ 90ರ ದಶಕದ ಈ ಟಾಪ್ ನಟಿಗೆ ನಟನಾ ಜಗತ್ತಿಗೆ ಪ್ರವೇಶಿಸುವುದು ಅಷ್ಟು ಸುಲಭವಾಗಿರಲ್ಲಿಲ್ಲ. 

ನಟಿ ದೊಡ್ಡ ಚಲನಚಿತ್ರ ಕುಟುಂಬಕ್ಕೆ ಸೇರಿದವರಾಗಿದ್ದರೂ, ಸೂಪರ್‌ಸ್ಟಾರ್ ಆಗುವ ಮೊದಲು ಅವರು ಸಾಕಷ್ಟು ಕಷ್ಟವನ್ನು ಅನುಭವಿಸಿದರು. ಕೊನೆಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಲವಾರು ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿದರು. 90ರ ದಶಕದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೆಂದು ಗುರುತಿಸಿಕೊಂಡರು. ಬಿಟೌನ್‌ನಲ್ಲಿ ಕೆರಿಯರ್ ಉತ್ತುಂಗದಲ್ಲಿರುವಾಗಲೇ ನಟನೆಯನ್ನು ತೊರೆದರು. ಆ ನಟಿ ಮತ್ಯಾರೂ ಅಲ್ಲ. ಕರಿಷ್ಮಾ ಕಪೂರ್‌

Latest Videos


ಕರಿಷ್ಮಾ ಕಪೂರ್ 90ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. ಆದರೆ ಅವರಿಗೆ ಬಾಲಿವುಡ್ ಪ್ರವೇಶಿಸುವುದು ಸುಲಭದ ಕೆಲಸವಾಗಿರಲ್ಲಿಲ್ಲ. ಕರಿಷ್ಮಾ ಕಪೂರ್ ನಟಿಯಾಗಲು ತನ್ನ ಕುಟುಂಬದ ವಿರುದ್ಧ ಧ್ವನಿಯೆತ್ತಬೇಕಾಯ್ತು. 

ಕೊನೆಗೆ ಯಾರ ಬೆಂಬಲವಿಲ್ಲದೆ ಬಾಲಿವುಡ್‌ನಲ್ಲಿ ಆಕ್ಟಿಂಗ್ ಕೆರಿಯರ್ ಆರಂಭಿಸಿದರು. ಆ ದಿನಗಳಲ್ಲಿ ಚಿತ್ರ ನಿರ್ಮಾಪಕರ ಮೊದಲ ಆಯ್ಕೆ ಕರಿಷ್ಮಾ ಕಪೂರ್ ಆಗಿತ್ತು. ಕರಿಷ್ಮಾ ಹೆಚ್ಚಾಗಿ ಡೇವಿಡ್ ಧವನ್ ಅವರೊಂದಿಗೆ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕರಿಷ್ಮಾ ಕಪೂರ್ ಒಮ್ಮೆ ಸಂದರ್ಶನವೊಂದರಲ್ಲಿ ತಾನು ರಾಜ್ ಕಪೂರ್ ಕುಟುಂಬಕ್ಕೆ ಸೇರಿದವಳಾಗಿದ್ದರೂ, ಬಾಲಿವುಡ್‌ನಲ್ಲಿ ಸಾಕಷ್ಟು ಕಷ್ಟಪಡಬೇಕಾಯಿತು ಎಂದು ಹೇಳಿದ್ದರು. ಕರಿಷ್ಮಾ 16ನೇ ವಯಸ್ಸಿನಲ್ಲಿ 'ಪ್ರೇಮ್ ಖೈದಿ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.

ಕರಿಷ್ಮಾ ಅವರ ಸಹೋದರಿ ಕರೀನಾ ಕಪೂರ್ ಸಿಮಿ ಗ್ರೆವಾಲ್ ಅವರ ಶೋನಲ್ಲಿ ರಾಜ್ ಕಪೂರ್ ಅವರ ಕುಟುಂಬದವರಾಗಿದ್ದರೂ, ಕರಿಷ್ಮಾಗೆ ನಟನಾ ಜಗತ್ತಿಗೆ ಪ್ರವೇಶಿಸುವುದು ಸುಲಭವಾಗಿರಲ್ಲಿಲ್ಲ ಎಂದು ಹೇಳಿದ್ದರು. ಕರೀನಾ ಪ್ರಕಾರ, ಬಾಲಿವುಡ್ ಪ್ರವೇಶಿಸುವ ಕರಿಷ್ಮಾ ನಿರ್ಧಾರವನ್ನು ಯಾರೂ ಬೆಂಬಲಿಸಲಿಲ್ಲ.

ಕರಿಷ್ಮಾ ಕಪೂರ್, 1996ರಿಂದ 1999ರ ವರೆಗೆ ಉದ್ಯಮವನ್ನು ಆಳಿದರು. ಕರಿಷ್ಮಾ 'ಸಾಜನ್ ಚಲೇ ಸಸುರಾಲ್', 'ಜೀತ್', 'ಕೃಷ್ಣ', 'ರಾಜಾ ಹಿಂದೂಸ್ತಾನಿ', 'ಹೀರೋ ನಂಬರ್ ಒನ್', 'ಬಿವಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ನಂತರ 'ನಂಬರ್ ಒನ್', 'ಅಂದಾಜ್ ಅಪ್ನಾ ಅಪ್ನಾ' ಮತ್ತು 'ಜುಡ್ವಾ'.  2007ರ ವರೆಗೆ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಹಲವು ಸಿನಿಮಾಗಳಲ್ಲಿ ಅತ್ಯುತ್ತಮವಾಗಿ ನಟಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.

ನಂತರ ಅವರ ವೃತ್ತಿಜೀವನವು ಸ್ಥಗಿತಗೊಂಡಿತು. ಆ ನಂತರ ಮತ್ತೆ 2012 ರಲ್ಲಿ ಆಕ್ಟಿಂಗ್‌ ಕೆರಿಯರ್ ಮುಂದುವರಿಸಲು ಯತ್ನಿಸಿದರು. ಆದರೆ ಕಳೆದುಹೋದ ತನ್ನ ಸ್ಟಾರ್‌ಡಮ್‌ನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ.

click me!