ಕರೀನಾರ ನೋ ಮೇಕಪ್ ಲುಕ್: ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
First Published | Sep 5, 2021, 2:26 PM ISTಇತ್ತೀಚೆಗೆ ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಅಪಾರ್ಟ್ಮೆಂಟ್ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ ಅವರು ನೀಲಿ ಡೆನಿಮ್ ಮತ್ತು ಪ್ರಿಂಟೆಡ್ ಶರ್ಟ್ ಧರಿಸಿದ್ದರು. ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದರು ಮತ್ತು ಕನ್ನಡಕ ಧರಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕರೀನಾರ ಈ ಫೋಟೋಗಳನ್ನು ನೋಡಿದ ನಂತರ, ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ವಾಸ್ತವವಾಗಿ, ಆಕೆಯ ಮುಖದಲ್ಲಿ ಸುಕ್ಕುಗಳು ಮತ್ತು ಮುಖ ದಪ್ಪವಾಗಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಮೇಕಪ್ ಇಲ್ಲದ ಕರೀನಾ ಈ ಲುಕ್‌ನ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ, ಕರೀನಾಳನ್ನು ಹೊರತುಪಡಿಸಿ, ಇತರ ಅನೇಕ ಸೆಲೆಬ್ರೆಟಿಗಳು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡರು.