ಬೆಂಗ​ಳೂ​ರಲ್ಲಿ 7 ಕೋಟಿ ಮೌಲ್ಯದ ಫ್ಲ್ಯಾಟ್‌ ಖರೀ​ದಿಸಿದ ದೀಪಿಕಾ

Published : Sep 05, 2021, 12:48 PM ISTUpdated : Sep 05, 2021, 02:04 PM IST

ಸಿಲಿಕಾನ್ ಸಿಟಿಯಲ್ಲಿ 7 ಕೋಟಿಯ ಬಂಗಲೆ ಖರೀದಿಸಿದ ನಟಿ ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ಅದ್ಧೂರಿ ಫ್ಲಾಟ್ ಖರೀದಿಸಿದ ಕರಾವಳಿ ಬೆಡಗಿ

PREV
17
ಬೆಂಗ​ಳೂ​ರಲ್ಲಿ 7 ಕೋಟಿ ಮೌಲ್ಯದ ಫ್ಲ್ಯಾಟ್‌ ಖರೀ​ದಿಸಿದ ದೀಪಿಕಾ

ನಟಿ ದೀಪಿಕಾ ಪಡುಕೋಣೆ ಮತ್ತು ಅವರ ತಂದೆ, ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ ಬೆಂಗಳೂರಿನ ಬಳ್ಳಾರಿ ರಸ್ತೆ​ಯ​ಲ್ಲಿ​ರು​ವ ಗಂಗಾನಗರದಲ್ಲಿ ದುಬಾರಿ ಬೆಲೆಯ ಫ್ಲಾಟ್‌ ಖರೀದಿಸಿದ್ದಾರೆ.

27

ಈ ಫ್ಲಾಟ್‌ನ ಬೆಲೆ 6.79 ಕೋಟಿ ರು. ಆಗಿದ್ದು ಸ್ಟಾಂಪ್‌ ತೆರಿಗೆಯಾಗಿ 34.64 ಲಕ್ಷ ಪಾವತಿಸಿದ್ದಾರೆ. ಅಪಾರ್ಟ್‌ಮೆಂಟ್‌ನ 22ನೇ ಅಂತಸ್ತಿನಲ್ಲಿರುವ ಎರಡು ಬೆಡ್‌​ರೂಂ ಫ್ಲಾಟ್‌, ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ.

37

3451 ಚದರ ಅಡಿ ವಿಸ್ತೀರ್ಣ ಹೊಂದಿರುವ ಮನೆ 2 ಕಾರ್‌ಗಳ ಪಾರ್ಕಿಂಗ್‌ ಸೌಲಭ್ಯ ಹೊಂದಿದೆ. ಎಂಬೆಸ್ಸಿ ಗ್ರೂಪ್ ಈ ಅಪಾರ್ಟ್‌ಮೆಂಟ್‌ ಅನ್ನು 600 ಕೋಟಿ ವೆಚ್ಚಮಾಡಿ ನಿರ್ಮಾಣ ಮಾಡಿದೆ.

47

ಈ ಸಂಸ್ಥೆಯ ಆರಂಭಿಕ ಹೂಡಿಕೆದಾರರಲ್ಲಿ ದೀಪಿಕಾ ಪಡುಕೋಣೆ ಸಹಾ ಒಬ್ಬರಾಗಿದ್ದರು. ದೀಪಿಕಾ ಮೂಲ​ತಃ ಉಡುಪಿ ಜಿಲ್ಲೆ​ಯ​ವರು. ಬಾಲಿವುಡ್‌ ಖ್ಯಾತ ನಟ ರಣವೀರ್‌ ಕಪೂರ್‌ ಅವರನ್ನು ವಿವಾಹವಾಗಿರುವ ದೀಪಿಕ ಮುಂಬೈನಲ್ಲಿ ವಾಸಿಸುತ್ತಿದ್ದರು.

57

ಈಗ ಬೆಂಗಳೂರಿನಲ್ಲೂ ಒಂದು ಮನೆ ಖರೀಸುವ ಮೂಲಕ ತವರಿಗೆ ಮರಳಿದ್ದಾರೆ. ಆಗಾಗ ಬೆಂಗಳೂರಿಗೂ ನಟಿ ಭೇಟಿ ಕೊಡುತ್ತಿರುತ್ತಾರೆ. ತಾಯಿ ಹಾಗೂ ಸಹೋದರಿಯ ಜೊತೆ ಕೆಲವು ದಿನ ಇದ್ದು ಹೋಗುತ್ತಾರೆ ದೀಪಿಕಾ

67

ರಾಮ್ ಲೀಲಾ, ಬಾಜಿ ರಾವ್ ಮಸ್ತಾನಿ ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ ದೀಪ್‌-ವೀರ್ ಪ್ರೀತಿಸಿ ಮದುವೆಯಾಗಿದ್ದಾರೆ. ಸದ್ಯ ನಟಿ ದೀಪಿಕಾ ಹಾಲಿವುಡ್‌ನಲ್ಲಿ ತಮ್ಮ ಎರಡನೇ ಪ್ರಾಜೆಕ್ಟ್‌ಗೂ ಸಹಿ ಮಾಡಿದ್ದಾರೆ.

77

ಡಾಕ್ಯುಮೆಂಟ್ ಆಗಸ್ಟ್ 7, 2021 ರಂದು ನೋಂದಾಯಿಸಲಾಗಿದೆ. 2BHK ಫ್ಲಾಟ್ 3451.37 ಚದರ ಅಡಿಗಳ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದೆ. ಇದು ಬಳ್ಳಾರಿ ರಸ್ತೆಯಲ್ಲಿ, ಗಂಗಾನಗರ, ಬೆಂಗಳೂರಿನಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories