'ಬೇಷರಂ ರಂಗ್' ವಿವಾದ; ಕೇಸರಿ ಬಿಕಿನಿ ಧರಿಸಿ 'ನಾಚಿಕೆಯಿಲ್ಲದ ಬಣ್ಣ' ಎಂದ ದೀಪಿಕಾ ವಿರುದ್ಧ ನೆಟ್ಟಿಗರ ಕಿಡಿ

First Published | Dec 14, 2022, 11:06 AM IST

ಶಾರುಖ್ ಖಾನ್ ಪಠಾಣ್ ಸಿನಿಮಾದ ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್​ ಖಾನ್​ ಅನೇಕ ವರ್ಷಗಳ ಬಳಿಕ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿದ್ದ ಪಠಾಣ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಚಿತ್ರದ 'ಬೇಷರಂ ರಂಗ್​...' ಹಾಡು ಬಿಡುಗಡೆಯಾಗಿ ಕೆಲವೇ ಕೆಲವೇ ಗಂಟೆಗೆ ಮಿಲಿಯನ್ ಗಟ್ಟಲೇ ವ್ಯೂವ್ಸ್ ಪಡೆದುಕೊಂಡಿದೆ. 

ಮತ್ತೊಮ್ಮೆ ನಟಿ ದೀಪಿಕಾ ಪಡುಕೋಣೆ  ಮತ್ತು ಶಾರುಖ್​ ಖಾನ್​ ಅವರ ಕೆಮಿಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಂದಹಾಗೆ ಸಖತ್ ಗ್ಲಾಮರಸ್ ಆಗಿ ಮೂಡಿ ಬಂದಿರುವ ಈ ಹಾಡಿನ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ದೀಪಿಕಾ ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳುವ ಅವಶ್ಯತೆ ಇತ್ತಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. 
 

Tap to resize

ಈ ಹಾಡಿನ ಬಗ್ಗೆ ಪರ ವಿರೋಧ ಚರ್ಚೆ ಪ್ರಾರಂಭವಾಗಿದೆ. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದೇ ದೊಡ್ಡ ತಪ್ಪಾಗಿದೆ. ಹೌದು ಕೇಸರಿ ಬಣ್ಣದ ಬಿಕಿನಿ ಧರಿಸಿ ಮಿಂಚಿರುವ ದೀಪಿಕಾ ವಿರುದ್ಧ ಅನೇಕರು ಕಿಡಿಕಾರುತ್ತಿದ್ದಾರೆ. ಕೇಸರಿ ಬೆಕಿನಿ ಧರಿಸಿ ಬೇಷರಂ ರಂಗ್ (ನಾಚಿಕೆಯಿಲ್ಲದ ಬಣ್ಣ) ಎಂದಿರುವುದಕ್ಕೆ ಅನೇಕರು ತರಕಾರು ತೆಗೆದಿದ್ದಾರೆ. ದೀಪಿಕಾ ಅವರಂತ ದೊಡ್ಡ ಸ್ಟಾರ್ ಈ ರೀತಿ ಕಾಣಿಸಿಕೊಳ್ಳುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಅವಶ್ಯಕತೆ ಏನಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಈ ಹಾಡನ್ನು ಸಿಕ್ಕಾಪಟ್ಟೆ ಗ್ಲಾಮರಸ್​ ಆಗಿ ಚಿತ್ರಿಸಲಾಗಿದೆ. ಈ ಹಾಡಿನಲ್ಲಿ ನಟಿ ದೀಪಿಕಾ ಬಿಕಿನಿ ಹಾಗೂ ಸ್ವಿಮ್ ಸೂಟ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ದೀಪಿಕಾ ಬೋಲ್ಡ್ ಅವತಾರ ಕಂಡು ನೆಟ್ಟಿಗರು ಸಖತ್ ಹಾಟ್ ಎನ್ನುತ್ತಿದ್ದಾರೆ. ಹಾಗಾಗಿ ಅನೇಕರು ಇದೊಂದು ‘ಅಶ್ಲೀಲ ಸಾಂಗ್​’ ಎಂದು ಕರೆಯುತ್ತಿದ್ದಾರೆ. 

ಶಾರುಖ್​ ಖಾನ್​ ನಟನೆಯ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಎಂದು ಒಂದಷ್ಟು ಜನರು ಒತ್ತಾಯ ಮಾಡುತ್ತಿದ್ದಾರೆ. ಈಗ ಸೋಶಿಯಲ್​ ಮೀಡಿಯಾದಲ್ಲಿ #BoycottPathaan ಎಂಬ ಟ್ರೆಂಡ್​ ಶುರುವಾಗಿದೆ. ಈಗಾಗಲೇ ಅನೇಕರು ಬಹಿಷ್ಕರಿಸಿ ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ.  ಇದು ಹೀಗೆಯೇ ಮುಂದುವರಿದರೆ ‘ಪಠಾಣ್​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.
 

ಅಂದಹಾಗೆ ಪಠಾಣ್ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳ ಹೆೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಹಾಗೆ ಶಾರುಖ್ ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗ್ಯಾಪ್‌ನ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಲ್ಲದೆ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್​ ಖಾನ್​ ಅವರಿಗಿದೆ. 

ಈ ಚಿತ್ರಕ್ಕಾಗಿ ಶಾರುಖ್ ತುಂಬಾ ಶ್ರಮಪಟ್ಟಿದ್ದಾರೆ. ದೇಹ ಹುರಿಗೊಳಿಸಿ 6 ಪ್ಯಾಕ್​​ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಶಾರುಖ್ ಅವರ 6 ಪ್ಯಾಕ್ ದರ್ಶನ ಆಗಿದೆ. ಈ ವಯಸ್ಸಿನಲ್ಲೂ ಶಾರುಖ್ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Latest Videos

click me!