ಮಗಳ ಹೆರಿಗೆ ದಿನಾಂಕ ರಿವೀಲ್‌ ಮಾಡಿದ ಕರೀನಾರ ತಂದೆ ರಣಧೀರ್‌ ಕಪೂರ್‌!

First Published | Feb 11, 2021, 4:39 PM IST

ಕರೀನಾ ಕಪೂರ್ ತಮ್ಮ ಪ್ರೆಗ್ನೆಂಸಿಯ ಕೊನೆಯ ತಿಂಗಳಲ್ಲಿದ್ದಾರೆ. ತಮ್ಮ ಲುಕ್‌ ಮತ್ತು ವ್ಯಕ್ತಿತ್ವಕ್ಕಾಗಿ ಸುದ್ದಿಯಲ್ಲಿರುವ ಕರೀನಾ ಈ ದಿನಗಳಲ್ಲಿ ಪ್ರೆಗ್ನೆಂಸಿಯ ಕಾರಣದಿಂದಾಗಿ ನ್ಯೂಸ್‌ನಲ್ಲಿದ್ದಾರೆ. ಕರೀನಾ ಎರಡನೇ ಬಾರಿಗೆ ತಾಯಿಯಾಗಲಿದ್ದು ಅವರ ಹೆರಿಗೆ  ದಿನಾಂಕವು ಹೊರಬಂದಿದೆ. ವರದಿಯ ಪ್ರಕಾರ, ಸೈಫ್ ಅಲಿ ಖಾನ್  ಮತ್ತು ಕರೀನಾ ಮುಂದಿನ ವಾರದಲ್ಲಿ ಮತ್ತೊಂದು ಮಗುವನ್ನು ತಮ್ಮ ಮನೆಗೆ ಸ್ವಾಗತಿಸಲಿದ್ದಾರೆ. ಈಗ ಕರೀನಾ ತಂದೆ ರಣಧೀರ್ ಕಪೂರ್ ಮಗಳ ಹೆರಿಗೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

'ಮಗ ಅಥವಾ ಮಗಳು ಯಾವುದೇ ಆದ್ಯತೆ ಇಲ್ಲ, ನಾವು ಆರೋಗ್ಯವಂತ ಮಗುವನ್ನು ಬಯಸುತ್ತೇವೆ ಮತ್ತು ಇಡೀ ಕುಟುಂಬ ಮಗುವಿಗೆ ಕಾಯುತ್ತಿದೆ' ಎಂದು ಹೇಳಿದರು ರಣಧೀರ್ ಕಪೂರ್.
undefined
'ನನಗೆ ತುಂಬಾ ಸಂತೋಷವಾಗಿದೆ, ತೈಮೂರ್ ಜೊತೆ ಆಟವಾಡಲು ಒಬ್ಬ ಸಹೋದರ ಅಥವಾ ಸಹೋದರಿ ಬೇಕು ಎಂದು ನಾನು ಬಹಳ ಸಮಯದಿಂದ ಹೇಳುತ್ತಿದ್ದೇನೆ. ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ ಮತ್ತು ಮಗು ಸಂತೋಷದಿಂದ ಮತ್ತು ಆರೋಗ್ಯವಾಗಿರಬೇಕು ಎಂದು ನಾವು ಪ್ರಾರ್ಥಿಸುತ್ತೇವೆ' ಎಂದು ಕೆಲವು ತಿಂಗಳುಗಳ ಹಿಂದೆ, ಕರೀನಾರ ತಂದೆ ಹೇಳಿದರು.
undefined
Tap to resize

ಇತ್ತೀಚೆಗೆ ಕರೀನಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಅವಳು ಲೈಟ್ ಬ್ಲೂ ಕಲರ್ ಕಫ್ತಾನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೂಮರಾಂಗ್ ವಿಡಿಯೋ ಶೇರ್‌ ಮಾಡಿ 9 ತಿಂಗಳು ಮತ್ತು ಇನ್ನೂ ಬಲಗೊಳ್ಳುತ್ತಿದೆ' ಎಂದು ಬರೆದಿದ್ದರು.
undefined
ನಾನು ಮೊದಲಿಗಿಂತ ಹೆಚ್ಚು ರೆಡಿಯಾಗಿದ್ದೇನೆಮತ್ತು ಅತ್ಮವಿಶ್ವಾಸದಿಂದ ಕೂಡಿದ್ದೇನೆ. ನಾನು ಮೊದಲ ಬಾರಿ ತಾಯಿಯಾಗುವಾಗ ಹೆಚ್ಚು ನರ್ವಸ್‌ ಮತ್ತು ಕಿರಿಕಿರಿಯಾಗಿದ್ದೆ. ಆದರೆ ಈ ಬಾರಿ ಆ ರೀತಿ ಇಲ್ಲ ಎಂದು ಹೇಳಿದ್ದಾರೆ ಕರೀನಾಕಪೂರ್‌. ‌.
undefined
ನನ್ನ ಪ್ರೆಗ್ನೆಂಸಿಯ ಪೂರ್ತಿ ಕೆಲಸ ಮಾಡಿದ್ದೇನೆ ಮತ್ತು ಡೆಲೆವರಿಯ ನಂತರವೂ ಮಾಡುತ್ತೇನೆ. ಪ್ರೆಗ್ನೆಂಸಿ ಸಮಯದಲ್ಲಿ ಆಕ್ಟೀವ್‌ ಇರುವುದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು' ಎಂದು ಹೇಳಿದ ಬಾಲಿವುಡ್‌ ದಿವಾ ಕರೀನಾ ಕಪೂರ್‌ ಖಾನ್.
undefined
ಸೈಫ್‌ ಅರ್ಜೆಂಟ್‌ ಇರುವ ಶೂಟಿಂಗ್‌ಗಳನ್ನು ಮುಗಿಸಿ, ತಮ್ಮ ಉಳಿದ ಎಲ್ಲಾ ಕೆಲಸಗಳನ್ನು ಮುಂದೆ ಹಾಕಿರುವುದಾಗಿ ಹೇಳಿದ್ದಾರೆ.
undefined
'ಮನೆಯಲ್ಲಿ ನ್ಯೂ ಬಾರ್ನ್‌ ಬೇಬಿ ಇರುವಾಗ ಯಾರು ಕೆಲಸ ಮಾಡಲು ಬಯಸುತ್ತಾರೆ. ನಿಮ್ಮ ಮಗು ದೊಡ್ಡ ಆಗುವುದನ್ನು ನೋಡಲಿಲ್ಲ ಅಂದರೆ ನೀವು ತುಂಬಾ ದೊಡ್ಡ ತಪ್ಪು ಮಾಡುತ್ತೀರಿ' ಎಂದು ಹೇಳಿದ ಸೈಫ್‌ ಆಲಿ ಖಾನ್‌.
undefined
ಸೈಫ್‌ ಮತ್ತು ಕರೀನಾ ಇಲ್ಲಿವರೆಗೂ ತಮ್ಮ ಹೊಸ ಮಗುವಿನ ಹೆಸರು ಯೋಚಿಸಿಲ್ಲ ಎಂದು ನಟಿ ಇಂಟರ್‌ವ್ಯೂವ್‌ವೊಂದರಲ್ಲಿ ಹೇಳಿದ್ದಾರೆ.
undefined
ನನ್ನ ಮೊದಲ ಮಗ ತೈಮೂರ್‌ನ ಹೆಸರಿನಿಂದ ತುಂಬಾ ಗಲಾಟೆ ನೋಡಬೇಕಾಯಿತು. ಅದ್ದರಿಂದ ಈವರೆಗೆ ಯಾವುದೇ ಹೆಸರು ಯೋಚಿಸಿಲ್ಲ ಮತ್ತು ಯಾವ ಹೆಸರು ಡಿಸೈಡ್‌ ಆಗುತ್ತದೇಯೋ ತಕ್ಷಣ ಅದನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕರೀನಾ ಹೇಳಿದರು.
undefined

Latest Videos

click me!