ಸಿನಿಮಾ ಅವಕಾಶಗಳು ಕಡಿಮೆಯಾದ್ರೂ ನಾನು ಆಂಟಿ ಪಾತ್ರದಲ್ಲಿ ನಟಿಸಲ್ಲ ಎಂದು ಅಮಿಶಾ ಪಟೇಲ್ ಹೇಳಿಕೊಂಡಿದ್ದಾರೆ. ಹಿಂದಿ ಮಾತ್ರವಲ್ಲೇ ತೆಲುಗು ಸಿನಿಮಾಗಳಲ್ಲಿಯೂ ಅಮಿಶಾ ಪಟೇಲ್ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಮಾಗಳಲ್ಲಿಯೂ ಆಗಾಗ್ಗೆ ಅಮಿಶಾ ಪಟೇಲ್ ಕಾಣಿಸಿಕೊಳ್ಳುತ್ತಿರುತ್ತಾರೆ.
27
ಆರಂಭದಲ್ಲಿ ಹಿಟ್ ಸಿನಿಮಾ ನೀಡಿದರೂ ಅಮಿಶಾ ಪಟೇಲ್‌ಗೆ ಸ್ಟಾರ್ ಪಟ್ಟ ಸಿಗಲಿಲ್ಲ ಎಂಬ ಮಾತಿದೆ. ಆದ್ರೆ ಬಾಲಿವುಡ್‌ನಲ್ಲಿ ಸಿಕ್ಕ ಅವಕಾಶಗಳು ಸದ್ಬಳಕೆ ಮಾಡಿಕೊಂಡವ ನಟಿಯರ ಪೈಕಿ ಅಮಿಶಾ ಪಟೇಲ್ ಸಹ ಒಬ್ರು.
37
ಅಮಿಶಾ ಪಟೇಲ್ ಅವರಿಗೆ ಸದ್ಯ 49 ವರ್ಷ. ವಯಸ್ಸು ಜಸ್ಟ್ ನಂಬರ್ ಅಂದಿರೋ ಅಮಿಶಾ ಇಂದಿಗೂ 20ರ ಚೆಲುವೆಯರಿಗೆ ಟಫ್ ಫೈಟ್ ಕೊಡುವಷ್ಟು ಮಾದಕವಾಗಿ ಕಾಣಿಸಿಕೊಳ್ಳುತ್ತಾರೆ. ಕಳೆದ ವರ್ಷ ಅಮೀಶಾ ಪಟೇಲ್ ನಾಯಕಿಯಾಗಿ ನಟಿಸಿದ್ದ ಗದರ್ 2 ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
47
ಈ ಸಿನಿಮಾ ಹಿಟ್ ಬಳಿಕ ನಾನು ತಾಯಿ ಪಾತ್ರದಲ್ಲಿ ನಟಿಸಲ್ಲ ಎಂದು ಹೇಳಿಕೊಂಡಿದ್ದರು. ಗದರ್ 2 ಚಿತ್ರದಲ್ಲಿ ಅಮಿಶಾ ಪಟೇಲ್‌ಗೆ ಟಿನೇಜ್ ವಯಸ್ಸಿನ ಮಗನಿದ್ದನು. ಸಂಪೂರ್ಣವಾಗಿ ತಾಯಿ ಪಾತ್ರದಲ್ಲಿ ನಟಿಸಲಾರೆ ಎಂದು ಅಮಿಶಾ ಪಟೇಲ್ ಹೇಳಿಕೆ ನೀಡಿದ್ದಾರೆ.
57
ಅವಕಾಶಗಳು ಸಿಕ್ಕರೆ ನಾಯಕಿಯಾಗಿ ನಟಿಸುತ್ತೇನೆ. ಒಳ್ಳೆಯ ಪಾತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತೇನೆ. ಹಾಗಂತ ಸಂಪೂರ್ಣವಾಗಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳಲು ನನಗಿಷ್ಟವಿಲ್ಲ ಅಂತಾರೆ ಅಮಿಶಾ ಪಟೇಲ್.
67
2000ರಲ್ಲಿ ಬಿಡುಗಡೆಯಾದ ಪವನ್ ಕಲ್ಯಾಣ್ ನಟನೆಯ ಬದ್ರಿ ಸಿನಿಮಾದಲ್ಲಿಯೂ ಅಮಿಶಾ ಪಟೇಲ್ ನಟಿಸಿದ್ದರು. ಹೃತಿಕ್ ರೋಷನ್ ಜೊತೆಯಲ್ಲಿಯೇ ಅಮಿಶಾ ಬಾಲಿವುಡ್ ಪ್ರವೇಶ ಮಾಡಿದ್ದರು.
77
ಗದರ್ ಏಕ್ ಪ್ರೇಮ್ ಕಥಾ ಅಮಿಶಾ ಪಟೇಲ್‌ಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಯೇ ಜಿಂದಗಿ ಕಾ ಸಫರ್, ಆಪ್ ಮುಕೇ ಅಚ್ಚೇ ಲಗನೇ ಲಗೇ, ಯೇ ಹೈ ಜಲ್ವಾ , ಹಮ್‌ರಾಜ್, ಕ್ಯಾ ಯಹೀ ಪ್ಯಾರ್ ಹೈ, ರೇಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಮಿಶಾ ಪಟೇಲ್ ನಟಿಸಿದ್ದಾರೆ.