ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಮದುವೆ; ರಿಸೆಪ್ಶನ್‌ನಲ್ಲಿ ಸಿಂಧೂರ, ಕೆಂಪು ಬಿಂದಿ ಇಟ್ಟು ಪೋಸ್ ಕೊಟ್ಟ ನಟಿ

First Published | Jun 24, 2024, 10:20 AM IST

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೂ.23ರಂದು ವಿವಾಹವಾದರು ಮತ್ತು ಅಂದೇ ಸಂಜೆ ರಿಸೆಪ್ಶನ್ ಇಟ್ಟುಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸೋನಾಕ್ಷಿ ಕೆಂಪು ಬಿಂದಿ ಮತ್ತು ಸಿಂಧೂರದೊಂದಿಗೆ ಕಾಣಿಸಿಕೊಂಡು ತಾನು ಇಸ್ಲಾಂಗೆ ಮತಾಂತರವಾಗಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು. 

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಏಳು ವರ್ಷಗಳ ಡೇಟಿಂಗ್ ನಂತರ ಅಂತಿಮವಾಗಿ ಜೂನ್ 23, 2024 ರಂದು ವಿವಾಹವಾದರು.

ಅಂತರ್ಧರ್ಮೀಯ ವಿವಾಹವಾದ ಕಾರಣ ಮತಾಂತರದ ಮಾತುಗಳು ಎದ್ದಿದ್ದವು. ಜೊತೆಗೆ, ಸೋನಾಕ್ಷಿಯ ಮನೆಯಲ್ಲಿ ಈ ವಿವಾಹಕ್ಕೆ ಸಮ್ಮತಿ ಇಲ್ಲದಿರುವುದು ಆಕೆಯ ಕುಟುಂಬಸ್ಥರ ನಡೆಯಲ್ಲಿ ಸ್ಪಷ್ಟವಾಗಿತ್ತು. 

Tap to resize

ಅದೇನೇ ಇರಲಿ, ಸೋನಾಕ್ಷಿ ಮತ್ತು ಜಹೀರ್ ಕೋರ್ಟ್ ವಿವಾಹವಾಗಿದ್ದು, ವಿವಾಹದ ಸಂದರ್ಭದಲ್ಲಿ ಸೋನಾಕ್ಷಿಯ ತಂದೆ ತಾಯಿ ಮತ್ತು ಜಹೀರ್ ಕುಟುಂಬಸ್ಥರು ಇದ್ದರು. 

ಪ್ರಿ ವೆಡ್ಡಿಂಗ್ ಸೆರೆಮನಿಗೆ ಬಾರದ ಸೋನಾಕ್ಷಿ ಸಹೋದರರಾದ ಲವ ಮತ್ತು ಕುಶರು ಕೂಡಾ ವಿವಾಹಕ್ಕೆ ಹಾಜರಾಗಿ ತಂಗಿಯ ಮೇಲಿನ ಪ್ರೀತಿ ವ್ಯಕ್ತಪಡಿಸಿದರು. 

ಇನ್ನು ಮದುವೆಯ ದಿನವೇ ನಡೆದ ರಿಸೆಪ್ಶನ್‌ನಲ್ಲಿ ಸೋನಾಕ್ಷಿ ಕೆಂಪು ರೇಶ್ಮೆ ಸೀರೆ, ಕೆಂಪು ಬಿಂದಿ ಮತ್ತು ಸಿಂಧೂರವಿಟ್ಟು, ಮಲ್ಲಿಗೆ ಹೂ ಮುಡಿದು ತಾನು ಈ ವಿವಾಹಕ್ಕಾಗಿ ಮತಾಂತರವಾಗಿಲ್ಲ ಎಂದು ಸೂಚ್ಯಪಡಿಸಿದರು. 

ಜೋಡಿಗಳಿಬ್ಬರೂ ಅಪರಿಮಿತ ಸಂತೋಷದಲ್ಲಿ ತೇಲಾಡುವುದನ್ನು ಫೋಟೋಗಳಲ್ಲಿ ಕಾಣಬಹುದು. ಈ ಮಧ್ಯೆ, ಜಹೀರ್ ತನ್ನ ಹಿಂದೂ ಅತ್ತೆ ಮಾವಂದಿರ ಕಾಲಿಗೆ ಎರಗಿ, ಬಳಿಕ ಸೋನಾಕ್ಷಿಯ ಕೆನ್ನೆಗೆ ಮುತ್ತನಿರಿಸಿದರು. 

ಮನೆಯಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಜಹೀರ್ ತಂಗಿ ವಿಶ್ ಮಾಡುವಾಗ ಸೋನಾಕ್ಷಿ ಕಣ್ಣೀರು ಹಾಕುತ್ತಾ ಭಾವೋದ್ವೇಗಕ್ಕೆ ಒಳಗಾದರು. 

ವಿವಾಹದ ಬಳಿಕ ಇನ್ಸ್ಟಾಗ್ರಾಂನಲ್ಲಿ ಸಂತೋಷ ಹಂಚಿಕೊಂಡ ಸೋನಾಕ್ಷಿ, 'ಈ ದಿನವೇ, ಏಳು ವರ್ಷಗಳ ಹಿಂದೆ (23.06.2017) ಪರಸ್ಪರರ ಕಣ್ಣುಗಳಲ್ಲಿ, ನಾವು ಪ್ರೀತಿಯನ್ನು ಅದರ ಶುದ್ಧ ರೂಪದಲ್ಲಿ ನೋಡಿದ್ದೇವೆ ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವೆ. ಇಂದು ಆ ಪ್ರೀತಿಯು ಎಲ್ಲಾ ಸವಾಲುಗಳು ಮತ್ತು ವಿಜಯಗಳ ಮೂಲಕ ನಮಗೆ ಮಾರ್ಗದರ್ಶನ ನೀಡಿದೆ ... ಈ ಕ್ಷಣ... ನಮ್ಮ ಎರಡೂ ಕುಟುಂಬಗಳು ಮತ್ತು ನಮ್ಮ ಎರಡೂ ದೇವರುಗಳ ಆಶೀರ್ವಾದದೊಂದಿಗೆ.. ' ಎಂದಿದ್ದಾರೆ.

ಇನ್ನು ರಿಸೆಪ್ಶನ್‌ನಲ್ಲಿ ಈ ಜೋಡಿಗೆ ಶುಭಾಶಯಗಳನ್ನು ಹೇಳಲು ಚಿತ್ರರಂಗದ ಕೆಲವೇ ವ್ಯಕ್ತಿಗಳು ಭಾಗವಹಿಸಿದ್ದರು. ಅದರಲ್ಲೂ ಮುಖ್ಯವಾಗಿ ಹೀರಾಮಂಡಿಯ ಬಳಗವನ್ನು ಕಾಣಬಹುದಿತ್ತು. 

ಸಮಾರಂಭಕ್ಕೆ ಬಿಬ್ಬೋಜಾನ್ ಅದಿತಿ ರಾವ್ ಹೈದರಿ ತನ್ನ ಗೆಳೆಯ ಸಿದ್ಧಾರ್ಥ್ ಜೊತೆ ಬಂದರೆ, ರೇಖಾ ತಮ್ಮ ವಿಶೇಷ ಉಡುಗೆಯೊಂದಿಗೆ ವಯಸ್ಸಿನ ಹಂಗಿಲ್ಲದೆ ಹೊಳೆಯುತ್ತಿದ್ದರು. 

ಸೋನಾಕ್ಷಿ ಹಾಗೂ ಝಹೀರ್‌ನನ್ನು ಒಬ್ಬರಿಗೊಬ್ಬರನ್ನು ಪರಿಚಯಿಸಿದ ಹಾಗೂ ಜಹೀರ್‌ಗೆ ಮೊದಲಿಂದಲೂ ಆತ್ಮೀಯರಾದ ಸಲ್ಮಾನ್ ಖಾನ್ ಜೋಡಿಗೆ ಶುಭ ಹಾರೈಸಿದರು. 

ಇನ್ನು ಸಲ್ಮಾನ್ ತಂಗಿ ಅರ್ಪಿತಾ ಖಾನ್ ಮತ್ತು ಆಕೆಯ ಪತಿ ಆಯುಶ್ ಶರ್ಮಾ ಕೂಡಾ ರಿಸೆಪ್ಶನ್‌ನಲ್ಲಿ ಭಾಗಿಯಾಗಿ ಅಭಿನಂದನೆ ಹೇಳಿದರು. 

ಚಿನ್ನದ ಬಣ್ಣದಲ್ಲಿ ಹೊಳೆಯುವ ಸೀರೆಯಲ್ಲಿ ನಟಿ ಕಾಜೋಲ್ ಕೂಡಾ ಹೊಳೆಯುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನವಜೋಡಿಗಳಿಗೆ ವಿಶ್ ಮಾಡಿದರು. 

Latest Videos

click me!