ಮರದ ಮೆಟ್ಟಿಲು, ಕಪಾಟಿರೋ ಕರೀನಾ ಕಪೂರ್‌ ಮನೆ: ಸೋಫಾ ಮೇಲೆ ಸ್ಲಿಪ್ಪರ್ಸ್ ಇಟ್ಟಿದ್ಯಾಕೆ?

Published : Oct 21, 2023, 05:17 PM ISTUpdated : Oct 21, 2023, 05:31 PM IST

ಬಾಲಿವುಡ್‌ನ ಫ್ಯಾಶನ್ ದಿವಾ, ಕರೀನಾ ಕಪೂರ್ ಖಾನ್ (Kareena Kapoor) ಮತ್ತು ಪತಿ ಸೈಫ್ ಅಲಿ ಖಾನ್ (Saif Ali Khan) ಮುಂಬೈನ ಐಷಾರಾಮಿ ಪ್ರದೇಶವೊಂದರಲ್ಲಿ ತಮ್ಮ ಮಕ್ಕಳಾದ ತೈಮೂರ್ ಮತ್ತು ಜಹಾಂಗೀರ್ ಜೊತೆಗೆ ಅದ್ದೂರಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ನಟಿ ಹಂಚಿಕೊಂಡ ಕೆಲವು ಫೋಟೋಗಳು ಮತ್ತು ವೀಡಿಯೊಗಳಲ್ಲಿ ಕರೀನಾ ಮತ್ತು ಸೈಫ್  ಮನೆಯ ಕೆಲವು ಝಲಕ್‌ಗಳನ್ನು ನೋಡಬಹುದು. ಹೇಗಿದೆ ನೋಡಿ ಕರೀನಾ ಮನೆ.

PREV
18
ಮರದ ಮೆಟ್ಟಿಲು, ಕಪಾಟಿರೋ ಕರೀನಾ ಕಪೂರ್‌ ಮನೆ: ಸೋಫಾ ಮೇಲೆ ಸ್ಲಿಪ್ಪರ್ಸ್ ಇಟ್ಟಿದ್ಯಾಕೆ?

ತನ್ನ ಇನ್‌ಸ್ಟಾಗ್ರಾಮ್‌ ಹ್ಯಾಂಡಲ್‌ನಲ್ಲಿ  ಹಂಚಿಕೊಂಡ ವೀಡಿಯೋದಲ್ಲಿ ಅವರ ಮನೆಯ ಪ್ರತಿ ಮೂಲೆಯ ಸೌಂದರ್ಯವನ್ನು ಸೆರೆ ಹಿಡಿದಿದ್ದನ್ನು ಗಮನಿಸಬಹುದು. 

28

ವೀಡಿಯೋ ಆರಂಭದಲ್ಲಿ ಕರೀನಾ ಮರದ ಮೆಟ್ಟಿಲು, ಕೆಂಪು ಗೋಡೆಗಳು, ಕೆಲವು ಸಣ್ಣ ನೇತಾಡುವ ಸಸ್ಯಗಳು ಮತ್ತು ಇಟಾಲಿಯನ್ ಮಾರ್ಬಲ್ ನೆಲವನ್ನು ಒಳಗೊಂಡಿರುವ ಬೆಳಕು ತುಂಬಿದ ಪ್ರದೇಶದಿಂದ ಒಳಗೆ ನಡೆಯುವುದನ್ನು ಕಾಣಬಹುದು. 

38

ಕೋಣೆಯೊಳಗೆ ಕಾಲಿಡುತ್ತಿದ್ದಂತೆ, ನಾವು ಒಂದು ದೊಡ್ಡ ಗಾಜಿನ ಗೋಡೆಯನ್ನು ನೋಡ ಬಹುದು ಮತ್ತು ಅದರ ಪ್ರತಿಬಿಂಬದಲ್ಲಿ, ಮನೆಯ ಕೆಲವು ಸೋಫಾ ಮತ್ತು ಇತರ ಸೌಂದರ್ಯದ ಪೀಠೋಪಕರಣಗಳನ್ನು ಗುರುತಿಸಬಹುದು.

 

48

ನಂತರ ಕರೀನಾ ಅವರು ತಮ್ಮ ಮರದ ಸ್ಟಡಿ ಟೇಬಲ್ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ಹಿನ್ನೆಲೆಯಲ್ಲಿ, ಗೋಡೆ ಮೇಲೆ ಹ್ಯಾಂಗಿಗ್‌ಗಳು ವರ್ಣಚಿತ್ರಗಳು, ಆರಾಮದಾಯಕವಾದ ನೀಲಿ ಕುರ್ಚಿ ಮತ್ತು ಪುರಾತನ ತುಣುಕುಗಳಿಂದ ಅಲಂಕರಿಸಲ್ಪಟ್ಟ ಸಣ್ಣ ಕ್ಯಾಬಿನೆಟ್ ಅನ್ನು ನೋಡಬಹುದು. 

58

ಒಂದು ಬದಿಯಲ್ಲಿ ಪುಸ್ತಕಗಳು, ಪ್ರಮಾಣಪತ್ರಗಳುತುಂಬಿದ ಬೃಹತ್ ಮರದ ಶೆಲ್ಫ್ ಅನ್ನು ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದಂತೆ ಕಾಣಿಸುತ್ತದೆ. 

 

68

ವೀಡಿಯೊದ ಮತ್ತೊಂದು ದೃಶ್ಯದಲ್ಲಿ, ಕುಶನ್‌ಗಳಿಂದ ಅಲಂಕರಿಸಲ್ಪಟ್ಟ ಹಸಿರು-ವರ್ಣದ ವೆಲ್ವೆಟ್ ಸೋಫಾ ಸೆಟ್‌ದಲ್ಲಿ ಅವರು ಕುಳಿತಿದ್ದಾರೆ. ಆದರೆ, ಚಪ್ಪಲಿಗಳನ್ನು ಕೂರುವ ಜಾಗದಲ್ಲಿಟ್ಟಿದ್ದು ತುಸು ವಿಚಿತ್ರವೆನಿಸುತ್ತಿದೆ. 

78

ಅವರ ಪಕ್ಕದಲ್ಲಿ, ನಾವು ದೀಪದ ಜೊತೆಗೆ ಸಣ್ಣ ಸೈಡ್ ಟೇಬಲ್ ಅನ್ನು ಗುರುತಿಸಬಹುದು. ವೀಡಿಯೊದಲ್ಲಿ, ಅವರು ಮ್ಯಾಚಿಂಗ್ ಪ್ಯಾಂಟ್‌ಗಳೊಂದಿಗೆ ಜೋಡಿಯಾಗಿರುವ ಗುಲಾಬಿ ಬಣ್ಣದ ಸೂಟ್ ಅನ್ನು ಧರಿಸಿದ್ದಾರೆ.

88

ಅದ್ದೂರಿ ಮನೆಯ ಟೆರೇಸ್ ಗಾರ್ಡನ್ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ, ಅಲ್ಲಿ ಕರೀನಾ ಮತ್ತು ಸೈಫ್ ತಮ್ಮ ಉದ್ಯಮ ಮತ್ತು ಕುಟುಂಬದಿಂದ ಆಪ್ತ ಸ್ನೇಹಿತರಿಗಾಗಿ ಪಾರ್ಟಿಗಳು ಮತ್ತು ಗೆಟ್-ಟುಗೆದರ್‌ಗಳನ್ನು ಆಯೋಜಿಸುತ್ತಾರೆ.

Read more Photos on
click me!

Recommended Stories