ಶಾರ್ಟ್ ಫ್ರಾಕ್ ಧರಿಸಿ ಟೆನ್ನಿಸ್ ಕಣಕ್ಕಿಳಿದ Pooja Hegde: ನಿಮಗೆ Pakistan ಹಸಿರು ಬಣ್ಣ ಇಷ್ಟನಾ ಎಂದ ಫ್ಯಾನ್ಸ್!

First Published | Oct 21, 2023, 4:13 PM IST

ಸೌತ್‌ ಸಿನಿಮಾರಂಗದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ, ಇದರೆ ಮಧ್ಯೆ ಬ್ರೇಕ್‌ ಪಡೆದೊಕೊಂಡಿದ್ದು, ಟೆನ್ನಿಸ್ ಕೋರ್ಟ್​ನಲ್ಲಿ ಮಿಂಚಿದ್ದಾರೆ. ಸದ್ಯ ನಟಿಯ ಫೋಟೋಸ್ ವೈರಲ್ ಆಗಿವೆ.

ಬಹುಭಾಷಾ ನಟಿ ಪೂಜಾ ಹೆಗ್ಡೆ ಭಾರತೀಯ ಚಿತ್ರರಂಗದ ಸುಂದರ ತಾರೆ. ಇವರು ವಿಶೇಷವಾಗಿ ತಮ್ಮ ಸೌಂದರ್ಯದಿಂದಲೇ ಜನರ ಗಮನ ಸೆಳೆದಿದ್ದಾರೆ. ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸನಿಹವಾಗಿದ್ದಾರೆ. 

ಸೋಷಿಯಲ್​ ಮೀಡಿಯಾದಲ್ಲಿ ಪ್ರತಿ ಬಾರಿಯೂ ಪೂಜಾ ಹೆಗ್ಡೆ ಚಿತ್ರಗಳು ವಿಶೇಷ ಜಾಗ ಗಿಟ್ಟಿಸಿಕೊಳ್ಳುತ್ತವೆ. ಇವರು ಸಿನಿಮಾ ಚಿತ್ರೀಕರಣದಿಂದ ಕೊಂಚ ವಿರಾಮ ಪಡೆದರೆ ಸಾಕು, ಮಾಲ್ಡೀವ್ಸ್​ಗೆ ತೆರಳಿ ರಜಾದಿನಗಳನ್ನು ಎಂಜಾಯ್​ ಮಾಡುತ್ತಾರೆ. ವೈಯಕ್ತಿಕ ಜೀವನವನ್ನು ಆನಂದಿಸುತ್ತಾರೆ. 

Tap to resize

ಇದೀಗ ಟೆನ್ನಿಸ್ ಕೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೀನ್​ ಕಲರ್​ ಶಾರ್ಟ್​ ಗೌನ್​ನಲ್ಲಿ ರಾಕೆಟ್​ ಹಿಡಿದು ಟೆನ್ನಿಸ್​ ಆಡಿದ್ದಾರೆ. ಈ ಫೋಟೋಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಲಿಯನ್​ಗಟ್ಟಲೇ ಲೈಕ್ಸ್​ಗಳನ್ನು ಪಡೆದುಕೊಂಡಿದೆ. 

ಪೂಜಾ ಫೋಟೋ ನೋಡಿದ ನೆಟ್ಟಿಗರು ನಿಮಗೆ ಪಾಕಿಸ್ತಾನಿ ಹಸಿರು ಬಣ್ಣ ನಿಮಗೆ ಇಷ್ಟನಾ ಎಂದು ಪ್ರಶ್ನೆ ಮಾಡಿದ್ದು, ಇನ್ನು ಕೆಲವು ನೆಟ್ಟಿಗರು ಈ ಫೋಟೋಗಳ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸಿದ್ದಾರೆ. ನಟಿಯ ಅಂದವನ್ನು ಹಾಡಿ ಹೊಗಳಿ ಕಮೆಂಟ್​ ವಿಭಾಗವನ್ನು ಭರ್ತಿ ಮಾಡಿದ್ದಾರೆ. 

ಇತ್ತೀಚೆಗಷ್ಟೇ ಪೂಜಾ ಹೆಗ್ಡೆ ಹಿಲ್ಟನ್ ಮಾಲ್ಡೀವ್ಸ್‌ನಲ್ಲಿ ತಮ್ಮ 33 ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಅಲ್ಲದೇ  ಬೋಲ್ಡ್‌ ಫೋಟೋಗಳ ಮೂಲಕ ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದರು.

ನಾಗ ಚೈತನ್ಯ ಅಭಿನಯದ 'ಒಕಾ ಲೈಲಾ ಪಾರೋ' ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದ ಪೂಜಾ ಹೆಗ್ಡೆ ನಂತರ ವರುಣ್ ಅಭಿನಯದ 'ಮುಕುಂದ' ಚಿತ್ರದ ಮೂಲಕ ಮತ್ತಷ್ಟು ಫೇಮಸ್ ಆದರು. ಸತತ ಫ್ಲಾಪ್ ಗಳಿಂದ ಕಂಗೆಟ್ಟಿರುವ ಪೂಜಾ ಹೆಗಡೆ ಒಳ್ಳೆ ಹಿಟ್ ಗಾಗಿ ಕಾಯುತ್ತಿದ್ದಾರೆ.

Latest Videos

click me!