ಪ್ರಜ್ವಲ್‌ ದೇವರಾಜ್‌ ಜೊತೆ ನಟಿಸಿದ್ದ ನಟಿ ಆಸ್ಪತ್ರೆಗೆ ದಾಖಲು, ಮೂಗಿಗೆ ಟ್ಯೂಬ್ ಹಾಕಿರುವ ಫೋಟೋ ವೈರಲ್‌

First Published | Oct 21, 2023, 3:04 PM IST

ನಟ ಪ್ರಜ್ವಲ್‌ ದೇವರಾಜ ಅಭಿನಯದ ಗಂಗೆ ಬಾರೆ ತುಂಗೆ ಬಾರೆ  ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಸುನೈನಾ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಗೆ ಏನಾಯ್ತು ಎಂದು ಅವರ ಫ್ಯಾನ್ಸ್‌ ತುಂಬಾ ಆತಂಕಗೊಂಡಿದ್ದಾರೆ.
 

ಕೈಯಲ್ಲಿ ಡ್ರಿಪ್ಸ್ ಮೂಗಿನಲ್ಲಿ ಟ್ಯೂಬ್ ಹಾಕಿಸಿಕೊಂಡು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಫೋಟೋವನ್ನು ನಟಿ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ನನಗೆ ಸ್ವಲ್ಪ ಸಮಯ ಕೊಡಿ. ನಾನು ಹಿಂತಿರುಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿರುವುದು ಏಕೆ ಎಂದು ನಟಿ ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಅಭಿಮಾನಿಗಳು ಆತಂಕಗೊಂಡಿದ್ದು, ಬೇಗ ಗುಣಮುಖರಾಗಿ ಎಂದು ಕಮೆಂಟ್‌ ಮಾಡಿದ್ದಾರೆ. 

Tap to resize

ನಟಿ ಸುನೈನಾ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ತಮಿಳು ಸಿನೆಮಾಗಳಲ್ಲೇ ನಟಿಸಿದ್ದು, ಕದಳಿಲ್ ವಿಝುಂತೇನ್ ಅವರ ಜೊಚ್ಚಲ ತಮಿಳು ಸಿನೆಮಾವಾಗಿದೆ.

ಸಿನೆಮಾ ಜೊತೆಗೆ ಕೆಲವು ವೆಬ್ ಸಿರೀಸ್  ನಲ್ಲಿ ಕೂಡ ನಟಿಸುತ್ತಿದ್ದಾರೆ. 2023 ರಲ್ಲಿ ಅವರ ರೆಜಿನಾ ತಮಿಳು ಸಿನೆಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಬಂದಿತ್ತು.

ಸುನೈನಾ ಮೂಲತ ತೆಲುಗಿನವರು. ಆದರೆ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದಲ್ಲಿ. 2005ರಲ್ಲಿ ತೆರೆ ಕಂಡ ಕುಮಾರ್‌ vs ಕುಮಾರಿ ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಸುನೈನಾ ನಂತರ ತಮಿಳು ಸಿನಿಮಾರಂಗದಲ್ಲಿ ಸಕ್ರಿಯರಾದರು.

2008ರಲ್ಲಿ ನಟ ಪ್ರಜ್ವಲ್ ದೇವರಾಜ್‌ ನಟನೆಯ  ಗಂಗೆ ಬಾರೆ ತುಂಗೆ ಬಾರೆ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿ ಸುನೈನಾ ಗಂಗಾ ಪಾತ್ರದಲ್ಲಿ ಮಿಂಚಿದ್ದರು.

ಮತ್ತೊಂದು ಪೋಸ್ಟ್‌ ಹಂಚಿಕೊಂಡಿರುವ ಸುನೈನಾ ಮತ್ತೆ ವಾಪಸ್‌ ಬರುತ್ತೇನೆ, ಇನ್ನಷ್ಟು ಸ್ಟ್ರಾಂಗ್‌ ಆಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

Latest Videos

click me!