ಬಿಪಾಶಾ ಬಸು ಹೆದರುಪುಕ್ಲಿ ಕಣ್ರೀ; ಪತ್ನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಕರಣ್ ಸಿಂಗ್

Published : Jan 08, 2023, 12:58 PM IST

44ರ ವಸಂತಕ್ಕೆ ಕಾಲಿಟ್ಟ ನಟಿ ಬಿಪಾಶಾ ಬಸು. ಹಾರರ್ ಸಿನಿಮಾ ನೋಡಿ ಪತ್ನಿ ಹೆದರಿಕೊಂಡ ಕ್ಷಣದ ಬಗ್ಗೆ ರಿವೀಲ್ ಮಾಡಿದ ಕರಣ್ ಸಿಂಗ್....  

PREV
17
ಬಿಪಾಶಾ ಬಸು ಹೆದರುಪುಕ್ಲಿ ಕಣ್ರೀ; ಪತ್ನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಕರಣ್ ಸಿಂಗ್

ಬಾಲಿವುಡ್ ಕೃಷ್ಣ ಸುಂದರಿ ಬಿಪಾಶಾ ಬಸು ಜನವರಿ 7ರಂದು 44ರ ವಸಂತಕ್ಕೆ ಕಾಲಿಟ್ಟರು. 2016ರಲ್ಲಿ ಬಹುಕಾಲದ ಗೆಳೆಯ ಕರಣ್ ಸಿಂಗ್‌ನ ಮದುವೆಯಾದರು. ಈ ಸೆಲೆಬ್ರಿಟಿ ಕಪಲ್ ಅನೇಕರಿಗೆ ರೋಲ್ ಮಡಲ್. 

27

'ನಾವಿಬ್ಬರು ತುಂಬಾನೇ ಕ್ಲೋಸ್ ಅಗಿದ್ದೀವಿ. ಒಬ್ಬರನ್ನೊಬ್ಬರು ತುಂಬಾ ಕೇರ್ ಮಾಡುತ್ತೀವಿ. ನಾವಿಬ್ಬರು ನೆಮ್ಮದಿಯಾಗಿ ಸಮಯ ಕಳೆಯುತ್ತೀವಿ. ಬಿಪಾಶ ಪ್ರಾಮಾಣಿಕತೆ ನನಗೆ ತುಂಬಾ ಇಷ್ಟವಾಗುತ್ತದೆ. ಚಿನ್ನದಂತ ಮನಸ್ಸಿರುವ ಹುಡುಗಿ' ಎಂದು ಕರಣ್ ಸಂದರ್ಶನವೊಂದರಲ್ಲಿ ಹೇಳಿದ್ದರು.

37

ವೃತ್ತಿ ಜಿವನದಲ್ಲಿ ಬಿಪಾಶ ಅನೇಕ ಹಾರರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡರೂ ಸಿನಿಮಾದಲ್ಲಿ ದೆವ್ವ ನೋಡಿದ್ದರೆ ಹೆದರಿಕೊಳ್ಳುತ್ತಾರಂತೆ.

47

'ಬಿಪ್ ಅನೇಕ ಹಾರರ್ ಸಿನಿಮಾಗಳನ್ನು ಮಾಡಿದ್ದಾರೆ. ಭಾರತದಲ್ಲಿ Halloween ಆಚರಿಸಿದ್ದರೆ ಅದಕ್ಕೆ ಬಿಪಾಶ ಬಸು ಜಯಂತಿ ಎಂದು ಹೆಸರು ಇಡಬೇಕು ಎನ್ನುತ್ತಾರೆ' ಎಂದು ಕರಣ್ ಹೇಳಿದ್ದರು.

57

 'ನಮ್ಮ ಮನೆಯಲ್ಲಿ ನಾವು ಟಿವಿಯಲ್ಲಿ ಒಂದು ಹಾರರ್ ಸಿನಿಮಾ ನೋಡುತ್ತಿದ್ದೆವು ಆಗ ಸ್ಕ್ರೀನ್ ನೋಡಲು ಬಿಪಾಶ ನಿರಾಕರಿಸುತ್ತಿದ್ದರು. ಒಂದು ಸಲ ದೆವ್ವ ನೋಡಿ ಟಿವಿ ಆಫ್ ಮಾಡಲು ಮುಂದಾದರು'

67

 'ದೇವ್ರೆ ಅನೇಕ ಸಿನಿಮಾಗಳಲ್ಲಿ ನೀನು ದೆವ್ವ ಆಗಿರುವೆ ಆದರೆ ನೀನೆ ದೆವ್ವ ನೋಡಿಕೊಂಡು ಹೆದರಿಕೊಳ್ಳುವುದು ಯಾಕೆ?ಎಂದು ಪ್ರಶ್ನೆ ಮಾಡುವೆ. ನಿಜ ಹೇಳಬೇಕು ಅಂದ್ರೆ ಬಿಪಾಶ ಹೆದರುಪುಕ್ಲಿ' ಎಂದು ಕರಣ್ ಕಾಲೆಳೆದಿದ್ದರು. 

77

ನವೆಂಬರ್ 12ರಂದು ಬಿಪಾಶಾ ಬಸು ಹೆಣ್ಣು ಮಗುವನ್ನು ಬರ ಮಾಡಿಕೊಂಡರು. ಆಕೆಗೆ ದೇವಿ ಬಸು ಸಿಂಗ್‌ ಗ್ರೋವರ್‌ ಎಂದು ನಾಮಕರಣ ಮಾಡಿದ್ದರು. ಮಗಳ ಫೋಟೋ ರಿವೀಲ್ ಮಾಡಿಲ್ಲ ಆದರೆ ಪುಟ್ಟ ಕೈ ಬೆರಳುಗಳನ್ನು ತೋರಿಸಿದ್ದಾರೆ. 

Read more Photos on
click me!

Recommended Stories