ಬೇರೆಯವರ ಮದುವೆಯಲ್ಲಿ ಜನರು ಆದ್ಯತೆ ನೀಡೋದು ಒಂದು ಡ್ರೆಸ್ ಇನ್ನೊಂದು ಊಟ. ಯಾರದ್ದೋ ಮದುವೆಯಲ್ಲಿ ಉಂಡವನೇ ಜಾಣ ಅನ್ನೋ ಹಾಗೆ, ಎಷ್ಟೇ ಕ್ಯೂ ಇದ್ರೂ, ನಾ ಮುಂದು ತಾ ಮುಂದು ಅಂತ ಜಗ್ಗಾಡಿ, ಒಂದು ಸೀಟು ಹಿಡಿದು, ಬಗೆ ಬಗೆ ಮೃಷ್ಟಾನ್ನ ಭೋಜನ ಸವಿಯುತ್ತಿದ್ರೆ ಆಹಾ, ಅದ್ರ ಮಜವೇ ಬೇರೆ. ಮಧ್ಯವ ವರ್ಗದ ಮನೆ ಮದುವೆಯಲ್ಲೇ ರುಚಿ ರುಚಿಯಾದ ವೆರೈಟಿ ಊಟ ಸಿಗುತ್ತೆ ಅಂದ್ಮೇಲೆ ಹೈ ಪ್ರೊಫೈಲ್ ಮದುವೆ ಊಟ ಇನ್ನೆಷ್ಟು ಅದ್ಧೂರಿಯಾಗಿರ್ಬೇಡ.
28
ಹೈಪ್ರೊಫೈಲ್ ಮದುವೆ ಊಟ
ಸಾಮಾನ್ಯವಾಗಿ ಹೈ ಪ್ರೊಫೈಲ್ ಮದುವೆಗಳಲ್ಲಿ ಸಿಕ್ಕಾಪಟ್ಟೆ ವೆರೈಟಿ, ಚಿತ್ರ ವಿಚಿತ್ರ ಖಾದ್ಯಗಳನ್ನು ನೋಡೋಕೆ, ಸವಿಯೋಕೆ ಸಿಗುತ್ತೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೈಪ್ರೊಫೈಲ್ ಮದುವೆಗಳಲ್ಲಿ ಕಾಣಿಸಿಕೊಳ್ತಾರೆ. ಭರ್ಜರಿ ಊಟ ಮಾಡಿ ಬಂದ್ರು ಅಂತ ನೋಡಿದೋರು ಮಾತನಾಡಿಕೊಳ್ತಾರೆ. ಎಲ್ಲರ ಲೈಫ್ ನಾವಂದುಕೊಂಡಂಗೆ ಇರೋದಿಲ್ಲ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್, ಈ ಹೈಪ್ರೊಫೈಲ್ ಮದುವೆ ಊಟದ ಬಗ್ಗೆ ಇಂಟರೆಸ್ಟಿಂಗ್ ವಿಷ್ಯ ಹೇಳಿದ್ದಾರೆ.
38
ಕೃತಿ – ಪುಲ್ಕಿತ್ ಜೊತೆ ಕರಣ್
ಮಾನ್ಯವರ್ ಶಾದಿ ಶೋನಲ್ಲಿ ಕೃತಿ ಖರ್ಬಂದ ಮತ್ತು ಪುಲ್ಕಿತ್ ಸಾಮ್ರಾಟ್ ಜೊತೆ ಕರಣ್ ಜೋಹರ್ ಮಾತನಾಡಿದ್ದಾರೆ. ಕೃತಿ ಹಾಗೂ ಪುಲ್ಕಿತ್ ಗೆ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಮದುವೆಯಲ್ಲಿ ಯಾವ ವಿಷ್ಯದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನು ಕರಣ್ ಕೇಳಿದಾಗ, ನವಜೋಡಿ ಊಟ ಅಂತ ಉತ್ತರ ನೀಡಿದೆ.
ಸಂದರ್ಶನದಲ್ಲಿ ಕೃತಿ, ಪುಲ್ಕಿತ್ ಸೀಕ್ರೆಟ್ ಹೊರ ಹಾಕಿದ್ದಾರೆ. ಪುಲ್ಕಿತ್ ಗೆ ಮನೆಯಲ್ಲಿ ಅನ್ನಪೂರ್ಣೆ ಅಂತ ಕರೆಯಲಾಗುತ್ತೆ. ಬೇರೆಯವರಿಗೆ ಊಟ ನೀಡೋದು ಪುಲ್ಕಿತ್ ಗೆ ಇಷ್ಟ. ಅವರನ್ನು ಮದುವೆಯಾಗಲು ಇದೂ ಒಂದು ಕಾರಣ ಅಂತ ಕೃತಿ ಹೇಳಿದ್ದಾರೆ.
58
ಹೈ ಪ್ರೊಫೈಲ್ ಮದುವೆಯಲ್ಲಿ ಊಟ ಮಾಡಲ್ಲ ಕರಣ್
ಈ ಮಧ್ಯೆ ಕರಣ್ ಜೋಹರ್, ಕೃತಿ ಶಾಕ್ ಆಗುವ ವಿಷ್ಯವೊಂದನ್ನು ಹೇಳಿದ್ದಾರೆ. ಈವರೆಗೂ ಯಾವುದೇ ಹೈಪ್ರೊಫೈಲ್ ಮದುವೆಯಲ್ಲಿ ನಾನು ಊಟ ಮಾಡಿಲ್ಲ ಅಂತ ಕರಣ್ ಜೋಹರ್ ಹೇಳಿದ್ದಾರೆ.
68
ಊಟ ಯಾಕೆ ಮಾಡಲ್ಲ ಕರಣ್
ಕರಣ್ ಜೋಹರ್ ಪ್ರಕಾರ, ಮದುವೆಗಳಲ್ಲಿ ಊಟಕ್ಕೆ ಕಾಯ್ಬೇಕು. ಉದ್ದುದ್ದದ ಲೈನ್ ನಲ್ಲಿ ನಿಲ್ಲಬೇಕು. ತಟ್ಟೆ ಹಿಡಿದು ಊಟಕ್ಕೆ ಕೈ ಚಾಚಬೇಕು. ಪ್ಲೇಟ್ ಕೈನಲ್ಲಿ ಹಿಡಿದು ಊಟ ಮಾಡೋದು ನನಗೆ ವಿಚಿತ್ರವೆನ್ನಿಸುತ್ತದೆ. ಮುದವೆಯಲ್ಲಿ ನಾನು ಊಟ ಮಾಡೋದಿಲ್ಲ ಅಂತ ಕರಣ್ ಹೇಳಿದ್ದಾರೆ.
78
ರಾಮರಾಜು ಮಂಟೇನಾ ಪುತ್ರಿ ಮದುವೆಯಲ್ಲಿ ಕರಣ್
ಇತ್ತೀಚೆಗೆ ಉದಯಪುರದಲ್ಲಿ ಅಮೇರಿಕನ್ ಬಿಲಿಯನೇರ್ ರಾಮರಾಜು ಮಂಟೇನಾ ಅವರ ಪುತ್ರಿ ನೇತ್ರಾ ಮಂಟೇನಾ ಮತ್ತು ವಂಶಿ ಗಡಿರಾಜು ಅವರ ಮದುವೆಯಲ್ಲಿ ಕರಣ್ ಪಾಲ್ಗೊಂಡಿದ್ದರು. ಬಾಲಿವುಡ್ ಸ್ಟಾರ್ಸ್ ರಣವೀರ್ ಸಿಂಗ್, ವರುಣ್ ಧವನ್, ಶಾಹಿದ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಕೂಡ ಈ ಮದುವೆಗೆ ಸಾಕ್ಷ್ಯವಾಗಿದ್ದರು.
88
ಕರಣ್ ಮುಂದಿನ ಚಿತ್ರ
ಕರಣ್ ಜೋಹರ್, ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ನಟಿಸಿರುವ ಈ ಚಿತ್ರ ಕ್ರಿಸ್ಮಸ್ಗೆ ಅಂದರೆ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ.