Published : Aug 04, 2023, 05:59 PM ISTUpdated : Aug 04, 2023, 06:26 PM IST
ಏಳು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ ಕರಣ್ ಜೋಹರ್ (Karan Johar) ಅವರು ತಮ್ಮ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ (Rocky Aur Rani Kii Prem Kahaani) ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಸಮಯದಲ್ಲಿ ಅವರು ಆಲಿಯಾ ಭಟ್ (Alia Bahtt) ಮದುವೆಗೆ ಸಂಬಂಧಿಸಿದ ಒಂದು ಇಂಟರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಆಲಿಯಾ ಭಟ್ ಅವರು ಎರಡು ಬಾರಿ ವಿವಾಹವಾದರು ಎಂದು ಕರಣ್ ಜೋಹರ್ ನೆನಪಿಸಿಕೊಂಡಿದ್ದಾರೆ. ಅಷ್ಷಕ್ಕೂ ಈ ಘಟನೆಯ ಹಿಂದಿನ ವಿಷಯವೇನು?
ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಅದ್ಭುತವಾದ ಮೊದಲ ವಾರಾಂತ್ಯದ ನಂತರ ತನ್ನ ಓಟವನ್ನು ಮುಂದುವರಿಸಿದೆ ಮತ್ತು ಸುಮಾರು 70 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
29
ಕರಣ್ ಜೋಹರ್ ನಿರ್ದೇಶನವು ಸಾಮಾಜಿಕ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿದೆ ಮತ್ತು ಪ್ರೇಮಕಥೆ, ಗ್ರ್ಯಾಂಡ್ ಸೆಟ್‌ಗಳು ಮತ್ತು ಚಾರ್ಟ್‌ಬಸ್ಟರ್ ಸಂಗೀತದಿಂದ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತಿದೆ.
39
ತಮ್ಮ ಚಿತ್ರದ ಯಶಸ್ಸನ್ನು ಸೆಲೆಬ್ರೆಟ್ ಮಾಡಲು ಕರಣ್ ಜೋಹರ್ ಅವರು ನಿರ್ಮಾಪಕರೊಂದಿಗೆ ಪತ್ರಿಕಾ ಕಾನ್ಫರೆನ್ಸ್ ಅನ್ನು ಆಯೋಜಿಸಿದರು, ಅವರು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕೆ ನೀಡಿದ ಪ್ರೀತಿಗಾಗಿ ಎಲ್ಲರಿಗೂ ಧನ್ಯವಾದ ಹೇಳಿದರು.
49
ಈ ಈವೆಂಟ್‌ನಲ್ಲಿ, ಕರಣ್ ಜೋಹರ್ ಅವರು ರಾಕಿ ರಾಂಧವಾ ಅಕಾ ರಣವೀರ್ ಸಿಂಗ್ ಮತ್ತು ರಾಣಿ ಅಕಾ ಆಲಿಯಾ ಭಟ್ ವಿವಾಹವಾದ ಚಿತ್ರದ ಅಂತ್ಯದ ದೃಶ್ಯವನ್ನು ಉಲ್ಲೇಖಿಸಿ ಆಲಿಯಾ ಭಟ್ ಒಂದೇ ವಾರದಲ್ಲಿ ಎರಡು ಬಾರಿ ಹೇಗೆ ಮದುವೆಯಾದರು ಎಂಬುದರ ಕುರಿತು ಆಸಕ್ತಿದಾಯಕ ವಿಷಯವನ್ನು ಕರಣ್ ನೆನಪಿಸಿಕೊಂಡರು.
59
'ಆಲಿಯಾ ಮತ್ತು ರಣಬೀರ್ ಮದುವೆಯಾಗಿ ನಾಲ್ಕು ದಿನವಾಗಿತ್ತು, ನಂತರ ನಾವು ರಣವೀರ್ ಮತ್ತು ಆಲಿಯಾ ಅವರೊಂದಿಗೆ ನಮ್ಮ ಸರಣಿಯನ್ನು ಶೂಟ್ ಮಾಡುತ್ತಿದ್ದೆವು. ಹಾಗಾಗಿ ಆ ವಾರದಲ್ಲಿ ಆಲಿಯಾ ಭಟ್ ಎರಡು ಬಾರಿ ವಿವಾಹವಾದರು, ಒಂದು ನಿಜ ಜೀವನದಲ್ಲಿ ಮತ್ತು ಇನ್ನೊಂದು ರೀಲ್ ಜೀವನದಲ್ಲಿ' ಎಂದು ಕರಣ್ ಹಂಚಿಕೊಂಡಿದ್ದಾರೆ.
69
'ಆಲಿಯಾ ಭಟ್ ದೃಶ್ಯದಲ್ಲಿ ಹೊಂದಿರುವ ಮೆಹಂದಿಯು ರಣಬೀರ್ ಕಪೂರ್ ಅವರೊಂದಿಗಿನ ಮದುವೆಯ ಸಂಭ್ರಮಾಚರಣೆಯಲ್ಲಿ ಹೊಂದಿದ್ದ ಅದೇ ಮೆಹಂದಿಯಾಗಿದೆ. ನಾವು ಅದನ್ನು ಡಾರ್ಕ್‌ಗೊಳಿಸಿದ್ದೇವೆ' ಎಂದು ಕರಣ್ ಹೇಳಿದರು.
79
'ನಾವು ಆ ಹಾಡನ್ನು ‘ಕುದ್ಮಯಿ’ ಜೈಸಲ್ಮೇರ್‌ನಲ್ಲಿ ಚಿತ್ರೀಕರಿಸಿದ್ದೇವೆ ಮತ್ತು ವೈಭವಿ ಮರ್ಚೆಂಟ್ ಅದನ್ನು ಸುಂದರವಾಗಿ ಚಿತ್ರಿಸಿದ್ದಾರೆ' ಎಂದು ಕರಣ್ ಜೋಹರ್ ಮತ್ತಷ್ಟು ಸೇರಿಸಿದರು,
89
ಒಟ್ಟಾರೆಯಾಗಿ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಒಂದು ಸಂತೋಷದಾಯಕ ಮತ್ತು ನಾಸ್ಟಾಲ್ಜಿಕ್ ಸವಾರಿ. ಚಲನಚಿತ್ರ ನಿರ್ಮಾಪಕ, ಕುಟುಂಬದ ಕಥೆಗಳಿಗೆ ಬಂದಾಗ ಮತ್ತೊಮ್ಮೆ, ಅವರಂತೆ ಯಾರೂ ಇಲ್ಲ ಎಂದು ಸಾಬೀತುಪಡಿಸುತ್ತಾರೆ.
99
ಆಲಿಯಾ ಮತ್ತು ರಣವೀರ್ ಜೊತೆಗೆ, ಚಿತ್ರದಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಜೊತೆಗೆ ತೋಟಾ ರಾಯ್ ಚೌಧರಿ ಮತ್ತು ಚುರ್ನಿ ಗಂಗೂಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.