ಭಾರತದ ಶ್ರೀಮಂತ ನಟಿಯಾಗಿದ್ದ ಈಕೆ, ಗಂಡನ ಕಿರುಕುಳಕ್ಕೆ ಕುಡಿತ ಶುರು ಮಾಡಿ ನಯಾಪೈಸೆ ಇಲ್ಲದೆ ಸತ್ತಳು!

First Published Aug 4, 2023, 3:51 PM IST

ಬಾಲಿವುಡ್‌ ನ ಈ ನಟಿ ಅಂದಿನ ಕಾಲದ ಆಗರ್ಭ ಶ್ರೀಮಂತ ನಟಿಯಾಗಿದ್ದಳು. 4 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ  ಕೇವಲ 38 ವರ್ಷಕ್ಕೆ ದುರಂತ ಅಂತ್ಯ ಕಂಡಳು. ಅಂದಿನ ಕಾಲದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿ, ಫ್ಯಾಷನ್ ಡಿಸೈನರ್ ಮಾತ್ರವಲ್ಲ ಉರ್ದು ಕವಯತ್ರಿ ಆಗಿದ್ದಳು. ಫಿಲಂ ಪೇರ್ ಪ್ರಶಸ್ತಿ ಕೂಡ ಈಕೆಗೆ ಲಭಿಸಿದೆ.

ಆಗಸ್ಟ್ 1 ‘ಟ್ರ್ಯಾಜಿಡಿ ಕ್ವೀನ್’ ಮೀನಾ ಕುಮಾರಿ ಅವರ 90ನೇ ಜನ್ಮದಿನ. ಸುಂದರ ನಟಿಯನ್ನು ಈಗ ಚಲನಚಿತ್ರಗಳು ಮತ್ತು ಹಾಡುಗಳಿಗಾಗಿ ನೆನಪಿಸಿಕೊಳ್ಳುತ್ತಾರೆ. ಮೀನಾ ಕುಮಾರಿ 4 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು ಮತ್ತು ಅವರು ಆ ಕಾಲದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಇವರ ನಿಜವಾದ ಹೆಸರು ಮಹಜಬಿ ಬಾನೋ.

ವರದಿಗಳ ಪ್ರಕಾರ, ಮೀನಾ ಕುಮಾರಿ ಆ ಕಾಲದ ಅತ್ಯಂತ ಶ್ರೀಮಂತ ನಟಿ. ಮೀನಾ ಕುಮಾರಿ ತನ್ನ ಬಣ್ಣದ ಬದುಕಿನಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಯಶಸ್ವಿಯಾದರೂ, ಅವರ ಜೀವನವು ತುಂಬಾ ದುರಂತಗಳಿಂದ ತುಂಬಿತ್ತು. ಮಾತ್ರವಲ್ಲ ಜೀವನದ ನೋವಿನಿಂದ ಮರಣವನ್ನು ಹೊಂದಿದ್ದರು. ಮೀನಾ ಕುಮಾರಿ ಅವರು ಕೇವಲ 38 ವರ್ಷದವರಾಗಿದ್ದಾಗ ನಿಧನರಾದರು.

Latest Videos


ಮೀನಾ ಕುಮಾರಿ ಆಗಸ್ಟ್ 1, 1933 ರಂದು ಜನಿಸಿದರು ಮತ್ತು ಅವರು ತಮ್ಮ ಕುಟುಂಬದಲ್ಲಿ ಎರಡನೇ ಹೆಣ್ಣು ಮಗು. ಆಕೆಯ ತಂದೆ ಅಲಿ ಬಕ್ಷ್‌ಗೆ ಓರ್ವ ಮಗ  ಬೇಕಾಗಿದ್ದರಿಂದ ಮೀನಾ ಕುಮಾರಿಯನ್ನು ಅನಾಥಾಶ್ರಮಕ್ಕೆ ಬಿಟ್ಟನು.

ಆದರೆ ಕೆಲವು ತಿಂಗಳುಗಳ ನಂತರ, ಮೀನಾಳ ತಾಯಿ ಇಕ್ಬಾಲ್ ಬೇಗಂ ಮಗಳನ್ನು ಕಾಣುವ ಹಂಬಲ ವ್ಯಕ್ತಪಡಿಸಿ ಮೀನಾಳನ್ನು ಅನಾಥಾಶ್ರಮದಿಂದ ಮರಳಿ ಕರೆತರುವಂತೆ ತನ್ನ ಪತಿಗೆ ಒತ್ತಾಯಿಸಿದಳು. ಅಲಿ ಮೀನಾಳನ್ನು ಮನೆಗೆ ಕರೆತಂದನು. ಆದರೆ ಅವರು ಹೆಚ್ಚು ಸಂಪಾದಿಸಲು ಸಾಧ್ಯವಾಗದ ಕಾರಣ, ಕುಟುಂಬವು ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಇದರಿಂದ ಮೀನಾ ಕುಮಾರಿ 4ನೇ ವಯಸ್ಸಿನಲ್ಲೇ ದುಡಿಯಬೇಕಾಯಿತು. 

ಮೀನಾ ಕುಮಾರಿ 50 ರ ದಶಕದ ಅತ್ಯಂತ ಜನಪ್ರಿಯ ನಟಿಯಾಗಿದ್ದರು ಮತ್ತು ಆ ಕಾಲದ ಎಲ್ಲಾ ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದರು. ಖ್ಯಾತ ನಿರ್ದೇಶಕರೊಬ್ಬರು ಒಮ್ಮೆ ಮೀನಾ ಕುಮಾರಿಯೊಂದಿಗೆ ಅನುಚಿತವಾಗಿ ವರ್ತಿಸಿದರು. ಮಾತ್ರವಲ್ಲ ಆ ದೃಶ್ಯವನ್ನು ಸೆರೆಹಿಡಿದರು. ಮೀನಾ ಇದನ್ನು ವಿರೋಧಿಸಿದ್ದಕ್ಕೆ ನಿರ್ದೇಶಕರು ಕೋಪಗೊಂಡು ಚಿತ್ರದಲ್ಲಿ ನಟ ಮೀನಾಗೆ ಕಪಾಳಮೋಕ್ಷ ಮಾಡಬೇಕಾದ ದೃಶ್ಯವನ್ನು ಬೇಕೆಂದೇ ಸೇರಿಸಿದರು.

ತನ್ನ ಸೇಡು ತೀರಿಸಿಕೊಳ್ಳಲು ನಿರ್ದೇಶಕ , ನಟ ನಿಂದ ಮೀನಾಕುಮಾರಿಗೆ 31 ಬಾರಿ ಕಪಾಳಮೋಕ್ಷ ಮಾಡಿಸಿದರು. ಮೀನಾ ಕುಮಾರಿ ಆ ಕಾಲದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. ಇಂಡಸ್ಟ್ರಿಯಲ್ಲಿ ಇಂಪಾಲಾಕ್ಕೆ ಪ್ರಯಾಣಿಸುತ್ತಿದ್ದ ಏಕೈಕ ನಟಿ ಅವರು. ಮೀನಾ ಕುಮಾರಿ ತನ್ನ  ಉಚ್ಛ್ರಾಯ ಸ್ಥಿತಿಯಲ್ಲಿ ಹಲವಾರು ಐಷಾರಾಮಿ ಕಾರುಗಳು ಮತ್ತು ಆಸ್ತಿಗಳನ್ನು ಹೊಂದಿದ್ದರು ಎನ್ನಲಾಗಿದೆ.

ಕೇವಲ 18 ವರ್ಷ ವಯಸ್ಸಿನ ಮೀನಾ ಕುಮಾರಿ 14 ಫೆಬ್ರವರಿ 1952 ರಂದು, ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ಕಮಲ್ ಅಮ್ರೋಹಿಯೊಂದಿಗೆ ವಿವಾಹವಾದರು, ಆ ಸಮಯದಲ್ಲಿ ಅವರು ಮೂರು ಮದುವೆಯಾಗಿದ್ದರು. ಮಕ್ಕಳ ತಂದೆಯೂ ಆಗಿದ್ದರು. ಈ ದಾಂಪತ್ಯವು ಹೆಚ್ಚು ಕಾಲ ಉಳಿಯಲಿಲ್ಲ. 1964ರಲ್ಲಿ, ಮೀನಾ ಕುಮಾರಿ ಮತ್ತು ಕಮಲ್ ಅಮ್ರೋಹಿ ಅವರ ಸಂಬಂಧವು ಮುರಿದುಹೋಯಿತು. ಇಬ್ಬರೂ ವಿಚ್ಛೇದನ ಪಡೆಯಲಿಲ್ಲ. 

ಮೀನಾ ಕುಮಾರಿ ತಮ್ಮ ಕುಟುಂಬದ ಸದಸ್ಯರ ಅಪೇಕ್ಷೆಯ ನಡುವೆಯೂ ನಿರ್ದೇಶಕ ಕಮಲ್ ಅಮ್ರೋಹಿ ಅವರನ್ನು ವಿವಾಹವಾದರು. ಕಮಲ್ ಅಮ್ರೋಹಿ ಉತ್ತಮ ಪತಿಯನ್ನು ಸಾಬೀತುಪಡಿಸಲು ವಿಫಲರಾದರು ಮತ್ತು ಅವರು ಮೀನಾ ಕುಮಾರಿ ಮೇಲೆ ದಬ್ಬಾಳಿಕೆ, ಹಿಂಸೆ ನೀಡಿದರು. ಮೀನಾ ಕುಮಾರಿ ಕೆಲವು ವರ್ಷಗಳ ನಂತರ ಕಮಲ್ ಅಮ್ರೋಹಿಯನ್ನು ತೊರೆಯಲು ನಿರ್ಧರಿಸಿ ತನ್ನ ಸಹೋದರಿಯ ನಿವಾಸಕ್ಕೆ ಸ್ಥಳಾಂತರಗೊಂಡರು.

ಕಮಲ್ ಅವರೊಂದಿಗಿನ ವಿವಾಹ ವಿಫಲವಾದ ನಂತರ ಮೀನಾ ಕುಮಾರಿ ಮದ್ಯವ್ಯಸನಿಯಾದರು ಮತ್ತು ಅವರು ಹಲವಾರು ಕಾಯಿಲೆಗಳಿಂದ ಚಿಕ್ಕ ವಯಸ್ಸಿನಲ್ಲಿ ನಿಧನರಾದರು. ಕೊನೆಯ ದಿನಗಳಲ್ಲಿ ಮೀನಾ ಕುಮಾರಿ ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ. 

ಮೀನಾ ಕುಮಾರಿ ಅವರು ತಮ್ಮ ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದರು. ಮಾತ್ರವಲ್ಲ ಅವರು ತೀರಿಕೊಂಡ ನಂತರ  ಮೀನಾ ಕುಟುಂಬಕ್ಕೆ ಆಸ್ಪತ್ರೆಯಲ್ಲಿ 3,500 ರೂ.ಗಳನ್ನು ಪಾವತಿಸಲು ಸಾಧ್ಯವಾಗದ ಸ್ಥಿತಿ ಇತ್ತು ಎಂದರೆ ನಂಬಲೇಬೇಕು.
 

ನಿರ್ದೇಶಕ ಬಿಮಲ್ ರಾಯ್ ಅವರ ಮಗಳು ರಿಂಕಿ ರಾಯ್ ಭಟ್ಟಾಚಾರ್ಯ ಈ ಬಗ್ಗೆ  ಸಂದರ್ಶನ ಹೇಳಿಕೊಂಡಿದ್ದು, "ಈ ಉನ್ನತ ದರ್ಜೆಯ ನಟಿ, ಚಿತ್ರರಂಗದ ಅಧಿದೇವತೆ ಮಾರ್ಚ್ 31, 1972 ರಂದು ಮಧ್ಯಾಹ್ನ 3:25 ಕ್ಕೆ ಸೇಂಟ್ ಎಲಿಜಬೆತ್ ನರ್ಸಿಂಗ್‌ನಲ್ಲಿ ಕೊನೆಯುಸಿರೆಳೆದರು. ಮನೆಯವರಿಗೆ ಆಕೆಯ ಮೃತದೇಹವನ್ನು ತೆಗೆದುಕೊಂಡು ಹೋಗಲು 3,500 ರೂ. ಕೂಡ ಇರಲಿಲ್ಲ" ಎಂದಿದ್ದರು.

click me!