ದೇವರಕೊಂಡ ಮತ್ತು ರಶ್ಮಿಕಾ ಸಂಬಂಧದ ಬಗ್ಗೆ ಕರಣ್ ಜೋಹರ್ ಏನು ಹೇಳಿದ್ದಾರೆ ನೋಡಿ
First Published | Sep 29, 2022, 3:57 PM ISTಸೆಲೆಬ್ರಿಟಿಗಳ ಚಾಟ್ ಶೋಗಳಲ್ಲಿ ಒಂದಾದ 'ಕಾಫಿ ವಿತ್ ಕರಣ್' ಸೀಸನ್ 7 ಕೊನೆಗೊಂಡಿದೆ. ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಹೋಸ್ಟ್ ಮಾಡಿದ ಶೋನಲ್ಲಿ ಈ ವರ್ಷ ನಾಲ್ಕು ವಿಷಯಗಳು ಮುಖ್ಯವಾಗಿ ಇದ್ದವು, ಈ ಸೀಸನ್ ಆಲಿಯಾ ಭಟ್, ಸೆಕ್ಸ್ , ಸ್ವಜನಪಕ್ಷಪಾತ ಮತ್ತು ಸ್ಟಾರ್ಸ್ ಸಂಬಂಧದ ಬಗ್ಗೆ ಹೆಚ್ಚು ಚರ್ಚೆಯಾಯಿತು . 'ಕಾಫಿ ವಿತ್ ಕರಣ್ ಸೀಸನ್ 7' ಗುರುವಾರ ಕೊನೆಗೊಳ್ಳುತ್ತಿದ್ದಂತೆ, ಕರಣ್ ಜೋಹರ್ ಅವರು ನಟ ವಿಜಯ್ ದೇವರಕೊಂಡ (Vijay Deverakonda) ಅವರ ಸಂಬಂಧದ ಸ್ಥಿತಿಯನ್ನು ಬಹಿರಂಗಪಡಿಸಿದರು, ಬಹಳ ಸಮಯದಿಂದ ಸೌತ್‌ನ ಈ ಸೂಪರ್ ಸ್ಟಾರ್ ರಶ್ಮಿಕಾ ಮಂದಣ್ಣ (Rashmika Mandanna) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ.