Mahesh Babu Mother Death; ಅಜ್ಜಿ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಿತಾರಾ; ಮಗಳನ್ನು ಸಂತೈಸಿ ಕಣ್ಣೀರಿಟ್ಟ ನಟ

First Published | Sep 28, 2022, 5:42 PM IST

ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನಕ್ಕೆ ಟಾಲಿವುಡ್‌ನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ತಾಯಿಯನ್ನು ಕಳೆದುಕೊಂಡ ನಟ ಮಹೇಶ್ ಬಾಬು ಅಮ್ಮನ ಮೃತದೇಹದ ಮುಂದೆ ಕಣ್ಣೀರಿಟ್ಟಿದ್ದಾರೆ. 

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಇಂದು (ಸೆಪ್ಟಂಬರ್ 28) ಬೆಳಗಿನ ಜಾವ ಸುಮಾರು 4 ಗಂಟೆಗೆ ಇಹಲೋಕ ತ್ಯಜಿಸಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇಂದಿರಾ ದೇವಿ ಕಳೆದ ಕೆಲವು ವಾರಗಳಿಂದ ಹೈದರಾಬಾದ್‍ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟ ಕಾರಣ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಕಿಚಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದರು.

ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನಕ್ಕೆ ಟಾಲಿವುಡ್‌ನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುದ್ದಿ ಹೊರಬೀಳುತ್ತಿದ್ದಂತೆ ಅನೇಕ ಗಣ್ಯರು ಮಹೇಶ್ ಬಾಬು ಮನೆಗೆ ದಾವಿಸಿದ್ದಾರೆ. ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ಮಹೇಶ್ ಬಾಬು‌ಗೆ ಸಾಂತ್ವನ ಹೇಳಿದರು. 

Tap to resize

ತಾಯಿಯ ಪಾರ್ಥೀವ ಶರೀರದ ಮುಂದೆ ಕಣ್ಣೀರಿಡುತ್ತ ಕುಳಿತಿದ್ದ ಮಹೇಶ್ ಬಾಬು ದೃಶ್ಯ ಅಭಿಮಾನಿಗಳ ಕಣ್ಣು ಒದ್ದೆ ಮಾಡಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟನಿಗೆ ಧೈರ್ಯ ತುಂಬುತ್ತಿದ್ದಾರೆ, ಸಾಂತ್ವನ ಹೇಳುತ್ತಿದ್ದಾರೆ. ಸ್ಟ್ರಾಂಗ್ ಆಗಿರಿ ಎಂದು ಪ್ರಾರ್ಥಿಸುತ್ತಿದ್ದಾರೆ. 
 

ಅಜ್ಜಿಯ ಪಾರ್ಥಿವ ಶರೀರದ ಮುಂದೆ ನಿಂತು ಮಹೇಶ್ ಬಾಬು ಪುತ್ರಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಕರಳುಹಿಂಡುವಂತಿದೆ. ಅಜ್ಜಿಯನ್ನು ತುಂಬಾ ಇಷ್ಟಪಡುತ್ತಿದ್ದ ಸಿತಾರಾಗೆ ಅಜ್ಜಿ ಇನ್ನಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಮಹೇಶ್ ಬಾಬು ಪಕ್ಕದಲ್ಲಿ ತಂದೆ ಕೃಷ್ಣ ಅವರು ಕುಳಿತು ಪತ್ನಿಯನ್ನು ನೆನೆದು ಕಣ್ಣೀರಿಡುತ್ತಿದ್ದರೆ, ಮಹೇಶ್ ಬಾಬು ಕಾಲು ಮೇಲೆ ಮಗಳು ಸಿತಾರ ಕುಳಿತು ಜೋರಾಗಿ ಅಳುತ್ತಿದ್ದಳು. ಸಿತಾರಾಳನ್ನು ಮಹೇಶ್ ಬಾಬು ಸಮಾಧಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಸ್ಟೇ ಸ್ಟ್ರಾಂಗ್ ಸಿತಾರಾ ಎಂದು ಕಾಮೆಂಟ್ ಮಾಡಿ ಧೈರ್ಯ ತುಂಬುತ್ತಿದ್ದಾರೆ.

ಇನ್ನು ತೆಲುಗು ಸ್ಟಾರ್ ಗಳಲಾದ ರಾಣಾ ದಗ್ಗುಬಾಟಿ, ವೆಂಕಟೇಶ್, ನಾಗಾರ್ಜುನ, ಲಕ್ಷ್ಮಿ ಮಂಚು, ಮೋಹನ್ ಬಾಬು, ತ್ರಿಮಿಕ್ರಮ್, ವಿಜಯ್ ದೇವರಕೊಂಡ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇಂದಿರಾ ದೇವಿ ಅವರ ಅಂತಿಮ ದರ್ಶನ ಪಡೆದರು. ಮಹೇಶ್ ಬಾಬು ಅವರನ್ನು ಹಗ್ ಮಾಡಿ ಸಾಂತ್ವನ ಹೇಳಿದರು. 

ಇನ್ನು ಅನೇಕ ಸ್ಟಾರ್ ಚಿರಂಜೀವಿ, ಜೂ ಎನ್ ಟಿ ಆರ್, ರವಿ ತೇಜ, ವೆಂಕಟ್ ಪ್ರಭು ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ನಟ ಚಿರಂಜೀವಿ ಟ್ವೀಟ್ ಮಾಡಿ, ಇಂದಿರಾ ದೇವಿ ಅವರ ನಿಧನ ನಿಜಕ್ಕೂ ತುಂಬಾ ಬೇಸರ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.ಸೂಪರ್ ಸ್ಟಾರ್ ಕೃಷ್ಣ ಹಾಗೂ ಮಹೇಶ್ ಅವರಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ' ಎಂದು ಟ್ವೀಟ್ ಮಾಡಿದ್ದಾರೆ. 

ಜೂ.ಎನ್ ಟಿ ಆರ್ ಟ್ವೀಟ್ ಮಾಡಿ, ಇಂದಿರಾ ದೇವಿ ಅವರ ನಿಧನದ ಸುದ್ದಿ ತುಂಬಾ ದುಃಖವುಂಟುಮಾಡಿದೆ.ಮಹೇಶ್ ಬಾಬು ಕುಟುಂಬಕ್ಕೆ ದುಃಖಬರಿಸುವ ಶಕ್ತಿ ದೇವರು ಕೊಡಲಿ'ಎಂದು ಹೇಳಿದರು. ಇಂದು ಸಂಜೆ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಅವರ ಅಂತಮ ಕ್ರೀಯೆ ನೆರವೇರಿಸಲಾಯಿತು.    

Latest Videos

click me!