ಕೋಟಿ ಬೆಲೆ ಬಾಳುವ ಕಾರ್‌ ಖರೀದಿಸಿದ ʼಕಾಂತಾರʼ ಸೂತ್ರಧಾರ ರಿಷಬ್‌ ಶೆಟ್ಟಿ! ಈ ಲಕ್ಷುರಿ ಕಾರ್‌ ಫೋಟೋಗಳಿವು!

‘ಕಾಂತಾರ’ ಸಿನಿಮಾ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಮಾಡಿರೋ ರಿಷಬ್‌ ಶೆಟ್ಟಿ ಅವರು ಈಗ ಹೊಸ ಕಾರ್‌ ತಗೊಂಡು ಸುದ್ದಿಯಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಒಂದು ಕಾರ್‌ ಖರೀದಿ ಮಾಡಿದ್ದರು.
 

kantara movie actor rishab shetty has bought new toyota vellfire car

ಈಗ ಅವರು ಕೋಟಿ ರೂಪಾಯಿ ಬೆಲೆಬಾಳುವ ಕಾರ್‌ ಖರೀದಿಸಿದ್ದಾರೆ. Toyota Vellfire ಎನ್ನುವ ಕಾರ್‌ ಖರೀದಿ ಮಾಡಿದ್ದಾರೆ, ಇದಕ್ಕೆ ಒಂದೂವರೆ ಕೋಟಿ ರೂಪಾಯಿ ಎನ್ನಲಾಗಿದೆ.
 

kantara movie actor rishab shetty has bought new toyota vellfire car

ರಿಷಬ್‌ ಶೆಟ್ಟಿ ಅವರ ಮನೆಗೆ ಕಾರ್‌ ಡೆಲಿವರಿ ಕೊಟ್ಟಿದ್ದಾರೆ. ರಿಷಬ್‌ ಪತ್ನಿ ಪ್ರಗತಿ ಶೆಟ್ಟಿ, ಮಗ ರಣ್‌ವಿಥ್‌ ಶೆಟ್ಟಿ, ಮಗಳು ರಾಧ್ಯಾ ಶೆಟ್ಟಿ ಕಾರ್‌ನ್ನು ಬರಮಾಡಿಕೊಂಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.
 


ʼಕಿರಿಕ್‌ ಪಾರ್ಟಿʼ ಸಿನಿಮಾಕ್ಕೆ ನಿರ್ದೇಶನ ಮಾಡಿ, ಬಂಪರ್‌ ಬೆಳೆ ತೆಗೆದಿದ್ದ ರಿಷಬ್‌ ಆ ನಂತರ ಕೆಲವು ಸೋಲುಗಳನ್ನು ನೋಡಿದರೆ. ಆದರೆ ಅವರ ಊರಿನ, ಪ್ರದೇಶದ ಭೂತಾರಾಧನೆ, ಕೋಲದ ಕಥೆಯನ್ನು ತೆರೆ ಮೇಲೆ ತಂದು ಗೆದ್ದರು.

ಈಗ ಕಾಂತಾರ ಭಾಗ 1 ಸಿನಿಮಾ ನೋಡಲು ವೀಕ್ಷಕರು ಕಾತುರದಲ್ಲಿದ್ದಾರೆ. ರಿಷಬ್‌ ಶೆಟ್ಟಿ ಅವರ ಸಿನಿಮಾ ಮುಂಬರುವ ಅಕ್ಟೋಬರ್‌ನಲ್ಲಿ ರಿಲೀಸ್‌ ಆಗಲಿದೆ. 

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ʼಕಾಂತಾರʼ ಜೊತೆಗೆ ಬೇರೆ ಬೇರೆ ಸಿನಿಮಾಗಳ ನಿರ್ಮಾಣದಲ್ಲಿಯೂ ಬ್ಯುಸಿ ಆಗಿದ್ದಾರೆ. ಹೀಗಾಗಿ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. 

Latest Videos

vuukle one pixel image
click me!