ಮೆಗಾಸ್ಟಾರ್ ಚಿರಂಜೀವಿ ತುಂಬಾ ಕಷ್ಟಪಟ್ಟು ಇಂಡಸ್ಟ್ರಿಯಲ್ಲಿ ಮೇಲೆ ಬಂದಿದ್ದಾರೆ. ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೆ ಹಂತ ಹಂತವಾಗಿ, ಒಂದೊಂದು ಮೆಟ್ಟಿಲು ಏರುತ್ತಾ ಈ ಮಟ್ಟಕ್ಕೆ ತಲುಪಿದ್ದಾರೆ. ತಮ್ಮ ಟ್ಯಾಲೆಂಟ್‌ನಿಂದ, ಡ್ಯಾನ್ಸ್ ಮೂಮೆಂಟ್ಸ್‌ನಿಂದ, ನಟನೆಯಿಂದ ಕೋಟ್ಯಾಂತರ ಹೃದಯಗಳನ್ನು ಗೆದ್ದಿದ್ದಾರೆ. ಇಂಡಸ್ಟ್ರಿಯಲ್ಲಿ ತಾನು ಬೆಳೆಯುವುದರ ಜೊತೆಗೆ ಎಷ್ಟೋ ಹೊಸ ತಾರೆಯರಿಗೆ ಮಾದರಿಯಾಗಿದ್ದಾರೆ ಮೆಗಾಸ್ಟಾರ್. ಇನ್ನೂ ಅನೇಕರ ಬೆಳವಣಿಗೆಗೆ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಕಾರಣರಾಗಿದ್ದಾರೆ. ತಮ್ಮ ಕುಟುಂಬದಿಂದಲೂ ಸುಮಾರು ಹತ್ತು ಜನ ನಟ ನಟಿಯರನ್ನು ಇಂಡಸ್ಟ್ರಿಗೆ ಪರಿಚಯಿಸಿ, ತಿರುಗಿ ನೋಡದ ಮೆಗಾ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ ಚಿರು.