ನಟ ಬಾಲಕೃಷ್ಣಗೆ ಅವರ ಪತ್ನಿ ಮುಂದೆಯೇ ಮುತ್ತಿಕ್ಕಿ ಐ ಲವ್ಯೂ ಎಂದಿದ್ದ ಹಿರೋಯಿನ್

First Published | Nov 27, 2024, 12:22 PM IST

ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರಿಗೆ ಸಿಕ್ಕಾಪಟ್ಟೆ ಮಹಿಳಾ ಅಭಿಮಾನಿಗಳು, ಜನಸಾಮಾನ್ಯರಲ್ಲದೇ ಹಿರೋಯಿನ್‌ಗಳು ನಂದಮೂರಿ ಬಾಲಕೃಷ್ಣ ಅವರನ್ನು ಬಹಳ ಇಷ್ಟಪಡುತ್ತಿದ್ದರು. ಹೀಗಿರುವಾಗ ಬಾಲಕೃಷ್ಣ ಅವರ ಪತ್ನಿ ವಸುಂಧರಾ ಅವರ ಮುಂದೆಯೇ ನಟಿಯೊಬ್ಬರು ನಂದಮೂರಿ ಬಾಲಕೃಷ್ಣ ಅವರಿಗೆ ಮುತ್ತಿಕ್ಕಿದ್ದರಂತೆ ಅಲ್ಲದೇ ಐ ಲವ್‌ ಯೂ ಅಂತಾನೂ ಹೇಳಿದ್ದರಂತೆ ಆ ನಟಿ ಯಾರು ಅಂತ ಇಲ್ಲಿದೆ ಡಿಟೇಲ್‌...

ಟಾಲಿವುಡ್ ಹಿರಿಯ ನಟ ಅಭಿಮಾನಿಗಳ ಪ್ರೀತಿಯ ಬಾಲಯ್ಯಗೆ ಸಿಕ್ಕಾಪಟ್ಟೆ ಲೇಡಿ ಫ್ಯಾನ್ಸ್‌, ಭಾರಿ ತೆಲುಗು ರಾಜ್ಯಗಳು ಮಾತ್ರವಲ್ಲದೇ ಕರ್ನಾಟಕದಲ್ಲೂ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನೇರ ನಿಷ್ಠುರ ಆಗಿರುವ ನಟ ಬಾಲಯ್ಯ ಅವರನ್ನು ಕಂಡರೆ ಪ್ರೀತಿಯ ಜೊತೆಗೆ ಭಯಪಡುವವರು ಇದ್ದಾರೆ. ಅವರ ಒಳ್ಳೆಯತನ ತಿಳಿದವರು ಅವರನ್ನು ಬಹಳ ಇಷ್ಟಪಡುತ್ತಾರೆ. ಸಿನಿಮಾಗಳಲ್ಲಿ ಅಥವಾ ಬೇರೆಡೆ ಅವರು ನಿಜವಾಗಿಯೂ ಸಿಂಹದಂತೆ ಇರುತ್ತಾರೆ. ಹಾಗೆಯೇ ಗೌರವಯುತವಾಗಿ ಇರುತ್ತಾರೆ. ಆದರೆ ಬಾಲಯ್ಯ ಬಾಬು ಅವರ ಪತ್ನಿ ವಸುಂಧರಾ ದೇವಿ ಬಳಿ ಮಾತ್ರ ತುಂಬಾ ಮೃದುವಾಗಿ ಇರುತ್ತಾರಂತೆ. ಪತ್ನಿಯನ್ನು ಗೌರವಿಸುವುದು, ಅವರ ಮಾತಿಗೆ ಮೌಲ್ಯ ನೀಡುವುದು, ಹೀಗೆ ಪ್ರತಿಯೊಂದು ವಿಷಯದಲ್ಲೂ ಸೀನಿಯರ್‌ ಎನ್‌ಟಿಆರ್ ರಂತೆಯೇ ಬಾಲಯ್ಯ ಕೂಡ ನಡೆದುಕೊಳ್ಳುತ್ತಾರಂತೆ. 

ಇಂತಹ ನಟ ಬಾಲಕೃಷ್ಣ ಅನೇಕ ನಟಿಯರ ಜೊತೆ ನಟಿಸಿದ್ದಾರೆ, ಆದರೆ ಎಲ್ಲರನ್ನೂ ಗೌರವದಿಂದ ನೋಡುತ್ತಾರೆ. ಆದರೆ ಒಬ್ಬ ನಟಿ ಮಾತ್ರ ಬಾಲಕೃಷ್ಣಗೆ ಅವರ ಪತ್ನಿ ವಸುಂಧರಾ ಮುಂದೆಯೇ  ಮುತ್ತು ಕೊಟ್ಟಿದ್ದಾರಂತೆ. ಅಷ್ಟೇ ಅಲ್ಲ, ಐ ಲವ್ ಯೂ ಕೂಡ ಹೇಳಿದ್ದಾರಂತೆ.

ವಿಷಯ ಏನೆಂದರೆ..? ಬಾಲಕೃಷ್ಣ ಅಂದ್ರೆ ಇಂಡಸ್ಟ್ರಿಯಲ್ಲಿ ಇಷ್ಟಪಡದವರು ಯಾರೂ ಇಲ್ಲ. ಅವರನ್ನು ಟೀಕಿಸುವವರನ್ನೂ ಕೂಡ ಅವರು ನಗುಮುಖದಿಂದಲೇ ಮಾತನಾಡಿಸುತ್ತಾರೆ ಬಾಲಯ್ಯ. ನಟಿಯರ ಜೊತೆ ಅವರ ಒಡನಾಟದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. 

Tap to resize

ತಮ್ಮ ವಿರೋಧಿ ತಂಡದಲ್ಲಿರುವ ರೋಜಾರಂತಹ ನಟಿಯರನ್ನು ಕೂಡ ಬಾಲಯ್ಯ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ. ಅನೇಕ ತಾರೆಯರು ಬಾಲಯ್ಯ ಜೊತೆ ಸಿನಿಮಾ ಅಂದ್ರೆ ಸಂತೋಷಪಡುತ್ತಾರೆ. ಅವರ ಜೊತೆ ಕೆಲಸ ಮಾಡುವುದನ್ನು ಗೌರವ ಎಂದು ಭಾವಿಸುತ್ತಾರೆ. ಆದರೆ ಬಾಲಯ್ಯ ಜೊತೆ ಸಲುಗೆಯಿಂದ ಮಾತನಾಡುವ ಧೈರ್ಯ ಮಾತ್ರ ತುಂಬಾ ಕಡಿಮೆ ನಟಿಯರಿಗೆ ಇದೆ. ಆ ಸಲುಗೆಯಿಂದಲೇ ಕೆಲವೊಮ್ಮೆ ಬಾಲಯ್ಯ ಮುಜುಗರಕ್ಕೆ ಒಳಗಾಗಿದ್ದಾರಂತೆ. ಬಾಲಕೃಷ್ಣ ಜೊತೆ ತುಂಬಾ ಕ್ಲೋಸ್ ಆಗಿರುವ ಒಬ್ಬ ನಟಿ ಅವರ ಪತ್ನಿ ವಸುಂಧರಾ ದೇವಿ ಮುಂದೆಯೇ ನಟನನ್ನು ಮುಜುಗರಕ್ಕೀಡು ಮಾಡಲು ಪ್ರಯತ್ನಿಸಿದ್ದಾರಂತೆ. 

ಚಿತ್ರೀಕರಣದಲ್ಲಿ ಸರಸ ಸನ್ನಿವೇಶ ನಿಜವೋ ಸುಳ್ಳೋ ಗೊತ್ತಿಲ್ಲ, ಆದರೆ ಬಾಲಯ್ಯ ಜೊತೆ ಅನೇಕ ನಟಿಯರು ನಿಜವಾಗಿಯೂ ತುಂಬಾ ಕ್ಲೋಸ್ ಆಗಿದ್ದರಂತೆ. ಅದರಲ್ಲಿ ರಮ್ಯಾ ಕೃಷ್ಣ ಸ್ವಲ್ಪ ಹೆಚ್ಚು ಕ್ಲೋಸ್ ಆಗಿದ್ದರಂತೆ. ಅವರು ನಟ ಬಾಲಯ್ಯರನ್ನು ಸರಸದ ಮಾತುಗಳಿಂದ ಕಾಲೆಳೆಯುತ್ತಿದ್ದರಂತೆ. ಒಮ್ಮೆ ಚಿತ್ರೀಕರಣದ ಸಮಯದಲ್ಲಿ ಬಾಲಕೃಷ್ಣ ಪತ್ನಿ ವಸುಂಧರಾ ಬಂದಿದ್ದರಂತೆ. ಅವರು ಬರುವುದನ್ನು ನೋಡಿದ ರಮ್ಯಾ ಕೃಷ್ಣ ಚಿತ್ರೀಕರಣದ ಸೆಟಲ್ಲೇ ಬಾಲಯ್ಯಗೆ ಮುತ್ತು ಕೊಟ್ಟು ಐ ಲವ್ ಯೂ ಅಂದರಂತೆ. 

ಇದರಿಂದ ನಟ ಹಾಗೂ ಪತ್ನಿ ವಸುಂಧರ ಅವರು ಆಶ್ಚರ್ಯಚಕಿತರಾದರಂತೆ. ಆದರೆ ಇದೆಲ್ಲ ಅವರು ತಮಾಷೆಗೆ ಮಾಡಿದ್ದು ಎಂದು ತಿಳಿದುಕೊಂಡ ವಸುಂಧರಾ ಕೂಡ ಲೈಟ್ ಆಗಿ ತೆಗೆದುಕೊಂಡರಂತೆ.. ಬಾಲಯ್ಯ ಮಾತ್ರ ತಾನು ತುಂಬಾ ಮುಜುಗರಕ್ಕೆ ಒಳಗಾದೆ ಎಂದು ರಮ್ಯಾ ಕೃಷ್ಣ ಜೊತೆ ನಕ್ಕರಂತೆ. ಈ ಸರಸ ಸನ್ನಿವೇಶದ ಬಗ್ಗೆ ವಿವಿಧ ಸುದ್ದಿಗಳು ವೈರಲ್ ಆಗಿದ್ದವು. ಬಾಲಯ್ಯ ಬಾಬುಗೆ ಪ್ಲೈಯಿಂಗ್ ಕಿಸ್ ಕೊಟ್ಟ ಇನ್ನೊಬ್ಬ ನಟಿ ಇದ್ದಾರೆ. ಆ ನಟಿ ರಾಧಾ. ಇತ್ತೀಚೆಗೆ ಅವರು ನಟ ಅಲಿ ಜೊತೆ ಒಂದು ಕಾರ್ಯಕ್ರಮಕ್ಕೆ ಬಂದಿದ್ದರು. ಮಾತಿನ ನಡುವೆ.. ಎಷ್ಟೇ ನಟರು ಬಂದರೂ.. ಬಾಲಯ್ಯ.. ಎಷ್ಟೇ ಗ್ಲಾಮರ್ ಹುಡುಗರಿದ್ದರೂ.. ಬಾಲಯ್ಯ ತುಂಬಾ ಸ್ಪೆಷಲ್ ಎಂದಿದ್ದರು ರಾಧಾ. ಬಾಲಯ್ಯ ಅಂದ್ರೆ ತಮಗೆ ಇಷ್ಟ ಎಂದು ಹೇಳುತ್ತಾ ಅವರಿಗೆ ಪ್ಲೈಯಿಂಗ್ ಕಿಸ್ ಕೊಟ್ಟಿದ್ದರು ರಾಧಾ. ಹೀಗೆ ಅನೇಕ ನಟಿಯರಿಗೆ ಬಾಲಕೃಷ್ಣ ಅಂದ್ರೆ ತುಂಬಾ ಇಷ್ಟ. 

ನಟ ಬಾಲಯ್ಯ ಸಿನಿಮಾ ಹಾಗೂ ರಾಜಕೀಯದಲ್ಲಿ ಯಶಸ್ಸನ್ನು ಗಳಿಸುತ್ತಿದ್ದಾರೆ. ನಟನಾಗಿ, ಶಾಸಕನಾಗಿ.. ಹ್ಯಾಟ್ರಿಕ್ ಹೊಡೆದು ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ ಬಾಲಯ್ಯ. ಹಿಂದೂಪುರ ಶಾಸಕರಾಗಿ ಸತತ ಮೂರನೇ ಬಾರಿಗೆ ಅಖಂಡ ವಿಜಯ ಗಳಿಸಿದ್ದಾರೆ ಬಾಲಕೃಷ್ಣ. ನಟನಾಗಿಯೂ ಕೂಡ ಮೂರು ಸಿನಿಮಾಗಳು ಸತತವಾಗಿ ಯಶಸ್ಸು ಗಳಿಸಿ ಹ್ಯಾಟ್ರಿಕ್ ಹೀರೋ ಎನಿಸಿದ್ದಾರೆ. ಸಿನಿಮಾ ವಿಷಯಕ್ಕೆ ಬಂದರೆ.. ಪ್ರಸ್ತುತ ಬಾಲಯ್ಯ ಬಾಬು ಬಾಬಿ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಡಾಕು ಮಹಾರಾಜ ಎಂಬ ಶೀರ್ಷಿಕೆಯನ್ನು ಘೋಷಿಸಲಾಗಿದೆ.  ಮೆಗಾ ನಿರ್ದೇಶಕ ಎಂದು ಹೆಸರು ವಾಸಿಯಾದ ಬಾಬಿ ಬಾಲಯ್ಯ ಅವರನ್ನು ವಿಭಿನ್ನವಾಗಿ ತೋರಿಸಲು ಪ್ರಯತ್ನಿಸುತ್ತಿದ್ದಾರಂತೆ. ಈ ಸಿನಿಮಾ ನಂತರ ಸತತ ಸಿನಿಮಾಗಳನ್ನು ಅವರು ಸಾಲಿನಲ್ಲಿಟ್ಟಿದ್ದಾರಂತೆ. ಅದರಲ್ಲಿ ಬೋಯಪಾಟಿ ಶ್ರೀನು ಜೊತೆ ಅಖಂಡ2 ಚಿತ್ರವನ್ನು ಈಗಾಗಲೇ ಘೋಷಿಸಲಾಗಿದೆ. ಇನ್ನೂ ಕೆಲವು ಕಥೆಗಳನ್ನು ಬಾಲಕೃಷ್ಣ ಹಿಡಿದಿಟ್ಟುಕೊಂಡಿದ್ದಾರಂತೆ. 

Latest Videos

click me!