ಚಿಕ್ಕ ವಯಸ್ಸಿನಿಂದಲೂ ರಂಗಭೂಮಿ ಮತ್ತು ಸಿನಿಮಾದತ್ತ ಆಕರ್ಷಿತರಾದ ಅವರು ಮೈಸೂರಿನಲ್ಲಿ ಮತ್ತು ನಂತರ ಬೆಂಗಳೂರಿನಲ್ಲೂ ತಮ್ಮನ್ನು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಂಗಭೂಮಿಯ ಹಿನ್ನೆಲೆಯುಳ್ಳ ಕಲಾವಿದರಾಗಿದ್ದರಿಂದ ನಟನೆ ಇವರಿಗೆ ಕರಗತ.
ಇವರ ರಂಗಭೂಮಿಯ ಆಸ್ತಕಿಯು ಲಂಡನ್‌ನ ಮೆರ್ಮೇಡ್ ಥಿಯೇಟರ್‌ನಲ್ಲಿ ನಟನೆಯಲ್ಲಿ ತರಬೇತಿ ಪಡೆಯಲು ಅವಿನಾಶ್ ಅವರನ್ನು ಪ್ರೇರೇಪಿಸಿತು.ಇತ್ತೀಚೆಗೆ ಅವರು ಪತ್ನಿ ಹಾಗೂ ಮಗನೊಂದಿಗೆ ವಿದೇಶಕ್ಕೆ ಭೇಟಿ ನೀಡಿರುವ ಅನೇಕ ಫೋಟೋಗಳನ್ನು ಪತ್ನಿ ಮಾಳವಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಜಿ.ವಿ. ಅಯ್ಯರ್ ಅವರ ಮಧ್ವಾಚಾರ್ಯದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅವಿನಾಶ್ ಅಧಿಕೃತವಾಗಿ ನಟನೆಗೆ ಎಂಟ್ರಿ ಕೊಟ್ಟರು. ಎಂಥದ್ದೇ ಪಾತ್ರವಾದರೂ ಜೀವ ತುಂಬುವ ಅವಿನಾಶ್, ಹೆಚ್ಚಾಗಿ ನೆಗಟಿವ್ ರೋಲ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ.
ಕನ್ನಡ, ತೆಲುಗು, ತಮಿಳು, ಚಿತ್ರ ರಂಗದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಗುರುತಿಸಿಕೊಂಡಿರುವ ಅವಿನಾಶ್ ಅವರು ಕೆ.ಬಾಲಚಂದರ್, ಗಿರೀಶ್ ಕಾಸರವಳ್ಳಿ, ಟಿ.ಎನ್.ಸೀತಾರಾಮ್, ಎ.ಆರ್.ಮುರುಗದಾಸ್, ಪುರಿ ಜಗನ್ನಾಥ್, ಪಿ.ವಾಸು, ವೆಟ್ರಿಮಾರನ್, ವೆಟ್ರಿಮಾರನ್, ಸುಸೀಂತಿರನ್, ಸೂರಿ, ಗೌತಮ್ ವಾಸುದೇವ್ ಮೆನನ್ ಮತ್ತು ಟಿ.ಎಸ್.ನಾಗಾಭರಣ ಮುಂತಾದ ಇನ್ನೂರಕ್ಕೂ ಹೆಚ್ಚು ನಿರ್ದೇಶಕರೊಂದಿಗೆ ಕೆಲಸ ಮಾಡಿದ ಕೀರ್ತಿ ಹೊಂದಿದ್ದಾರೆ.
ಇತ್ತೀಚಿಗೆ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದಾರೆ.
ಪೋಷಕ ಪಾತ್ರಗಳ ಜೊತೆ ನೆಗೆಟಿವ್ ರೋಲ್‌ಗಳು ಕಾಣಿಸಿಕೊಳ್ಳುವ ಅವಿನಾಶ್ ಅವರಿಗೆ ಒಲಿದಿರುವ ಪ್ರಶಸ್ತಿ ಪುರಸ್ಕಾರಗಳು ಲಕ್ಕೆವಿಲ್ಲದಷ್ಟು. ಅದರಲ್ಲಿ ಮತದಾನ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಆಪ್ತರಕ್ಷಕ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ, ಪೃಥ್ವಿ ಚಿತ್ರಕ್ಕೆ ಸುವರ್ಣ ಫಿಲ್ಮ್ ಪ್ರಶಸ್ತಿ ಪ್ರಮುಖವಾದವು.