ಹೊಂಬಾಳೆ ಫಿಲ್ಮ್ಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಲಾರ್ ಸಿನಿಮಾ ಸಿದ್ಧವಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ, ಜಗ್ಗೇಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ರಾಘವೇಂದ್ರ ಸ್ಟೋರ್ಸ್, ಯುವರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಅವರ ಹೊಸ ಸಿನಿಮಾ ಹಾಗೂ ಸೂರರೈ ಪೊಟ್ರು ಸಿನಿಮಾ ಖ್ಯಾತಿಯ ಸುಧಾ ಕೊಂಗಾರ ಅವರ ಸಿನಿಮಾವಿದೆ.